ಕಲಬುರಗಿ: “ಶೈಕ್ಷಣಿಕ ಮತ್ತು ಸಂಶೋಧನಾ ಒಡಂಬಡಿಕೆಗಳನ್ನು ಕೆಲಸ ಮಾಡಲು ಮತ್ತು ಸಮಾಜಕ್ಕೆ ಪ್ರಯೋಜ£ವಾಗಲು ಮಾಡಲಾಗಿದೆಯೇ ಹೊರತು ಬೀರುಗಳಲ್ಲಿ ಇಡಲು ಅಲ್ಲ. ಬಸವ ಸಮಿತಿಯೊಂದಿಗಿನ ನಮ್ಮ ಒಡನಾಟ ಮತ್ತು ಒಡಂಬಡಿಕೆ ಬಹಳ ದೂರ ಸಾಗಲಿದೆ” ಎಂದು ಸಿಯುಕೆಯ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಹೇಳಿದರು.
ಬಸವ ಸಮಿತಿ ಬೆಂಗಳೂರು ಸಹಯೋಗದಲ್ಲಿ ಸಿಯುಕೆನಲ್ಲಿ ನಡೆದ ಬಹುಭಾμÁ ವಚನ ಅನುವಾದ ಮೂರು ದಿನಗಳ (14-16 ನವೆಂಬರ್ 2022) ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸಿಯುಕೆ ಮತ್ತು ಬಸವ ಸಮಿತಿಯು ವಚನಗಳನ್ನು ಜರ್ಮನ್, ಜಪಾನೀಸ್ ಮತ್ತು ಸ್ಪ್ಯಾನಿμï ಭಾμÉಗಳಿಗೆ ಅನುವಾದಿಸುತ್ತಿವೆÉ. “ನಾವು ಜನರ ನಿರೀಕ್ಷೆಗಳನ್ನು ಪೂರೈಸಲು ಕೆಲಸ ಮಾಡುತ್ತೇವೆ ಮತ್ತು ನಮ್ಮ ಕೆಲಸವು ಜನರಿಗೆ ಮುಟ್ಟಬೇಕು ಮತ್ತು ಸಮಾಜಕ್ಕೆ ಪ್ರಯೋಜನವಾಗಬೇಕು. ವಚನ ತತ್ವ ಮತ್ತು ಸಾಹಿತ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಈ ಅನುವಾದ ಕಾರ್ಯ ಸಹಕಾರಿಯಾಗಲಿದೆ. ನಮ್ಮ ಶಿಕ್ಷಕರು ಹೆಚ್ಚು ಆಸಕ್ತಿ ಮತ್ತು ಅನುವಾದ ಯೋಜನೆಗೆ ಬದ್ಧರಾಗಿದ್ದಾರೆ. ಭಾμÁಂತರ ಕಾರ್ಯದ ಪ್ರಗತಿಯನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ” ಎಂದರು.
ಮುಖ್ಯ ಅತಿಥಿ ಹಾಗೂ ಬಸವ ಸಮಿತಿ ಅಧ್ಯಕ್ಷ, ಅರವಿಂದ ಜತ್ತಿ ಅವರು ಈ ಸಂದರ್ಭದಲ್ಲಿ ಮಾತನಾಡಿ, “ನಮ್ಮ ಒಡಂಬಡಿಕೆ ಮತ್ತು ಅನುವಾದ ಯೋಜನೆಯು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಮತ್ತು ಇದು ತುಂಬಾ ಉತ್ಪಾದಕವಾಗಿದೆ. ಸಿಯುಕೆ ಯೊಂದಿಗೆ ಕೆಲಸ ಮಾಡುವ ಅವಕಾಶಕ್ಕಾಗಿ ಗೌರವಾನ್ವಿತ ಕುಲಪತಿ ಪೆÇ್ರ. ಬಟ್ಟು ಸ್ತ್ಯನಾರಾಯಣ ಅವರಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ಜರ್ಮನಿ, ಜಪಾನ್ ಮತ್ತು ಸ್ಪೇನ್‍ನ ರಾಯಭಾರ ಕಚೇರಿಗಳನ್ನು ಈ ಕಾರ್ಯದಲ್ಲಿ ಬಳಸಿಕೊಂಡು ಈ ದೇಶಗಳಲ್ಲಿ ವಚನ ತತ್ವವನ್ನು ಹರಡಲು ಪ್ರಯತ್ನಿಸುತ್ತೇವೆ” ಎಂದರು.
ಸಿಯುಕೆಯ ಕುಲಸಚಿವರಾದ ಪೆÇ್ರ. ಬಸವರಾಜ ಡೋಣೂರ್ ಅವರು ಗೌರವ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, “ನಮ್ಮ ಕುಲಪತಿಗಳು ಈ ಒಡಂಬಡಿಕೆ ತನ್ನ ಸಂಪೂರ್ಣ ಸಾಮಥ್ರ್ಯದಿಂದ ಕೆಲಸ ಮಾಡಲು ಬಯಸುತ್ತಾರೆ. ಅವರು ವಚನ ಸಾಹಿತ್ಯ, ಚಳುವಳಿ ಮತ್ತು ತತ್ವಶಾಸ್ತ್ರದ ಮಹತ್ವವನ್ನು ಅರ್ಥಮಾಡಿಕೊಂಡಿದ್ದಾರೆ. ಅವರು ನಮ್ಮ ವಿದ್ಯಾರ್ಥಿಗಳಿಗೆ ಇಂಗ್ಲಿμï, ಹಿಂದಿ ಮತ್ತು ಕನ್ನಡ ಭಾμÉಗಳಲ್ಲಿ ವಚನ ಆಧಾರಿತ ನೈತಿಕ ಶಿಕ್ಷಣದ ಪರಿಚಯಕ್ಕೆ ಒತ್ತು ನೀಡುತ್ತಿದ್ದಾರೆ” ಎಂದರು.
ಕಾರ್ಯಕ್ರಮದಲ್ಲಿ ಪೆÇ್ರ. ವೀರಣ್ಣ ದಂಡೆ, ಪೆÇ್ರ. ಜಯಶ್ರೀ ದಂಡೆ, ಡಾ. ಸಿದ್ದಣ್ಣ ಲಂಗೋಟಿ, ಪೆÇ್ರ. ಬಿ. ಬಿ. ಪೂಜಾರ್, ಪೆÇ್ರ. ವಿಕ್ರಂ ವಿಸಾಜಿ, ಪೆÇ್ರ. ಸುಧಾ ಶ್ರೀಧರ್, ಪೆÇ್ರ.ಬಾನುಮತಿ, ಡಾ. ಪಿ. ಕುಮಾರ ಮಂಗಲಂ, ಡಾ. ಶಿವಂ ಮಿಶ್ರಾ, ಡಾ. ಪ್ರಕಾಶ ಬಾಳಿಕಾಯಿ ಹಾಗೂ ಸಿಯುಕೆ ಬಸವ ಪೀಠದ ಸಂಯೋಜಕ ಡಾ. ಗಣಪತಿ ಬಿ ಸಿನ್ನೂರ ಉಪಸ್ಥಿತರಿದ್ದರು.