ಜಿಗಣಿ: ಗಂಧದನಾಡು ಜನಪರ ವೇದಿಕೆ-ಗಜವೇ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಹಾಗೂ ಕಿರಣ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಇಂದು ನವೆಂಬರ್ 6ರ ಭಾನುವಾರ ಜಿಗಣಿ ಹೋಬಳಿಯ ಮಹಂತಲಿಂಗಾಪುರದಲ್ಲಿ ಗಜವೇ 48ನೇ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು 67ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಗಜವೇ ಬೆಂ.ದ.ವಿ.ಕ್ಷೇತ್ರದ ಅಧ್ಯಕ್ಷರಾದ ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಿರಣ್ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕರಾದ ರಂಜಿತ್ ಕುಮಾರ್ ಹಾಗೂ ಗಜವೇ ಬೆಂ.ದ.ವಿ.ಕ್ಷೇತ್ರದ ಉಪಾಧ್ಯಕ್ಷರಾದ ಮಹಂತಲಿಂಗಾಪುರ ಮಂಜು ರವರ ನೇತೃತ್ವದ ಈ ಶಿಬಿರದಲ್ಲಿ ಗಜವೇ ಸಂಸ್ಥಾಪಕ ಅಧ್ಯಕ್ಷರಾದ ವಿಜಯರಾಮ, ಕಲ್ಲಬಾಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿಲ್ಲಪ್ಪ, ಗಜವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ರಾಜ್ಯ ಕಾರ್ಯದರ್ಶಿ ದೇವರಾಜ್ ನಾಯ್ಕ, ಸಹ-ಕಾರ್ಯದರ್ಶಿ ಜಗದೀಶ್ ಅರಸು, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಸ್ವಾಭಿಮಾನಿ ಸತೀಶ್, ಕಲ್ಲಬಾಳು ಗ್ರಾಮ ಪಂಚಾಯಿತಿ ಸದಸ್ಯರಾದ ನರೇಂದ್ರ ಕುಮಾರ್, ಬಾಬು, ನಾರಾಯಣ ನೇತ್ರಾಲಯದ ಶಿಬಿರ ವ್ಯವಸ್ಥಾಪಕರಾದ ನಿಜಾಮುದ್ದೀನ್, ಆನೇಕಲ್ ಸರ್ಕಾರಿ ಆಸ್ಪತ್ರೆಯ ಎನ್.ಸಿ.ಡಿ ಯ ಭರತೇಶ್, ಕಲಾ ಸಮೂಹದ ಅನುರಾಧ ಗೌತಮಿ, ಗಜವೇ ಬೆಂ.ದ.ವಿ.ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಅರ್ಜುನ್ ಜಿ.ಆರ್., ಸಂಘಟನಾ ಕಾರ್ಯದರ್ಶಿ ವರುಣ್ ಕುಮಾರ್, ಆನೇಕಲ್ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾದ ತಿಮ್ಮರಾಯಪ್ಪ, ಪ್ರಧಾನ ಕಾರ್ಯದರ್ಶಿ ಕೌಶಿಕ್ ರೆಡ್ಡಿ, ಕಾರ್ಯದರ್ಶಿ ರಾಜಕುಮಾರ, ಸಂಘಟನಾ ಕಾರ್ಯದರ್ಶಿ ಕೆಂಪಣ್ಣ, ಸದಸ್ಯರಾದ ಸಂತೋಷ್, ಪ್ರಶಾಂತ್, ಸುರೇಶ್ ಹಾಜರಿದ್ದರು. ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ 300ಜನ ಪ್ರಯೋಜನ ಪಡೆದಿದ್ದಾರೆ.