ಸಮುದಾಯದ ಅಭಿವೃದ್ಧಿಗೆ ಸದಾ ಜತೆಗಿರುವೆ: ದತ್ತಾತ್ರೇಯ ಪಾಟೀಲ್ ರೇವೂರ್

0
18

ಕಲಬುರಗಿ: ಶಾಲಾ ಕಟ್ಟಡ ನಿರ್ಮಿಸಿದ್ದು ಸಂತಸ ತಂದಿದೆ ಎಂದು ಕೆ.ಕೆ.ಅರ್.ಡಿ.ಬಿ. ಅಧ್ಯಕ್ಷರು ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ್ ಅಭಿಪ್ರಾಯಪಟ್ಟರು.

ಭಾನುವಾರ ಇಲ್ಲಿನ ಬಿದ್ದಾಪೂರ ಕಾಲೋನಿಯ ರಾಮಗೋಪಾಲ ಮಾಲು ಲೇಔಟ್ ನಲ್ಲಿ ಸರ್ಕಾರದ 50 ಲಕ್ಷ‌ ರೂ. ನೆರವಿನ ಜೊತೆಗೆ ಕಲ್ಯಾಣ ಕರ್ನಾಟಕ ಕಲ್ಯಾಣ ಮತ್ತು ಅಭಿವೃದ್ಧಿ ಟ್ರಸ್ಟ್ (ರಿ) ವತಿಯಿಂದ ನಿರ್ಮಿಸಲಾಗಿರುವ ನೂತನ ಶಾಲಾ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಟ್ರಸ್ಟ್ ಅಡಿಯಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ 2.14 ಕೋಟಿ ರೂ. ಮಂಜೂರಾತಿ ನೀಡಿ ಮೊದಲ ಹಂತದಲ್ಲಿ 50 ಲಕ್ಷ ರೂ. ಬಿಡುಗಡೆಯಾಗಿದೆ. ಟ್ರಸ್ಟ್ ಈ ಅನುದಾನ ಸದ್ಬಳಕೆ ಮಾಡಿಕೊಂಡು ಉತ್ತಮವಾದ ಕಟ್ಟಡ ನಿರ್ಮಿಸಿದೆ. ಇನ್ನುಳಿದ ಅನುದಾನ ಬಿಡುಗಡೆಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಶೀಘ್ರ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಇದಲ್ಲದೇ ನಗರದ ರಾಮ ಮಂದಿರ ಬಳಿ ಸರ್ಕಾರದ ಅನುದಾನದಿಂದ ನಿರ್ಮಾಣಗೊಂಡಿರುವ ಶ್ರೀ ಶಿವಶರಣ ಹರಳಯ್ಯ ಸಮಾಜದ ಸಮುದಾಯ ಭವನದ ಉದ್ಘಾಟನೆಗೆ ಮುಖ್ಯಮಂತ್ರಿಗಳನ್ನು ಕರೆ ತರುವ ಪ್ರಯತ್ನ ಮಾಡಲಾಗುವುದು. ಪರಿಶಿಷ್ಟ ಜಾತಿಯಲ್ಲಿ ಹಿಂದುಳಿದ ಸಮಗಾರ ಸಮುದಾಯದ ಜತೆ ನಾನು ಒಬ್ಬನ್ನಾಗಿ ನಿಲ್ಲುವೆ ಎಂದು ದತ್ತಾತ್ರೇಯ ಪಾಟೀಲ ರೇವೂರ ಅವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿವೃತ್ತ ಹೆಚ್ಚುವರಿ ಎಸ್.ಪಿ. ಬೆಳ್ಳಪ್ಪ ಎಸ್. ಮರತೂರಕರ್ ಮಾತನಾಡಿ, ಸಮುದಾಯದ ವತಿಯಿಂದ ಒಂದು ಶಾಲೆ ನಿರ್ಮಾಣ ಮಾಡಬೇಕು ಎಂಬ ಮಹಾದಾಸೆಯಿಂದ ಇಂದು ನಗರದಲ್ಲಿ ಕಲ್ಯಾಣ ಕರ್ನಾಟಕ ಕಲ್ಯಾಣ ಮತ್ತು ಅಭಿವೃದ್ಧಿ ಟ್ರಸ್ಟ್ ಅಡಿಯಲ್ಲಿ ಅದ್ಭುತ ಶಾಲಾ ಕಟ್ಟಡ ನಿರ್ಮಾಣವಾಗಿದೆ. ಇದಕ್ಕೆ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳ ಸತತ ಪ್ರಯತ್ನವೇ ಇದಕ್ಕೆ ಕಾರಣ ಎಂದ ಅವರು ಶಾಲಾ‌ ಕಟ್ಟಡದ‌ ಮುಂದಿನ ಹಂತದ‌ ನಿರ್ಮಾಣಕ್ಕೆ ಸರ್ಕಾರದಿಂದ‌ ಬರಬೇಕಿರುವ ಬಾಕಿ ಅನುದಾನಕ್ಕೆ ಟ್ರಸ್ಟ್ ನ ಪದಾಧಿಕಾರಿಗಳು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಬೇಕು ಎಂದರು.

ಲೋಕೋಪಯೋಗಿ ಇಲಾಖೆಯ ನಿವೃತ್ತ ಅಧೀಕ್ಷಕ ಅಭಿಯಂತ ಶಿವಶಂಕರ ಗುರಗುಂಟಿ ಮಾತನಾಡಿದರು. ರಾಮಚಂದ್ರ ಗೋಳಾ ಅವರು ಟ್ರಸ್ಟ್ ನ ಮುಂದಿನ ಕಾರ್ಯಚಟುವಟಿಕೆ ಹಾಗೂ ಯೋಜನೆಗಳ ವರದಿ ಮಂಡಿಸಿ, ಪ್ರಾಸ್ತಾವಿಕವಾಗಿ ನುಡಿಗಳನ್ನಾಡಿದರು.

*ಕಂಪೌಂಡ್ ನಿರ್ಮಾಣಕ್ಕೆ 25 ಲಕ್ಷ ರೂ. ಅನುದಾನಕ್ಕೆ ಮನವಿ:*

ಕಾರ್ಯಕ್ರಮದ‌ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಉಮಾಕಾಂತ ಕೂಡಿ ಅವರು ಮಾತನಾಡಿ, ಶಾಲೆಯ ಕಂಪೌಂಡ್, ಪೀಠೋಪಕರಣ ಹಾಗೂ ಆಟೋಪಕರಗಳ ಖರೀದಿಗೆ ವಿಶೇಷ ಅನುದಾನದಲ್ಲಿ ಟ್ರಸ್ಟ್ ಗೆ 25 ಲಕ್ಷ ರೂ. ಅನುದಾನ ನೀಡಬೇಕು ಎಂದು ಕ್ಷೇತ್ರದ ಶಾಸಕರಾಗಿರುವ ದತ್ತಾತ್ರೇಯ ಪಾಟೀಲ್ ರೇವೂರ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿ.ಜೆ.ಪಿ. ಮುಖಂಡ ಅರವಿಂದ ನವಲಿ, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞ ಡಾ. ಅಂಬಾರಾಯ ರುದ್ರವಾಡಿ, ವಾಣಿಜ್ಯ ಇಲಾಖೆಯ ನಿವೃತ್ತ ಅಧಿಕಾರಿ ಮಹಾಂತಪ್ಪ ಗೋಳಾ, ಶಿವಶರಣಪ್ಪ ಹೀರಾಪುರ, ಚಂದ್ರಕಾಂತ‌ ದೇಗಲಮಡಿ, ನಿಂಗಪ್ಪ ಕಣ್ಣೂರ, ಸಾಯಬಣ್ಣಾ ಸೇಡಂಕರ್, ಅರುಣಕುಮಾರ ಕೋಬಾಳ,ಗೋಪಾಲ ತೆಗನೂರ್, ಬಸವರಾಜ ಶೆಳ್ಳಗಿ, ಶರಣಪ್ಪ ಗೊಬ್ಬೂರಕರ್ ಸೇರಿದಂತೆ ಟ್ರಸ್ಟ್ ಇನ್ನಿತರ ಪದಾಧಿಕಾರಿಗಳು ಇದ್ದರು.

ಜಟ್ಟಿಂಗರಾಯ್ ಶಾಖಾಪೂರೆ ಸ್ವಾಗತಿಸಿದರು, ಮಹಾದೇವ ಮುದ್ದಡಗಿ ನಿರೂಪಿಸಿದರು. ಜಗದೀಶ್ ಶಿವಕುಮಾರ್ ಜಾಲಹಳ್ಳಿ ಅವರ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here