ಕನಕದಾಸರ ಜಯಂತಿ:ತಹಸಿಲ್ ಕಚೇರಿಯಲ್ಲಿ ಪೂರ್ವಭಾವಿ ಸಭೆ

0
5

ಸುರಪುರ : ಕನಕದಾಸರ ಜಯಂತಿಯನ್ನು ನ.11ಕ್ಕೆ ಆಚರಿಸಲಾಗುವುದು. ಅಂದು ಬೆಳಗ್ಗೆ 9 ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ವಾಲ್ಮೀಕಿ ಭವನದವರೆಗೂ ಕನಕದಾಸರ ಭಾವಚಿತ್ರದ ಮೆರವಣಿಗೆ ಜರುಗಲಿದೆ ಎಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದರು.

ಇಲ್ಲಿಯ ತಹಸಿಲ್ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಂತರ ಬೆಳಗ್ಗೆ 11 ಗಂಟೆಗೆ ವಾಲ್ಮೀಕಿ ಭವನದಲ್ಲಿ ಜಯಂತಿ ಆಚರಿಸಲಾಗುವುದು. ಉಪನ್ಯಾಸಕರು ಕನಕದಾಸರ ಕುರಿತು ಉಪನ್ಯಾಸ ನೀಡುವರು ಎಂದರು.

Contact Your\'s Advertisement; 9902492681

ಎಲ್ಲ ಸರಕಾರಿ ಇಲಾಖೆ, ಶಾಲಾ-ಕಾಲೇಜು, ಗ್ರಾಪಂ, ಅಂಗನವಾಡಿ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಕಡ್ಡಾಯವಾಗಿ ಜಯಂತಿ ಆಚರಿಸಬೇಕು.ಕನಕ ವೃತ್ತಗಳಿಗೆ ದೀಪಲಾಂಕರ ಮಾಡಬೇಕು.ತಾಲೂಕಾಡಳಿತ ಹಮ್ಮಿಕೊಂಡಿರುವ ಜಯಂತಿಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಭಾಗವಹಿಸಬೇಕು ಎಂದು ಹೇಳಿದರು.

ಟಿಹೆಚ್‍ಒ ಡಾ.ಆರ್.ವಿ.ನಾಯಕ ವೇದಿಕೆಯಲ್ಲಿದ್ದರು. ಕುರುಬ ಸಮಾಜದ ಮುಖಂಡರಾದ ಕಾಳಪ್ಪ ಕವಾತಿ, ಭೀಮರಾಯ ಮೂಲಿಮನಿ, ರಂಗನಗೌಡ ದೇವಿಕೇರಿ, ನಿಂಗರಾಜ್ ಬಾಚಿಮಟ್ಟಿ, ನಿಂಗಣ್ಣ ಬೂದಗುಂಪಿ, ಮಲ್ಲು ದಂಡಿನ್, ರವಿಚಂದ್ರ ಸಾಹುಕಾರ ಆಲ್ದಾಳ, ಜುಮ್ಮಣ್ಣ ಏಳುರೊಟ್ಟಿ, ಕೃಷ್ಣಾ ಬಾದ್ಯಾಪುರ, ವಿಜಯಕುಮಾರ ಮಂಗೀಹಾಳ, ಮಲ್ಲಣ್ಣ ಐಕೂರು, ಮಾಳಪ್ಪ ಮಾಲಹಳ್ಳಿ, ಕೆಂಚಪ್ಪ ಪೂಜಾರಿ, ನಿಂಗಣ್ಣ ಕಾಡ್ಲೂರು , ಮಾರ್ಥಂಡಪ್ಪ ಮಗ್ಗದ, ಮಲ್ಲಣ್ಣ ಹುಬ್ಬಳ್ಳಿ , ಭೀಮಣ್ಣ ಕೆಂಗೂರಿ , ಬೀರಲಿಂಗ ಬಾದ್ಯಾಪುರ, ಸಿದ್ರಾಮ ಎಲಿಗಾರ, ಚಂದ್ರ ದನಕಾಯಿ ಸೇರಿ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here