ಚಿಂಚೋಳಿ: ಮಹಿಳೆಯ ಮೇಲೆ ಮಂಗ ದಾಳಿ ಮಾಡಿರುವ ಘಟನೆ ತಾಲೂಕಿನ ಐನಾಪುರ ಗ್ರಾಮದಲ್ಲಿ ಶನಿವಾರ ನಡೆದಿದೆ.
ಮಮ್ತಾಜ್ ಬಿ ಪತ್ರುಸಾಬ್ ದಾಳಿಗೆ ಒಳಗಾದ ಗ್ರಾಮದ ಮಹಿಳೆ, ಗ್ರಾಮದಲ್ಲಿ ಹಲವು ದಿನಗಳಿಂದ ಮಂಗಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಗ್ರಾಮದಲ್ಲಿ ಮಹಿಳೆಯರು, ಮಕ್ಕಳು, ಕೃಷಿ ಕೂಲಿಕಾರ್ಮಿಕರು ಭಯದ ವಾತವರಣದಲ್ಲಿ ಬದುಕುವಸ್ಥಿತಿ ನಿರ್ಮಾಣವಾಗಿದೆ.
ಸಮಸ್ಯೆ ಕುರಿತು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದರು ಸಹ ಕ್ಯಾರೆ ಎನ್ನದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮಂಗಗಳ ಅಟ್ಟಹಾಸ ಮುಂದುವರೆದಿದೆ, ಜನರು ಮನೆ ಹೊರಗಡೆ ಬರಬೇಕಾದರೆ ಕೈಯಲ್ಲಿ ಬೆತ್ತ ಹಿದುಕೊಂಡು ಬರುವಂತ ಪರಿಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಗಿದೆ. ಭಯದಲ್ಲಿ ಬದುಕು ಸನ್ನಿವೇಶ ನಿರ್ಮಾಣವಾಗಿದೆ ಎಂದು ಬಹುಜನ ವಿದ್ಯಾರ್ಥಿ ಪೆಡ್ರೇಷನ್ ಆಪ್ ಈಕ್ವಾಲಿಟಿ ಸಂಘಟನೆ ಮುಖಂಡರು ಆರೋಪಿಸಿದ್ದಾರೆ.
ಅಧಿಕಾರಿಗಳು ಅರಣ್ಯಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಕರ್ತವ್ಯದಿಂದ ನುಣುಚಿಕೊಳ್ಳುಲು ಪ್ರಯತ್ನಿಸದೇ ಮಂಗಗಳಿಗೆ ಸ್ಥಳಾಂತರಿಸಿ ಗ್ರಾಮದಲ್ಲಿ ಉಂಟಾಗಿರುವ ಭೀತಿಯನ್ನು ದೂರಪಡಿಸಬೇಕೆಂದು ಸಂಘಟನೆ ಸದಸ್ಯರು ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.