ಜೇವರ್ಗಿ : ಮಹಾಲಕ್ಷ್ಮಿ ಜಾತ್ರಾ ಮಹೋತ್ಸವದ ಅಂಗವಾಗಿ ಇಲ್ಲಿನ ಕಲ್ಬುರ್ಗಿ ಹೊರವಲಯದ ಮೈದಾನದಲ್ಲಿ ಅಮೋಘ ನಾಟಕ ಪ್ರದರ್ಶನ ನಡೆಯುತ್ತಿದೆ.
ನೈಜ ಪಾತ್ರ ಅಭಿನಯ ಮಾಡುವ ಮೂಲಕ ವೇದಿಕೆ ಮೇಲೆ ತಮ್ಮ ಪ್ರತಿಭೆಗಳನ್ನು ಹೊರ ಹಾಕುತ್ತಿರುವ ಕಲಾವಿದರು ಹಾಗೂ ಕಲಾಪರಂಪರೆ ಜೀವಂತ ಉಳಿಯಲು ರಂಗಭೂಮಿಯನ್ನು ಪ್ರೋತ್ಸಾಹಿಸಬೇಕಾಗಿದೆ ಎಂದು ಸಂಘದ ತಿಳಿಸಿದರು. ರಂಗಭೂಮಿ ಕಲೆಯನ್ನು ಜೀವಂತವಾಗಿ ಉಳಿಸಲು ತಿಳಿದಿದ್ದ ಪೀಳಿಗೆ ಸಂಸ್ಕೃತಿಯನ್ನು ಬೆಳೆಸಲು ಕಲಾವಿದರ ವೇದಿಕೆ ಆದ ನಾಟಕ ರಂಗವು ಇಂದು ಬೆಳೆಯಬೇಕಾಗಿದೆ ಎಂದು ನಾಟಕ ಸಂಘದ ಸಂಚಾಲಕ ಶ್ರೀಧರ್ ಹೆಗಡೆ ತಿಳಿಸಿದರು.
ಜೇವರ್ಗಿ ಮಹಾಲಕ್ಷ್ಮಿ ಜಾತ್ರೆ ಪ್ರಯುಕ್ತವಾಗಿ ನಿರಂತರವಾಗಿ ನಡೆಯುತ್ತಿರುವ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ ಹಾನಗಲ್ಲ ಮಾಲೀಕರು ಎಲ್ ಬಿ ಶೇಕ್, ಸಂಚಾಲಕರಾದ ಶ್ರೀಧರ್ ಹೆಗಡೆ, ನಿರಂತರವಾಗಿ ಕಲಶೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಲಾವಿದರಾದ, ಮಹಾಂತೇಶ್ ತಾಳಿಕೋಟಿ, ಸಿದ್ದು ಬೀಳಗಿ, ನಟರಾಜ ಎಚ್ ಆರ್, ಆಂಜನೇಯ, ಮಂಜುಳಾ ಮುಧೋಳ, ಅನಿತಾ ಶೆಟ್ಟಿ ಸೇರಿದಂತೆ ಸುಮಾರು 25 ಜನರ ತಂಡದೋಂದಿಗೆ ನಿರಂತರವಾಗಿ ಕಲಾಸೇವೆ ನಡೆಸಲಾಗುತ್ತಿದೆ.
ಸದ್ಯ ಜೇವರ್ಗಿಯಲ್ಲಿ ನಿರಂತರವಾಗಿ ನಾಟಕ ಕಲಾ ಪ್ರದರ್ಶನ ನಡೆಯಲಿದ್ದು ಇಂದಿನಿಂದ ಹಾಸ್ಯ ಭರಿತ ಕಿವುಡ ಮಾಡಿದ ಕಿತಾಪತಿ ಹಾಸ್ಯ ಪ್ರಧಾನ ನಾಟಕವನ್ನು ಕಲಾ ಪ್ರೇಮಿಗಳು ಹಾಗೂ ಫಲಾರದಕರು ಆಗಮಿಸಿ ವೀಕ್ಷಿಸಿ ಪೋಷಿಸಲು ಹಾಗೂ ಆಶೀರ್ವದಿಸಲು ಆನಂದಿಸಲು ಕೋರಿದ್ದಾರೆ.