ಆಳಂದ: ನ. 11ರಂದು ಪಟ್ಟಣದಲ್ಲಿ ತಾಲೂಕು ಆಡಳಿತ ಆಶ್ರಯದಲ್ಲಿ ದಾಸಶ್ರೇಷ್ಠ ಭಕ್ತ ಕನಕದಾಸರ ಮತ್ತು ಒನಕೆ ಓಬವ್ವ ಜಯಂತಿ ಆಚರಣೆಯನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು.
ಪಟ್ಟಣದ ತಾಲೂಕು ಆಡಳಿತ ಸೌಧನಲ್ಲಿ ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರ ಅಧ್ಯಕ್ಷತೆಯಲ್ಲಿ ಕರೆದ ಜಯಂತಿ ಆಚರಣೆ ಪೂರ್ವ ಸಿದ್ಧತಾ ಸಭೆಯಲ್ಲಿ ನಿರ್ಧರಿಸಲಾಯಿತು. ಕುರಬ ಸಮಾಜದ ಮುಖಂಡ ಈರಣ್ಣ ಝಳಕಿ ಧಂಗಾಪೂರ ಮಾತನಾಡಿ, ಕೋವಿಡ-19 ಅವಧಿಯಲ್ಲಿ ಕನಕದಾಸರ ಜಯಂತಿ ಆಚರಣೆ ಮೂರು ನಾಲ್ಕು ವರ್ಷಗಳಿಂದ ನಡೆದಿರುವುದಿಲ್ಲ. ಈಬಾರಿಯಾದರು ಅದ್ಧೂರಿಯಾಗಿ ಆಚರಿಸಬೇಕು ಎಂದು ಕೋರಿದರು.
ಬೀರಣ್ಣ ಭೂಸನೂರ ಅವರು ಮಾತನಾಡಿ ಜಿಲ್ಲೆಯಲ್ಲಿಯೇ ಈ ಕಾರ್ಯಕ್ರಮ ದೊಡ್ಡ ಪ್ರಮಾಣದಲ್ಲಿ ನಡೆಯಬೇಕು ಎಂದು ಹೇಳಿದರು. ಕುರುಬ ಸಮುದಾಯದ ಜಿಲ್ಲಾಧ್ಯಕ್ಷರು ಗುರುನಾಥ್ ಪೂಜಾರಿ ತಾಲೂಕ ಅಧ್ಯಕ್ಷರು ತುಕಾರಾಮ ವಗ್ಗೆ ರಾಜ್ಯ ಹಿರಿಯ ಉಪಾಧ್ಯಕ್ಷ ಈರಣ್ಣ ಝಳಕಿ ಗುಂಡಪ್ಪಾ ಧಂಗಾಪೂರ, ಬಾಬುರಾವ್ ಸರಡಗಿ ಬೀರಣ್ಣ ಭೂಸನೂರ, ನಾಗರಾಜ ಘೋಡಕೆ, ಸಿದ್ದಪ್ಪಾ ಪೂಜಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಗ್ರಾಮ ಲೇಖಪಾಲಕ ಆನಂದ ಪೂಜಾರಿ ಸ್ವಾಗತಿಸಿ ವಂದಿಸಿದರು.