ಕಲಬುರಗಿ: ಜಿಲ್ಲಾ ಮಟ್ಟದ ಯುವಜನೋತ್ಸವ: ಹೆಸರು ನೋಂದಣಿಗೆ ಸೂಚನೆ

0
62

ಕಲಬುರಗಿ: ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 2022-23ನೇ ಸಾಲಿನ ಕಲಬುರಗಿ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು 2022ರ ಡಿಸೆಂಬರ್ 02 ರಂದು ಕಲಬುರಗಿಯ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ

ಸ್ಪರ್ಧೆಗಳ ವಿವರ ಇಂತಿವೆ. ಜನಪದ ನೃತ್ಯ, ಜನಪದ ಗೀತೆ, ಏಕಾಂಕ ನಾಟಕ, ಶಾಸ್ತ್ರೀಯ ಗಾಯನ:-(ಹಿಂದುಸ್ತಾನಿ ಮತ್ತು ಕರ್ನಾಟಕ ಶೈಲಿ) ಶಾಸ್ತ್ರೀಯ ವಾದನ( ಸಿತಾರ್, ಕೊಳಲು ,ತಬಲಾ, ವೀಣೆ, ಮೃದಂಗ) ಹಾರ್ಮೋನಿಯಂ (ಲಘು), ಗೀಟಾರ್, ಶಾಸ್ತ್ರೀಯ ನೃತ್ಯ (ಮಣಿಪುರಿ, ಒಡಿಸ್ಸಿ, ಕಥಕ್, ಕೂಚಿಪುಡಿ, ಭರತನಾಟ, ಆಶುಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

Contact Your\'s Advertisement; 9902492681

ಜಿಲ್ಲೆಯ ಯುವಕ/ಯುವತಿಯರು/ಶಾಲಾ/ಕಾಲೇಜು ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದಾಗಿರುತ್ತದೆ. ವಯೋಮಿತಿಯು 15 ರಿಂದ 29 ವರ್ಷದೊಳಗಿರಬೇಕು ಹಾಗೂ ವಯೋಮಿತಿಯ ಕುರಿತು ಎಸ್.ಎಸ್.ಎಲ್.ಸಿ.ಅಂಕಪಟ್ಟಿ, ಶಾಲಾ ವರ್ಗಾವಣೆಯ ದೃಢೀಕರಣ ಪತ್ರದ ಪ್ರತಿ ಅಥವಾ ಶಾಲೆಯಿಂದ ಹುಟ್ಟಿದ ದಿನಾಂಕದ ದೃಢೀಕರಣ ಪತ್ರ, ಆಧಾರ ಕಾರ್ಡ ಕಡ್ಡಾಯವಾಗಿ ತರುಬೇಕು. ಇಲ್ಲವಾದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮೇಲ್ಕಂಡ ದಿನದಂದು ಬೆಳಿಗ್ಗೆ 9.30 ಗಂಟೆಯೊಳಗಾಗಿ ಮೇಲ್ಕಂಡ ಸ್ಥಳದಲ್ಲಿ ಸಂಘಟಕರಲ್ಲಿ ವರದಿ ಮಾಡಿಕೊಳ್ಳುವುದು.

ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಲಿಚ್ಛಿಸುವ ವಿದ್ಯಾರ್ಥಿಗಳು 2022ರ ನವೆಂಬರ್ 30 ರೊಳಗಾಗಿ ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ಕೊನೆಯ ದಿನಾಂಕದ ನಂತರ ಬಂದ ವಿದ್ಯಾರ್ಥಿಗಳ ಹೆಸರನ್ನು ನೋಂದಣಿ ಮಾಡಿಕೊಳ್ಳಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಅಥವಾ ಮೊಬೈಲ್ ಸಂಖ್ಯೆ 9844029235ಗೆ ಸಂಪರ್ಕಿಸಲು ಕೋರಲಾಗಿದೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here