ನಾದಾನುಭವ ಸಂಗೀತ ಕಾರ್ಯಕ್ರಮ ಮತ್ತು ವೇಣು ಯಾತ್ತೆ 20ಕ್ಕೆ

0
23

ಕಲಬುರಗಿ: ಸಂಗೀತ ಆಸಕ್ತರಿಗೆಮತ್ತು ದಿನನಿತ್ಯದ ಜೀವನದಲ್ಲಿನ ಒತ್ತಡ ನಿವಾರಣೆಗಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಗೀತಗಾರರು ಮತ್ತು ಖ್ಯಾತ ಕೊಳಲುವಾದಕ ಹರಿಪ್ರಸಾದ್ ಚೌರಸಿಯಾ ಅವರ ಶಿಷ್ಯರು, ಅಂತರರಾಷ್ಟ್ರೀಯ ಖ್ಯಾತಿಯ ಕೊಳಲು ವಾದಕರಾದ ಬಾಪು ಪದ್ಮನಾಭ ರವರ ಸಾರಥ್ಯದಲ್ಲಿ ನಗರದ ಗಂಜಿನ ಲಾಹೊಟಿ ಕಲ್ಯಾಣ ಮಂಟಪದಲ್ಲಿ ನವಂಬರ್ 20 ರಂದು ಸಾಯಂಕಾಲ 6 ಗಂಟೆಗೆ “ನಾದನುಭವ” ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಧ್ಯಾನದೀಪ ಯೋಗ ಮತ್ತು ಆರೋಗ್ಯ ಕೇಂದ್ರದ  ಆಯೋಜಕ ಶರಣ ರೆಡ್ಡಿ ತಿಳಿಸಿದ್ದಾರೆ.

ಈ ಕುರಿತು ನಗರ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ಅದರೊಂದಿಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಸಂಗೀತ ಆಸಕ್ತಿ ಮೂಡಿಸಲು ಮತ್ತು ಭಾರತೀಯ ಸಂಗೀತ ವಾದ್ಯಗಳ ಪರಿಚಕ್ಕಾಗಿ ವೇಣು ಯಾತ್ರೆಯನ್ನು ಕೈಗೊಳ್ಳಲಾಗಿದೆ.  ಧ್ಯಾನದೀಪಯೋಗ ಮತ್ತು ಆರೋಗ್ಯ ಕೇಂದ್ರವುಸಂಗೀತ, ಸಾಹಿತ್ಯ, ಕಲೆ, ಯೋಗ ಮತ್ತು ಧ್ಯಾನದ ಮುಖಾಂತರ ಸಾಮಾಜಿಕ ಅರಿವನ್ನು ಮೂಡಿಸುವಲ್ಲಿ ಸತತವಾಗಿ ಪ್ರಯತ್ನ ಮಾಡುತ್ತಲಿದೆ ಮಾಹಿತಿ ನೀಡಿದ್ದರು.

Contact Your\'s Advertisement; 9902492681

ಸುದ್ದಿಗೋಷ್ಠಿಯಲ್ಲಿ ಬಾಪು ಪದ್ಮನಾಭ, ಡಾ. ದೀಪಾ ಹಜೇರಿ, ವೀರಭದ್ರಗೌಡ, ಶ್ರೀದೇವಿ ಪನಶೆಟ್ಟಿ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here