ಕಲಬುರಗಿ : ನಗರದ ಪ್ರತಿಷ್ಠಿತ ಮನ್ನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗೆ ರಾಷ್ಟ್ರ ಮಟ್ಟದ (Excellence Award in Accident and Emergency Care) ಪ್ರಶ್ತಸ್ತಿ ಪಡೆದಿದೆ ಎಂದು ಮನ್ನೂರ ಮಲ್ಟಿಸ್ಪೇಷಾಲಿಟಿ ಮುಖ್ಯಸ್ಥ ಡಾ.ಫಾರುಕ್ ಮನ್ನೂರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು 2 ವರ್ಷದ ಕಡಿಮೆ ಅವಧಿಯಲ್ಲಿ ಮನ್ನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯು ತುರ್ತು ಚಿಕಿತ್ಸೆನೀಡುವಲ್ಲಿ ಮುಚ್ಚುಣಿಯಲ್ಲಿದ್ದು ಅನೇಕ ರೋಗಿಗಳು ಗುಣಮುಖರಾಗಿದ್ದು ದೇಹಲಿ. ಬೆಂಗಳೂರು . ಹೈದ್ರಾಬಾದ್. ಮುಂಬೈ, ಚೇನೈನಲ್ಲಿ ಕಾರ್ಯನಿರ್ವಹಿಸಿದ ನೂರತ ತಜ್ಣ ವೈದ್ಯರ ತಂಡದಿಂದ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ನಗರದ ಮನ್ನೂರ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆಗಳು ಆಗುತ್ತಿದ್ದು ಇದನ್ನು ಪರಿಗಣಿಸಿ ಗ್ಲೊಬಲ್ ಹೆಲ್ಥ್ ಕೇರ್ & ವೆಲ್ ನೇಸ್ ಅವಾರ್ಡ 2022 ಕಾನಫೀರೇನ್ಸ್ ವತಿಯಿಂದ ರಾಷ್ಟ್ರ ಮಟ್ಟದ (Excellence Award in Accident and Emergency Care)ಪ್ರಶಸ್ತಿಯನ್ನು ನವೆಂಬರ 19 ರಂದು ಚೇನೈನ ಬೈ ಐಟಿಸಿ ಹೋಟೆಲ್ ನಲ್ಲಿ ಸಂಜೆ 8 ಗಂಟೆಗೆ ಪ್ರಾದಾನ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಮನ್ನೂರ್ ಆಸ್ಪತ್ರೆಗೆ ರಾಷ್ಟ್ರಮಟ್ಟದ ಪ್ರಶಸ್ತಿ ಸಿಕ್ಕಿದು ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಕ್ಷೇತ್ರಕ್ಕೆ ಹೆಮ್ಮೆಯ ವಿಷಯ ಇದಕ್ಕೆ ಮುಖ್ಯ ಕಾರಣ ಮನ್ನೂರ ಆಸ್ಪತ್ರೆಯ ವೈದ್ಯರ ಹಾಗೂ ಸಿಬ್ಬಂದಿ ಶ್ರಮ ಎಂದು ಹೇಳಬಹುದು .ಈ ಪ್ರಶಸ್ತಿಯಿಂದ ನಮ್ಮ ಆಸ್ಪತ್ರೆಗೆ ಜವಬ್ದಾರಿ ಇನ್ನೂ ಹೆಚ್ಚಾಗಿದೆ. – ಡಾ. ಫಾರುಕ್ ಮನ್ನೂರ.ಮನ್ನೂರ್ ಆಸ್ಪತ್ರೆಯ ಮುಖ್ಯಸ್ಥರು ಕಲಬುರಗಿ.