ಮಕ್ಕಳೊಂದಿಗೆ ಬಿಸಿಯೂಟ ಸವಿದ ಶಿಕ್ಷಣ ಇಲಾಖೆಯ ಉಪನಿರ್ದೇಶಕರು

0
52

ಕಲಬುರಗಿ: ಕಮಲಾಪೂರ: ಪ್ರಸ್ತುತ ರಾಜ್ಯ ಶಿಕ್ಷಣ ಇಲಾಖೆಯು ಕಲಿಕಾಚೇತರಿಕೆ ಉಪಕ್ರಮ ಅನುಷ್ಠಾನಗೊಳಿಸುತ್ತಿದೆ. ಈ ಉಪಕ್ರಮವನ್ನು ಅತ್ಯಂತ ಸೂಕ್ತವಾದ ರೀತಿಯಲ್ಲಿ ಶಾಲೆಗಳಲ್ಲಿ ಅನುಷ್ಠಾನಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಇತ್ತೀಚಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಅಭಿವೃದ್ಧಿ) ಹಾಗೂ ಡಯಟ್ ಕಮಲಾಪೂರದ ಪ್ರಾಂಶುಪಾಲರಾದ ಬಸವರಾಜ ಮಾಯಾಚಾರ್ಯ ಅವರು ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಓಕುಳಿಗೆ ಭೇಟಿ ನೀಡಿ ಪರಿಶಿಲನೆ ನಡೆಸಿದರು.

ಶಾಲೆಯ ಪ್ರಾಕೃತಿಕ ವಾತಾವರಣವನ್ನು ಕಂಡು ಶಿಕ್ಷಕರಿಗೆ ಅಭಿನಂದಿಸಿದರು. ಪ್ರತೀ ತರಗತಿಯಲ್ಲಿ ಮಕ್ಕಳೊಂದಿಗೆ ಮಾತನಾಡಿದರು. ವಿಜ್ಞಾನ ವಿಷಯದಲ್ಲಿನ ಆಮ್ಲ, ಪ್ರತ್ಯಾಮ್ಲ ಎಂದರೇನು? ಪ್ರಯೋಗಗಳ ಮೂಲಕ ಮಕ್ಕಳು ಮಾಡಿ ತೋರಿಸಿದರು. ಒಂದು ಮತ್ತು ಎರಡನೇ ತರಗತಿ ಮಕ್ಕಳು ಇಂಗ್ಲೀಷ ವಿಷಯದಲ್ಲಿ ಹಲವು ಪ್ರಾಣಿಗಳ ಹೆಸರನ್ನು ಹೇಳಿದರು.

Contact Your\'s Advertisement; 9902492681

ನಲಿಕಲಿ ಮಕ್ಕಳು ಕಾರ್ಡುಗಳು, ಪ್ರಗತಿ ನೋಟ, ಹವಾಮಾನ ನಕ್ಷೆ, ಕಲಿಕಾಸಾಮಾಗ್ರಿಗಳ ಮೂಲಕ ತಮ್ಮ ತರಗತಿ ಪ್ರಕ್ರಿಯೆಯನ್ನು ಪ್ರದರ್ಶಿಸಿದರು, ಪ್ರತಿಯೊಂದು ತರಗತಿಯಲ್ಲಿ ಕಲಿಕಾಚೇತರಿಕೆ ಉಪಕ್ರಮದ ಪ್ರಗತಿಯನ್ನು ಪರಿಶೀಲಿಸಿದರು. ಮಕ್ಕಳ ಕಲಿಕೆ, ಕಲಿಕಾಹಾಳೆಗಳು, ಕಲಿಕಾ ಫಲಗಳು, ಮಕ್ಕಳ ಕಲಿಕೆ, ಇತ್ಯಾದಿಗಳನ್ನು ಸರಿಯಾಗಿ ಪರಿಶೀಲಿಸಿದ ಉಪನಿರ್ದೇಶಕರು ಮಕ್ಕಳೊಂದಿಗೆ ಮದ್ಯಾನದ ಬಿಸಿಯೂಟ ಸವಿದರು. ಬಿಸಿಯೂಟದ ಸಮಯದಲ್ಲಿ ಮಕ್ಕಳಿಗೆ ಪ್ರತಿದಿನ ಊಟದ ಕುರಿತು ಚರ್ಚೆ ನಡೆಸಿದರು.

ಬಳಿಕ ಶಿಕ್ಷಕರೊಂದಿಗೆ ಮಾತನಾಡಿದ ಅವರು ತರಗತಿಯಲ್ಲಿ ಮಕ್ಕಳಿಗೆ ಕಲಿಯುವಂತಹ ವಾತಾವರಣ ನಿರ್ಮಾಣ ಮಾಡಿ, ಒಂದು ಕಲಿಕಾಂಶ ಖಾತರಿಯಾದ ಬಳಿಕವೇ ಮುಂದಿನ ಕಲಿಕೆಯನ್ನು ಕಲಿಸಿ, ಮದ್ಯಾನದ ಬಸಿಯೂಟದಲ್ಲಿ ಹೆಚ್ಚು ತರಕಾರಿಗಳನ್ನು ಬಳಕೆ ಮಾಡಿ ಊಟ ಬಡಿಸಿ ಪ್ರತಿದಿನ ಶಿಕ್ಷಕರು ಬಿಸಿಯೂಟವನ್ನು ರುಚಿ ನೋಡಿ ಮಕ್ಕಳಿಗೆ ಬಡಿಸಿ ಮಕ್ಕಳಿಗಾಗಿ ಉತ್ತಮವಾದ ಕೆಲಸಮಾಡಿ ಎಂದು ಮಾರ್ಗದರ್ಶನ ಮಾಡಿದರು.

ಈ ಸಂದರ್ಭದಲ್ಲಿ ಸ್ಟರ್ ಸಂಸ್ಥೆಯ ವಿಭಾಗೀಯ ಮುಖ್ಯಸ್ಥರಾದ ಕೆ.ಎಂ.ವಿಶ್ವನಾಥ ಮರತೂರ ಹಾಗೂ ಶಾಲೆಯ ಮುಖ್ಯಗುರುಗಳು, ಶಿಕ್ಷಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here