ಸುರಪುರ: ತಾಲೂಕಿನ ಕವಡಿಮಟ್ಟಿ,ಶೆಳ್ಳಗಿ,ಹಾವಿನಾಳ ಸೇರಿದಂತೆ ವಿವಿಧ ಗ್ರಾಮಗಳ ರೈತರ ಭತ್ತ ಹತ್ತಿ ಬೆಳೆ ಹಾನಿ ಜಮೀನುಗಳಿಗೆ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ ಚಂದಲಾಪುರ ಸೇರಿದಂತೆ ವಿವಿಧ ಮುಖಂಡರು ಭೇಟಿ ನೀಡಿದರು.
ರೈತ ಹಯಾಳಪ್ಪ ಕೆಂಗುರಿ ಜಮೀನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು,ಅಕಾಲಿಕವಾಗಿ ಸುರಿದ ಮಳೆಯಿಂದ ತಾಲೂಕಿನ ರೈತರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ.ಇದರಿಂದ ಸಾಲಶೂಲ ಮಾಡಿ ವ್ಯವಸಾಯ ಮಾಡಿರುವ ರೈತರು ಕಣ್ಣೀರು ಸುರಿಸುವಂತಾಗಿದೆ,ಸರಕಾರ ಕೂಡಲೇ ರೈತರ ನೆರವಿಗೆ ಬರಬೇಕು,ಸರಕಾರ ಎಕರೆಗೆ ಕನಿಷ್ಟ 30 ಸಾವಿರ ರೂಪಾಯಿಗಳ ಪರಿಹಾರ ನೀಡಬೇಕು,ಇಲ್ಲವಾದಲ್ಲಿ ರೈತರಿಗೆ ಸಾವೆ ಗತಿಯಾಗಲಿದೆ
.ಆದ್ದರಿಂದ ಸರಕಾರ ಕೂಡಲೇ ಎಚ್ಚೆತ್ತು ರೈತರ ಜಮೀನುಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸರಿಯಾದ ಸಮೀಕ್ಷೆ ನಡೆಸಿ ಸರಕಾರಕ್ಕೆ ಶೀಘ್ರ ವರದಿಯನ್ನು ಸಲ್ಲಿಸಬೇಕು ಮತ್ತು ಸರಕಾರ ವಿಳಂಬ ಮಾಡದೆ ಪರಿಹಾರವನ್ನು ನೀಡಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ರೈತರಾದ ಹಯಾಳಪ್ಪ ಕೆಂಗುರಿ ಸೇರಿದಂತೆ ಅನೇಕರಿದ್ದರು.