-
ಶಿವರಾಜ್ ಮೋತಿ ಹಟ್ಟಿ
ಸಿನಿಮಾ ಅಂದರೆ ಸಾಕು ಎಲ್ಲ ಭಾಗದಿಂದಲೂ ಹೆಚ್ಚಾಗಿ ಕೇಳಿ ಬರುವ ಹೆಸರು ಬೆಂಗಳೂರು-ಮೈಸೂರಿನ ಮಂಡ್ಯ ಕಡೆಯವರು, ಬಲ್ಯಾಡರು, ದುಡ್ಡಿದ್ದ ಶ್ರೀಮಂತರೆ ಸಿನಿಮಾ ಮಾಡುತ್ತಾರೆ,ಅದರಲ್ಲೂ ಕಿರುಚಿತ್ರವೆಂದರೆ ಸಾಕು ಬೆಂಗಳೂರು-ಮೈಸೂರು, ಹುಬ್ಬಳ್ಳಿ-ಧಾರವಾಡದ ಜನತೆಯೆ ಮುಂದು ಹಾಗೂ ಪರಿಣಿತರೂ ಸಹ ಹೌದು ಎಂಬ ಭಾವನೆ ನಮ್ಮ ಭಾಗದವರ ಸರ್ವೇಸಾಮಾನ್ಯವಾದ ಮನೋಭಾವನೆ.ಆದರೆ ಇದರ ಮಧ್ಯೆಯೂ ಪಕ್ಕಾ ಅಲೆಮಾರಿಯೊಬ್ಬನ ಪ್ರತಿಭೆಯೊಂದು ಯಾವ ರಂಗಭೂಮಿಯ ತರಬೇತಿಯಿಲ್ಲದೆ (ಒಂಥರಾ ಅಲೆಮಾರಿಗಳೆಲ್ಲ ಕಲಾವಿದರೇ) ಇವರು ಚಿಕ್ಕಂದಿನಲ್ಲಿ ಹಗಲುವೇಷಗಾರನಾಗಿ ತಂದೆಯ ಜೊತೆ ಹಗಲುವೇಷಗಾರಿಕೆಯ ಪಾತ್ರದ ಮುಖಾಂತರ ತಮಿಳುನಾಡು,ಆಂಧ್ರಪ್ರದೇಶ,ಕರ್ನಾಟಕದ ಕೆಲವು ಭಾಗದಲ್ಲಿಯೂ ಕುಟುಂಬದ ಜೀವನೋಪಯಕ್ಕಾಗಿ ಹಿರಿಯರಿಂದ ಬಂದ ಬಳುವಳಿಯ ವೃತ್ತಿಯಾದ ವೇಷಗಾರಿಕೆಯನ್ನು ಮಾಡಿರುತ್ತಾರೆ.
ಆ ಹಗಲುವೇಷಗಾರಿಕೆ ಇಂದು ಕೈ ಹಿಡಿದಿದೆ ಅಂತಲೇ ಎನ್ನಬಹುದು ಮತ್ತು ಸರಿಯಾದ ಉನ್ನತ ವಿದ್ಯಾಭ್ಯಾಸವನ್ನು ಕಲಿಯದ ಬಡ ಅಲೆಮಾರಿ ಕುಟುಂಬದ ಹಿನ್ನೆಲೆಯಲ್ಲಿ ಬಂದಿರುವ ಹಾಗೂ ಇಂದಿಗೂ ತನ್ನ ಬೇರೆ-ಬೇರೆ ವೃತ್ತಿ ಕಾಯಕದ ಜೊತೆಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ರಾಯಚೂರು ಜಿಲ್ಲೆಯ ಮಾನ್ವಿ (ನೂತನ ಸಿರವಾರ) ತಾಲ್ಲೂಕಿನ ಕವಿತಾಳ ಎಂಬ ಪಟ್ಟಣದ ವ್ಯಕ್ತಿಯಾದ ನನ್ನ ಸಂಬಂಧಿಯಾದ(ಮಾವ),ಮಾರ್ಗದರ್ಶಿ,
ಹಿತೈಷಿ,ಅಲೆಮಾರಿಗಳ ಸಾಮಾಜಿಕ ಹೋರಾಟಗಾರ, ಅಲೆಮಾರಿಗಳ ಕಾಳಜಿಯುಳ್ಳ ಅಪ್ಪಟ ಅಲೆಮಾರಿಗಳ ಭಾವಿನಾಯಕ,ಅಲೆಮಾರಿ ಸಮಾಜದ ಹೆಮ್ಮೆಯ ಕುಡಿಯಾದ ನಮ್ಮ ನಿಮ್ಮೆಲ್ಲರ ನೆಚ್ಚಿನ ಆತ್ಮೀಯರಾದ,ಸಹೋದರ ಚಂದ್ರಶೇಖರ್ ಯಡವಲ್ ಎಂಬುವವರು ನಿಖಿತ್ ಪರಿಚಯಿಸುವ ಬಹುಭಾಷೆಯ ಕಿರುಚಿತ್ರವಾದ ಹೋದ ಉಸಿರು ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಅಭಿನಯಿಸಿ, ನಿರ್ಮಾಪಕರಾಗಿಯೂ ಕೆಲಸ ಮಾಡಿರುತ್ತಾರೆ.
ಅವರು ವಿಲನ್ ಪಾತ್ರದಲ್ಲಿ ಅಭಿನಯಿಸಿರುವ ಚೊಚ್ಚಲ(ಮೊದಲ) ಸಿನಿಮಾ “ಹೋದ ಉಸಿರು” ಕಿರುಚಿತ್ರವು ಆರ್ ಪ್ರೊಡಕ್ಷನ್ ಅರ್ಪಿಸುವ ನಿದೇರ್ಶನ, ಛಾಯಾಗ್ರಹಣರಾದ ರಾಕೇಶ್ ಆಚಾರ್ಯರವರ ಕಥೆ-ಚಿತ್ರಕಥೆ:-ಸಂಪತ್ ರಾಯ್ ನೇತೃತ್ವದಲ್ಲಿ ಮೂಡಿಬಂದಿದೆ. ಇದೊಂದು ಪಕ್ಕಾ ಹಳ್ಳಿಯ ನೈಜ ಘಟನಾಧಾರಿತವಾದ ಪ್ರೀತಿಯ ಬಲೆಗೆ ಬಿದ್ದು ಪ್ರೇಮಿ ಕೊಲೆಯಾಗುವ ಕಥೆಯಾಗಿದ್ದು,ಈ ಕಿರುಚಿತ್ರವು ರಾಜ್ಯಾದ್ಯಂತ ಏಕಕಾಲಕ್ಕೆ ಬಹುಭಾಷೆಯಲ್ಲಿ ಅಂದರೆ ಐದು ಭಾಷೆಯಲ್ಲಿ (ಕನ್ನಡ,ತೆಲುಗು, ತಮಿಳು,ಮಲಯಾಳಂ,ಹಿಂದಿ) Youtubeಲಿ ಬಿಡುಗಡೆಗೊಳ್ಳಲಿದೆ ಮತ್ತು
ಮುಂದುವರೆದು ಚಿತ್ರಮಂದಿರಗಳಲ್ಲಿಯೂ ಪ್ರಸಾರವಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಆದ್ದರಿಂದ ತಾವುಗಳು ಈ ಚಿತ್ರವನ್ನು ತಮ್ಮ ಸ್ನೇಹಿತರೊಂದಿಗೆ ಮತ್ತು ಬಂದು ಬಳಗದವರ ಜೊತೆ ಹಂಚಿಕೊಂಡು ಕಿರುಚಿತ್ರವನ್ನು ನೋಡುವುದರ ಮೂಲಕ ಈ ಕಿರುಚಿತ್ರದಲ್ಲಿ ಬಹುಭಾಷೆಯಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡ ಈ ಭಾಗದ ಹಳ್ಳಿಯ, ಅಪ್ಪಟ್ಟ ಅಲೆಮಾರಿಯ ಯುವ ಪ್ರತಿಭೆಯಾದ ಚಂದ್ರಶೇಖರ್ ಯಡವಲ್ ಹಾಗೂ ಇನ್ನೊಬ್ಬ ನಾಯಕ-ನಟನಾದ ಸಂಪತ್ ರಾಯ್ ಇವರನ್ನು ಗುರುತಿಸಿ, ಪ್ರೋತ್ಸಾಹಿಸಿ,ಸಹಕರಿಸಿ ಆರ್ಶಿವಾದಿಸಬೇಕಾಗಿ ಸಕಲರಲ್ಲಿ ವಿನಂತಿ.
ಇನ್ನೂ ಅನೇಕ ಸಾಮಾಜಿಕ ಕಳಕಳಿಯುಳ್ಳ ಕಿರುಚಿತ್ರಗಳನ್ನು ನಿರ್ಮಾಣ ಮಾಡಿ ಜನಮನ್ನಣೆ ಪಡೆದು ಆದಷ್ಟು ಬೇಗನೆ ಚಿತ್ರರಂಗಕ್ಕೆ ಅಲೆಮಾರಿ ಬಂಧುವಾದ ಚಂದ್ರಶೇಖರ್ ಯಡವಲ್ ರವರು ಪಾದಾರ್ಪಣೆಯನ್ನು ಮಾಡಲೆಂದು,ಮುಂದಿನ ಚಿತ್ರರಂಗದ ಅವರ ಬದುಕು ಸುಗಮವಾಗಿ ಸಾಗಿ ಯಶಸ್ಸು ಲಭಿಸಲೆಂದೂ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.