ಹಜರತ್ ಖಾಜಾ ಬಂದಾ ನವಾಜ್ (ರ.ಅ) ಜೀವನ ಚರಿತ್ರೆ ಕನ್ನಡ ಅನುವಾದ ಪುಸ್ತಕ ಬಿಡುಗಡೆ

0
148

ಕಲಬುರಗಿ: ಸೈಯದ್ ಶಾ ಖಬ್ಲೂಲ್ಲಾಹ ಹುಸೈನಿ 592ನೇ ಉರುಸ್ ನಿಮಿತ್ತ ದಕ್ಕನ್ ಭಾಗದ ಸುಪ್ರಸಿದ್ಧ ಸೂಫಿ ಸಂತ ಹಜರತ್ ಖ್ವಾಜಾ ಬಂದಾ ನವಾಜ್ (ರ.ಅ) ಜೀವನ ಚರಿತ್ರೆ ಕನ್ನಡ ಮತ್ತು ರೂಮನ್ ಇಂಗ್ಲಿಷ ಭಾಷಾಂತರ ಪುಸ್ತಕ ಶುಕ್ರವಾರ ಲೋಕಾರ್ಪಣೆ ಗೊಂಡಿತು.

ನಗರದ ಶಹಾಬಜಾರ್ ವೃತದಲ್ಲಿರುವ ಖ್ವಾಜಾ ಬಂದಾ ನವಾಜ್ ಪ್ರವಚನ ಸ್ಥಳದಲ್ಲಿ ಸಯ್ಯದ್ ರವೂಫ್ ಖಾದ್ರಿ, ಸಾವಿತ್ರಿ ತವರಖೇಡ್ ಹಾಗೂ ಸೈಯ್ಯದ್ ಅಶ್ಫಾಕ್ ಅಲಿ ಅವರ ಸಯೋಗದಲ್ಲಿ ಭಾಷಾಂತರಗೊಂಡ “ಸಿರ್ ಏ ಮೊಹಮ್ಮದಿ” (ಬಂದೇ ನವಾಜ್ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಮತ್ತು ನವೀಕರಿಸಲಾದ ಪ್ರವಚನ ನೀಡುವ ಸ್ಥಳ ಸಾರ್ವಜನಿಕರ ದರ್ಶನಕ್ಕೆ ಲೋಕಾರ್ಪಣೆ ಮಾಡಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸೈಯದ್ ಶಾ ಖಬ್ಲೂಲ್ಲಾಹ ಹುಸೈನಿ ಛೋಟಿ ದರ್ಗಾದ ಪಿಠಾಧಿಪತಿಗಳಾದ ಅಬುಲ್ ಫತಾಹ ಹಜರತ್ ಸಯ್ಯದ್ ಶಾ ಹಸನ್ ಶಬ್ಬಿರ್ ಹುಸೈನಿ, ಸಯ್ಯದ್ ಯದುಲ್ಲಾಹ ನಿಜಾಮ್ ಬಾಬಾ, ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಶರಣಬಸವಪ್ಪ ಅಪ್ಪ ಅವರ ಪುತ್ರರಾದ ಚಿರಂಜೀವಿ ದೊಡ್ಡಪ್ಪ ಅಪ್ಪಾ, ಶರಣ ಬಸವೇಶ್ವರ ಸಂಸ್ಥಾನದ ಕಾರ್ಯದರ್ಶಿ ಬಸವರಾಜ್ ದೇಶಮುಖ, ನಿಲೂರ್ ದರ್ಗಾದ ಪಿಠಾಧಿಪತಿ ಹಜರತ್ ಸಯ್ಯದ್ ಇಸ್ಲಾಮೊದ್ದಿನ್ ಅಹ್ಮದ್ ಖಾದ್ರಿ ಉರ್ಫ್ ವಸೀಮ್ ಬಾಬಾ, ಕಲಬುರಗಿಯ ಸದರ್ ಖಾಜಿ ಡಾ. ಖಾಜಿ ಹಾಮಿದ್ ಫೈಸಲ್ ಸಿದ್ದಿಕಿ, ಹವಾ ಮಲ್ಲಿನಾಥ ಮಹಾರಾಜ್ ನಿರಗುಡಗಿ, ಗುರಮಿತ್ ಸಿಂಗ್, ಪೆÇಲೀಸ್ ಆಯುಕ್ತರಾದ ಡಾ.ವೈ.ಎಸ್ ರವಿಕುಮಾರ್, ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ್, ಕಾಂಗ್ರೆಸ್ ಮುಖಂಡ ನಿಲಕಂಠ ಮೂಲಗೆ, ಡಾ. ಅಜಗರ್ ಚುಲಬುಲ್, ಶರಣುಪಪ್ಪಾ ಸೇರಿದಂತೆ ಅನೇಕರು ವೇದಿಕೆಯಲ್ಲಿ ಇದ್ದರು.

ಸೈಯದ್ ರಿಜ್ವಾನ್ ಸಿದ್ದಿಕಿ ಸ್ವಾಗತಿಸಿದರು, ಮೊಹ್ಮದ್ ಖ್ವಾಜಾ ಗೇಸುದರಾಜ್ ಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here