ಕೋಟಿ ಕಂಠ ಸಮೂಹ ಗೀತ ಗಾಯನ

0
94

ಕಲಬುರಗಿ: ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಲಬುರಗಿ ಹಾಗೂ ಕಲಬುರಗಿ ಕೇಂದ್ರ ಕಾರಾಗೃಹದ ಸಂಯುಕ್ತಾಶ್ರಯದಲ್ಲಿ ಅಧಿಕಾರಿ/ಸಿಬ್ಬಂದಿಗಳು ಹಾಗೂ ಬಂದಿಗಳಿಗೆ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ 67 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕೋಟಿ ಕಂಠ ಗೀತ ಗಾಯನ ಕಾರ್ಯಕ್ರಮವನ್ನು ಅಯೋಜಿಸಲಾಯಿತು.

ಕನ್ನಡಕ್ಕಾಗಿ ಕೈ ಎತ್ತು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬಂತೆ ಈ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕøತಿ ಪ್ರತಿನಿಧಿಯಾಗಿ  ಭದ್ರಿನಾಥ್ ಮುಡುಬಿ ಹಾಗೂ ಮಾಲಾಶ್ರೀ ಮುಡುಬಿ ಆಗಮಿಸಿ ಅಧಿಕಾರಿ/ಸಿಬ್ಬಂದಿಗಳು ಹಾಗೂ ಬಂದಿಗಳಿಗೆ ಕೋಟಿ ಕಂಠ ಸಮೂಹ ಗೀತ ಗಾಯನ ಕಾರ್ಯಕ್ರಮವನ್ನು ಅತ್ಯಂತ ಅದ್ಭುತವಾಗಿ ಪ್ರತಿಯೊಬ್ಬರ ಮನ ಮುಟ್ಟುವಂತೆ ಅಮೋಘ ಕಂಠ ಮೊಳಗಿಸಿ ಕಾರ್ಯಕ್ರಮವನ್ನು ಎಲ್ಲಾ ಅಧಿಕಾರಿ/ಸಿಬ್ಬಂದಿಗಳು ಹಾಗೂ ಬಂದಿಗಳನ್ನು ಗೀತ ಗಾಯನ ಸಮೂಹದಲ್ಲಿ ಮೋಳಗಿಸಿ ಅವರೋಟ್ಟಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

Contact Your\'s Advertisement; 9902492681

ಕಲಬುರಗಿ ಕೇಂದ್ರ ಕಾರಾಗೃಹದ ಅಧಿಕ್ಷಕರಾದ ಬಿ.ಎಂ. ಕೋಟ್ರೇಶ್ ರವರು ಕನ್ನಡದ ಸಂಕಲ್ಪ ವಿಧಿಯನ್ನು ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಹಾಗೂ ಬಂದಿಗಳಿಗೆ ಬೋಧಿಸಿದರು. ಪ್ರಾಸ್ತಾವಿಕವಾಗಿ ಸಹಾಯಕ ಅಧಿಕ್ಷಕರಾದ ಶ್ರೀ ವಿ.ಕೃಷ್ಣಮೂರ್ತಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಸಹಾಯಕ ಅಧೀಕ್ಷಕರಾದ ಹುಸಾನಿ ಪೀರ್, ಕೆ.ಎಸ್.ಐ.ಎಸ್.ಎಫ್ ಅಧಿಕಾರಿಯಾದ ಕೆ. ಮಾರನೂರ, ಬಾಬು ಗುತ್ತೇದಾರ್ ಜೈಲರ್‍ಗಳಾದ ಸೈನಾಜ್ ಎಂ.ನಿಗೇವಾನ್ ಅಶೋಕ ಹೊಸಮನಿ, ಅರ್ಜುನಸಿಂಗ್ ಚವ್ಹಾಣ ಹಾಗೂ ಕಾರಾಗೃಹದ ಅಧಿಕಾರಿ/ಸಿಬ್ಬಂದಿ ವರ್ಗದವರು ಭಾಗವಹಿಸಿದರು.

ಕಾರ್ಯಕ್ರಮದ ಸ್ವಾಗತ & ನಿರೂಪಣೆಯನ್ನು ಈ ಸಂಸ್ಥೆಯ ಶಿಕ್ಷಕರಾದ ಶ್ರೀ ನಾಗಾರಾಜ ಮುಲಗೆ ನೇರವೆರಿಸಿದರು. ಈ ಕಾರ್ಯಕ್ರಮದಲ್ಲಿ 150 ಜನ ಅಧಿಕಾರಿ/ಸಿಬ್ಬಂದಿ ವರ್ಗದವರು ಹಾಗೂ 800 ಜನ ಬಂದಿಗಳು ಸಮೂಹಿಕವಾಗಿ ಕರ್ನಾಟಕ ಸರ್ಕಾರದ ನಿರ್ದೇಶನದಂತೆ ಆಯ್ಕೆ ಮಾಡಿದ 6 ಗೀತೆಗಳನ್ನು ಹಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here