ಸುರಪುರ: ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ ನಾರಾಯಣಗೌಡ ಬಣ) ದಿಂದ ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣದಲ್ಲಿ 18ನೇ ವರ್ಷದ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಹಾಗೂ ಶ್ರೀ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಹವ್ಯಾಸಿ ಕಲಾವಿದರ ಸಂಘ ಸುರಪುರ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸುರಪುರ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಲಕ್ಷ್ಮೀಪುರ ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮವನ್ನು ಬಿಜೆಪಿ ಮುಖಂಡ ಹಣಮಂತ ನಾಯಕ (ಬಬ್ಲುಗೌಡ) ಉದ್ಘಾಟಿಸಿದರು,ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ) ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ವಿವಿಧ ರಂಗಗಳಲ್ಲಿ ಸಾಧನೆಗೈದ 11 ಜನ ಸಾಧಕರಾದ ಡಿವೈಎಸ್ಪಿ ಮಂಜುನಾಥ ಟಿ,ವೈದ್ಯಾಧಿಕಾರಿ ಡಾ:ವಿ.ಎಲ್ ಚೌಧರಿ,ಬಾಲಕರ ಕಾಲೇಜು ಉಪ ಪ್ರಾಂಶುಪಾಲ ಯಲ್ಲಪ್ಪ ಕಾಡ್ಲೂರ,ಪತ್ರಕರ್ತ ಮಲ್ಲು ಗುಳಗಿ,ಪರಶುರಾಮ ಮಲ್ಲಿಬಾವಿ,ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಅಮರಯ್ಯಸ್ವಾಮಿ ಜಾಲಿಬೆಂಚಿ,ಪ್ರಗತಿಪರ ರೈತ ಮುದಿಗೌಡ ಮಾಲಿಪಾಟೀಲ್,ಹಣಮಂತ್ರಾಯ ಬಿರಾದಾರ,ನಗನೂರ ಪಿಡಿಓ ಶ್ರೀಶೈಲ ಬಿ.ಹಳ್ಳಿ ಹಾಗೂ ತಬಲಾ ವಾದಕ ರಮೇಶ ಕುಲಕರ್ಣಿ ಇವರುಗಳಿಗೆ ಕುವೆಂಪು ಪ್ರಶಸ್ತಿ ಪ್ರದಾನ ಮಾಡಲಾಯಿತು.ಅಲ್ಲದೆ ವಿಶೇಷ ಸನ್ಮಾನಿತರನ್ನಾಗಿ ಅತ್ಯೂತ್ತಮ ತಾಲೂಕು ಆರೋಗ್ಯಾಧಿಕಾರಿ ಪ್ರಶಸ್ತಿ ಪಡೆದ ಡಾ:ಆರ್.ವಿ ನಾಯಕ,ಅಕಾಡಮಿ ಬಾಲಗೌರವ ಪ್ರಶಸ್ತಿ ಪಡೆದ ಕುಸುಮಾ ಅಯ್ಯಣ್ಣ ಬೋಯಿ,ಕೃಷಿ ಪಂಡೀತ ಡಾ:ಕಿರಣ ಜಕರಡ್ಡಿ,ಮುಖ್ಯ ಪೊಲೀಸ್ ಪೇದೆ ಸಾಯಬಣ್ಣ ಅಂಬ್ಲಿಹಾಳ,ರಾಷ್ಟ್ರೀಯ ಖೋ ಖೋ ಕ್ರೀಡಾ ಪ್ರಶಸ್ತಿ ಪುರಸ್ಕøತ ಮರೆಪ್ಪ ಗುರಿಕಾರ ದೇವರಗೋನಾಳ ಇವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಮಂಗಳವಾರ ಮದ್ಹ್ಯಾನ ನಡೆದ ಶಾಲಾ ಮಕ್ಕಳ ಸಾಂಸ್ಕøತಿಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಖುರೇಷಿ ಮೊಹಲ್ಲಾ ಶಾಲೆ ಮಕ್ಕಳಿಗೆ ಹಾಗೂ ದ್ವೀತಿಯ ಬಹುಮಾನ ಪಡೆದ ದರಬಾರ ಶಾಲಾ ಮಕ್ಕಳಿಗೆ ಸನ್ಮಾನಿಸಿ ಬಹುಮಾನ ವಿತರಣೆ ಮಾಡಲಾಯಿತು.
ನಂತರ ನಡೆದ ಸಾಂಸ್ಕøತಿ ಕಾರ್ಯಕ್ರಮದಲ್ಲಿ ಸರಿಗಮಪ ಖ್ಯಾತಿಯ ಸುಹಾನಾ ಸಯ್ಯದ್,ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಿತ್ರ ನಟ ಅಪ್ಪಣ್ಣ,ನಂದಿನಿ ಜಾಧವ್,ಚೈತ್ರಾ ಇವರುಗಳಿಂದ ಗಾಯನ ಹಾಗೂ ಹಾಸ್ಯ ಕಾರ್ಯಕ್ರಮ ನಡೆಸಲಾಯಿತು ಹಾಗೂ ಜೂ:ಉಪೇಂದ್ರ ಅವರ ಕಲಾ ತಂಡ ಮತ್ತು ಸ್ಥಳಿಯ ಸಗರ ನಾಡು ಸಂಗೀತ ಕಲಾವಿದರಿಂದ ಸಂಗೀತೋತ್ಸವ ಕಾರ್ಯಕ್ರಮ ಜರುಗಿತು.ಇದೇ ಸಂದರ್ಭದಲ್ಲಿ ಯೋಗಪಟು ಅವನಿ ಸುಳ್ಯ ನಡೆಸಿಕೊಟ್ಟ ಯೋಗ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಶಂಕರ ನಾಯಕ,ಬಲಭೀಮ ನಾಯಕ ಬೈರಿಮಡ್ಡಿ,ಮಲ್ಲಿಕಾರ್ಜುನ ಸತ್ಯಂಪೇಟೆ,ಟಿ.ಎನ್ ಭೀಮುನಾಯಕ,ನರಸಿಂಹಕಾಂತ ಪಂಚಮಗಿರಿ,ಮಾನಪ್ಪ ಚಳ್ಳಿಗಿಡ,ಶರಣು ನಾಯಕ ಬೈರಿಮಡ್ಡಿ,ಮಂಜುನಾಥ ನಾಯಕ ಬೈರಿಮಡ್ಡಿ,ರವಿ ನಾಯಕ ಬೈರಿಮಡ್ಡಿ ವೇದಿಕೆಯಲ್ಲಿದ್ದರು.ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ನೇತೃತ್ವ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು,ಉಪನ್ಯಾಸಕ ದೇವು ಹೆಬ್ಬಾಳ,ಖಾನಾಬಾಯಿ ಹೊಸಗೌಡ್ರ ನಿರೂಪಿಸಿದರು,ಮಲ್ಲಿಕಾರ್ಜುನ ಹಿರೇಮಠ ಪರಸನಹಳ್ಳಿ ಸ್ವಾಗತಿಸಿದರು,ಶ್ರೀಶೈಲ ಕಾಚಾಪುರ ವಂದಿಸಿದರು.ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಕರವೇ ಕಾರ್ಯಕರ್ತರು ಹಾಗೂ ನಗರದ ಅನೇಕ ಜನ ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.