ಕಲಬುರಗಿ: ಕುವೈತ ದೇಶದಲ್ಲಿ ಮನೆಕೆಲಸಕ್ಕಾಗಿ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ ಎಂದು ಕಲಬುರಗಿ ಜಿಲ್ಲಾ ಕೌಶಲ್ಯ ಮಿಷನ್ನ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಂತರಾಷ್ಟ್ರೀಯ ವಲಸೆ ಕೇಂದ್ರ ಕರ್ನಾಟಕ ಮುಖಾಂತರ ಕುವೈತ ದೇಶದಲ್ಲಿ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಅನುಭವಿಗಳು ಮತ್ತು ಹೊಸಬರಿಗೆ ಪಿಸಿಸಿ, ಪಿಡಿಓಟಿ, ಎಮಿಗ್ರೇಷನ್ ಕ್ಲಿಯರನ್ಸ್ ಸೌಲಭ್ಯಗಳು ಇದ್ದು, ವಯೋಮಿತಿ 30 ರಿಂದ 40 ವರ್ಷದೊಳಗಿರಬೇಕು. ವಿಸಾ, ವಿಸಾ ಸ್ಟಾಂಪಿಂಗ್, ವಿಮಾನ ಟಿಕೆಟ್ ಉಚಿತವಾಗಿದೆ. ಮಾಸಿಕ 30,000 ರಿಂದ 32,000 ರೂ. ವರೆಗೆ ಸಂಬಳ ಇರುತ್ತದೆ. 2 ವರ್ಷದವರೆಗೆ ಒಪ್ಪಂದ ಇರುತ್ತದೆ. ಉಚಿತವಾಗಿ ಊಟ ಮತ್ತು ವಸತಿ ಸೌಲಭ್ಯ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಯನ್ನು ಹಾಗೂ ಮೊಬೈಲ್ ಸಂಖ್ಯೆ 8197674505, 9632214436 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.