ಕಲಬುರಗಿ: ಸಂಗೀತವು ಲಲಿತ ಕಲೆಗಳಲ್ಲಿಯೇ ಅತ್ಯಂತ ವಿಶೇಷ ಸ್ಥಾನಮಾನ ಪಡೆದುಕೊಂಡಿದ್ದು ಸಂಗೀತದಲ್ಲಿಯೇ ಗಾನ ವಿದ್ಯೆಯು ಅತ್ಯಂತ ಶ್ರೇಷ್ಠ ಎಂದು ಮಹಾನಗರ ಪಾಲಿಕೆ ಸದಸ್ಯ ಸಚೀನ ಕಡಗಂಚಿ ಅಭಿಪ್ರಾಯ ಪಟ್ಟರು.
ನಗರದ ವಿಜಯನಗರ ಕಾಲೋನಿಯ ಮರಗಮ್ಮ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಗಡಿನಾಡ ಸಂಗೀತ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡ ಗಾನಲಹರಿ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಆಧುನಿಕ ಯುಗದಲ್ಲಿ ಪುರಾಣ ಪ್ರವಚನಗಳಲ್ಲಿ ಸಂಗೀತವು ಜನರನ್ನು ಧಾರ್ಮಿಕತೆ ಕಡೆಗೆ ಕೊಂಡೊಯುವ ಕೆಲಸ ಮಾಡುತ್ತಿದೆ ಹಾಗೂ ಮಕ್ಕಳು ಸಂಗೀತ ಕಲಿಯುವುದರಿಂದ ಸಂಗೀತ ಅಭಿರುಚಿ ಹೆಚ್ಚುತ್ತಿದೆ. ಮುಖ್ಯ ಅತಿಥಿ ಯೋಗಿರಾಜ ಪಾಟೀಲ ಮಾತನಾಡಿ, ಸಂಗೀತವು ಪ್ರತಿಯೊಬ್ಬರನ್ನು ಸೆಳೆಯುವ ಕೆಲಸ ಮಾಡುತ್ತದೆ, ಅದರಿಂದ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಇಂತಹ ಕಾರ್ಯ ಮಾಡುತ್ತಿರುವ ಗಡಿನಾಡ ಸಂಗೀತ ಸೇವಾ ಸಂಸ್ಥೆಯ ಸೇವೆ ಶ್ಲಾಘನೀಯವಾದದ್ದು ಎಂದರು.
ಅತಿಥಿಗಳಾಗಿ ಸೋಮಶೇಖರ ಮೂಲಗೆ, ಬಾಬುರಾವ ಗುಂಡೇದ, ಮಹಾಂತಪ್ಪ ಕುಲಕರ್ಣಿ, ಸೂರ್ಯಕಾಂತ ಶಾಸ್ತ್ರಿ, ಸಂಸ್ಥೆಯ ಅಧ್ಯಕ್ಷ ವೀರಭದ್ರಯ್ಯ ಸ್ಥಾವರಮಠ ಇದ್ದರು. ನಂತರ ಗಾನಲಹರಿ ಸಾಂಸ್ಕøತಿಕ ಕಾರ್ಯಕ್ರಮ ಆಕಾಶವಾಣಿ ‘ಎ’ ಗ್ರೇಡ ಕಲಾವಿದ ಬಸವರಾಜ ಭಂಟನೂರ ಹಾಗೂ ಶಿವಲಿಂಗಯ್ಯ ಪುರಾಣಿಕ, ಬಸವರಾಜ ಶ್ರೀಂಗೇರಿ, ಬಸವಣ್ಣಪ್ಪ ಪಾಟೀಲ, ಮಲ್ಲಯ್ಯ ಚಿಕಮಠ, ವೀರಯ್ಯ ಮಠಪತಿ, ಲೋಕನಾಥ ಚಾಂಗಲೇರ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಗುರುಶಾಂತಯ್ಯ ಸ್ಥಾವರಮಠ ನಿರೂಪಿಸಿದರು, ಶ್ರೀಮತಿ ರೇಣುಕಾ ಖೂನಿ ಸ್ವಾಗತಿಸಿದರು, ಶ್ರೀಮತಿ ಪವಿತ್ರ ವಿಶ್ವನಾಥ ವಂದಿಸಿದರು.