ಸೇಡಂ: ತಾಲ್ಲೂಕಿನ ಮೊತ್ತಕಪಲ್ಲಿ ಗ್ರಾಮದಲ್ಲಿ ವಾಂತಿಭೇದಿ ಆಗುತ್ತಿರುವ ಹಿನ್ನೆಲೆ, ಇಂದು ಮುತ್ತಪ್ಪಲ್ಲಿ ಗ್ರಾಮಕ್ಕೆ ಮತಕ್ಷೇತ್ರದ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ್ ಭೇಟಿ ನೀಡಿ, ಗ್ರಾಮಸ್ಥರ ಆರೋಗ್ಯ ವಿಚಾರಿಸಿದರು.
ಬಿಸಿ ನೀರು ಸೇವಿಸುವ ಜೊತೆಗೆ ಸುತ್ತಮುತ್ತಲು ಸ್ವಚ್ಛತೆ ಕಾಪಾಡಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಿದರು. ಇದೇ ವೇಳೆ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಬೇಕು ಬ್ಲೀಚಿಂಗ್ ಪೌಡರ ಸಿಂಪಡಿಸಬೇಕು ಹಾಗೂ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಒತ್ತಾಯಿಸಿದರು