ಕಲಬುರಗಿ: ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಸ್ಕøತಿ, ಶಿಕ್ಷಣ, ಜ್ಞಾನ ಇವುಗಳ ಉನ್ನತಿಗಾಗಿ ನಿತ್ಯ ನಿರಂತರವಾಗಿ ಶ್ರಮಿಸುತ್ತಿರುವವರು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು. ಸಾಹಿತ್ಯ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆ ಕೊಟ್ಟ ಹಾರಕೂಡದ ಶ್ರೀಗಳು ಸರ್ವ ಜನಾಂಗದವರನ್ನು ಸಮಾನತೆಯಿಂದ ಕಾಣುತ್ತಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ಹಾರಕೂಡ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರ 60 ನೇ ವರ್ಷದ ಜನ್ಮದಿನದಂಗವಾಗಿ ಶುಕ್ರವಾರ ನಗರದ ತಾರಫೈಲ್ ಏರಿಯಾದಲ್ಲಿರುವ ಶ್ರೀ ಮಲ್ಲಿಕಾರ್ಜುನ ಖರ್ಗೆ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಸೇರಿದಂತೆ ವಿವಿಧ ಶಾಲಾ ಮಕ್ಕಳಿಗೆ ಮಹಾತ್ಮರ ಸಂದೇಶಗಳನ್ನೊಳಗೊಂಡ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು, ಶ್ರೀಮಠದ ಪೂಜ್ಯರು ತಮ್ಮ ಮಠದಲ್ಲಿ ನಿತ್ಯ ನಿರಂತರ ಅನ್ನ ದಾಸೋಹ ನಡೆಸುವ ಮೂಲಕ ನಾಡಿಗೆ ಅಪ್ರತಿಮ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀಗಳ ಆಶೀರ್ವಾದದಿಂದ ಅನೇಕ ಕಲಾವಿದರು, ಬರಹಗಾರರು ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ ಎಂದರು.
ಜಿಲ್ಲಾ ಕಸಾಪ ಕಾರ್ಯದರ್ಶಿ ಶಿವರಾಜ ಅಂಡಗಿ, ಪ್ರಮುಖರಾದ ಎಸ್.ಎಂ.ಪಟ್ಟಣಕರ್, ರವೀಂದ್ರಕುಮಾರ ಭಂಟನಳ್ಳಿ, ಶಿವಕುಮಾರ ಸಿ.ಎಚ್., ಹಣಮಂತ ಮರಡಿ, ಶಿವರಾಜ ಬಿ.ಪಾಟೀಲ, ಸೂರ್ಯಕಾಂತ ಎ.ಪಾಟೀಲ, ಶಾರದಾಬಾಯಿ ಮಸೂತಿ, ಪ್ರಕಾಶ ಬಿ.ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.