ರೈತರ ಬೇಡಿಕೆ ಈಡೇರಿಸಲು ಪ್ರಾಂತ ರೈತ ಸಂಘ ಪ್ರತಿಭಟನೆ

0
24

ಸುರಪುರ: ರೈತರ ಮತ್ತು ದಲಿತ,ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಗಿದೆ.ಬುಧವಾರ ನಡೆದ ಪ್ರತಿಭಟನೆಯ ಅಂಗವಾಗಿ ನಗರದ ಡಾ:ಬಿ.ಆರ್ ಅಂಬೇಡ್ಕರ್ ವೃತ್ತ ದಿಂದ ಮಹಾತ್ಮ ಗಾಂಧಿ ವೃತ್ತದ ಮೂಲಕ ದರಬಾರ ರಸ್ತೆ ಮಾರ್ಗವಾಗಿ ತಹಸೀಲ್ದಾರ್ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ನಂತರ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ಮುಖಂಡರು,ದೇಶದಲ್ಲಿನ ರೈತರನ್ನು ಸರಕಾರಗಳು ಸಂಪೂರ್ಣವಾಗಿ ಕಡೆಗಣಿಸಿವೆ,ರೈತರ ಬೆಳೆಗೆ ಉತ್ತಮವಾದ ಧಾರಣೆ ಇಲ್ಲ,ಕೃಷಿಗೆ ಬೇಕಾದ ವಸ್ತುಗಳ ದರ ಗಗನಕ್ಕೇರಿದೆ ಇದರಿಂದ ರೈತರು ಕೃಷಿ ಮಾಡುವುದೇ ಕಷ್ಟಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Contact Your\'s Advertisement; 9902492681

ರೈತರಿಗೆ ಮಳೆ ಹಾನಿಯ ಪರಿಹಾರ ಕೂಡಲೇ ಬಿಡುಗಡೆ ಮಾಡಬೇಕು,ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆ ಸಮರ್ಪಕ ಜಾರಿಗೊಳಿಸಬೇಕು,ಎಪಿಎಮ್‍ಸಿಯಲ್ಲಿ ರೈತರ ಫಸಲಿಗೆ 2 ಕೆ.ಜಿ ಶೂಟ್ ಮುರಿಯುವುದನ್ನು ನಿಲ್ಲಿಸಬೇಕು,ತೋಟಗಾರಿಕೆ ಇಲಾಖೆಯಡಿ ರೈತರು ನಿರ್ಮಿಸಿರುವ ಕೃಷಿ ಹೊಂಡಗಳ ಹಣ ಮಂಜೂರು ಮಾಡಬೇಖು,ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಕೂಲಿ ಹಣ ಬಿಡುಗಡೆ ಮಾಡಬೇಕು ಎನ್ನುವುದು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿದರು.

ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಚನ್ನಪ್ಪ ಆನೆಗುಂದಿ,ತಾಲೂಕು ಅಧ್ಯಕ್ಷ ಧರ್ಮಣ್ಣ ದೊರಿ ಮುಖಂಡರಾದ ರಾಮಯ್ಯ ಆಲ್ಹಾಳ,ಸಿದ್ದು ನಾಯ್ಕೋಡಿ,ರಾಮನಗೌಡ ಗೂಗಲ್,ಕೃಷ್ಣಪ್ಪ ರುಕ್ಮಾಪುರ,ಮಲ್ಲಿಕಾರ್ಜುನ ದೊರಿ,ರಫಿಕ್ ಸುರಪುರ,ಯಂಕೋಬ ಮಾಲಿ ಪಾಟೀಲ್,ಮಲ್ಲನಗೌಡ ಮಾಲಿ ಪಾಟೀಲ್,ಮಲ್ಲಿಕಾರ್ಜುನ ಚನ್ನೂರ,ಮಲ್ಲಣ್ಣ ಚನ್ನೂರ,ಬಸನಗೌಡ ಮಾಲಿ ಪಾಟೀಲ್,ನಾಗಪ್ಪ ಸಗರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here