ಚಿಂಚೀಳಿ: ಇಂದು ತಾಲ್ಲೂಕಿನ ಚಿಮ್ಮಾಇದಲ್ಲಾಯಿ ಗ್ರಾಮದಲ್ಇಲ ನಾಗರಪಂಚಮಿ ಹಬ್ಬ ನಿಮಿತ್ತ, ಹುತ್ತಕ್ಕೆ ಹಾಲು ಮತ್ತು ತುಪ್ಪವನ್ನು ಸುರಿದು ಮೌಢ್ಯ ಆಚರಿಸಬೇಡಿ ಎಂದು ಬಿವಿಎಸ್ ತಾಲ್ಲೂಕು ಅಧ್ಯಕ್ಷ ಯಲ್ಲಾಲಿಂಗ ದಂಡಿನ್ ಅವರು ಕರೆ ನೀಡಿದರು.
ಇಲ್ಲಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಾವು ಒಂದು ಸರೀಸೃಪ. ಹಾವಿಗೆ ಅದರಲ್ಲೂ ನಾಗರಹಾವಿಗೆ ಮಾತ್ರ ಹೆಡೆ ಇರುತ್ತೆ. ಹಾವಿ ನ ಹೆಡೆಯಲ್ಲಿ ಯಾವ ನಾಗಮಣಿಯೂ ಇರುವುದಿಲ್ಲ. ಹಾವಿನ ದ್ವೇಷ 12 ವರ್ಷ ಎಂಬುದು ಅಪ್ಪಟ ಸುಳ್ಳು. ಹಾವು ಅತ್ಯಂತ ಅಂಜುಬುರುಕ ಪ್ರಾಣಿ. ಅದರ ಆಹಾರ ಇಲಿ, ಕಪ್ಪೆ, ಹುಳ ಹುಪ್ಪಟಗಳು. ಹಾವು ಯಾವ ಮಾತ್ರಕ್ಕೂ ಹಾಲು ಕುಡಿಯುವುದಿಲ್ಲ. ಹಾವುಗಳಿಗೆ ಕಿವಿಗಳಿಲ್ಲ ಇದ್ದರೂ ಅವು ಒಳಕಿವಿಗಳು ಅಷ್ಟೇ. ಅಂದಮೇಲೆ ಅದಕ್ಕೆ ನಾದ ಕೇಳುವುದೆಲ್ಲಿ. ಕಣ್ಣುಗಳ ಮೂಲಕ ನೋಡಿ ನಾವು ಕೈಕಾಲು ಆಡಿಸಿದಂತೆ ಅದೂ ಸಹಾ ಹೆಡೆ ಆಡಿಸುತ್ತದೆ. ಹಾವಿಗೆ ಹುತ್ತ ಕಟ್ಟಲು ಬರುವುದೇ ಇಲ್ಲ. ಗೆದ್ದಲು ಕಟ್ಟಿದ ಹುತ್ತದಲ್ಲಿ ಹಾವು ವಾಸಿಸುತ್ತದೆ ಎಂದು ತಿಳಿಸಿದರು.
ಹಾವು ರೈತನ ಮಿತ್ರ. ಬೆಳೆ ಹಾಳು ಮಾಡುವ ಇಲಿ ಮತ್ತು ಹುಳಗಳನ್ನು ತಿಂದು ಬೆಳೆ ನಾಶವನ್ನು ಉಳಿಸುತ್ತದೆ. ನಮಗೆ ತಿಳಿದಿರುವ ಹಾಗೆ 95% ರಷ್ಟು ಹಾವುಗಳಿಗೆ ವಿಷವೇ ಇರುವುದಿಲ್ಲ. ಹಾವಿಗೆ ತೊಂದರೆ ಕೊಡದಿದ್ದರೆ ಯಾರನ್ನೂ ಕಚ್ಚುವುದಿಲ್ಲ. ಇಷ್ಟೆಲ್ಲಾ ತಿಳಿದೂ ಹಾವಿನ ಹೆಸರಲ್ಲಿ ಹುತ್ತಕ್ಕೆ ಹಾಲು, ತುಪ್ಪ ಸುರಿದು ಹಾಳು ಮಾಡುವುದಕ್ಕಿಂತ ಬಡಮಕ್ಕಳಿಗೆ ಹಾಲು ಕುಡಿಯಲು ಕೊಡಿ. ಮೌಢ್ಯ ತೊರೆದು ವೈಜ್ಞಾನಿಕವಾಗಿ ಆಲೋಚಿಸಿ ಎಂದು ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಅಕ್ಷಯಕುಮಾರ ಬೂಮ್ನಹಳಿ ಉಮೇಶ ಯಾಕಪುರ ಸಂತೋಷ ಜಾಬೀನ್ ವಿಜಯಕುಮಾರ ಸುನೀಲ್ ಸಲಗರ ಸೇರಿದಂತೆ ಮುಂತಾದವರು ಇದ್ದರು.