ಶರಣಬಸವರು ಪರಹಿತದಲ್ಲಿ ಪರಮಾತ್ಮನನ್ನು ಕಂಡವರು

0
47

ಶರಣಬಸವೇಶ್ವರರು ಪರಹಿತ ಮಾಡುವದರಲ್ಲಿಯೇ ಪರಮಾತ್ಮನನ್ನು ಕಂಡಿದ್ದರು ಎಂದು ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದ ಕನ್ನಡ ಸಹ ಪ್ರಾಧ್ಯಾಪಕರಾದ ಡಾ.ಪುಟ್ಟಮಣಿ ದೇವಿದಾಸ ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಶನಿವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.

Contact Your\'s Advertisement; 9902492681

ಶರಣರು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ದಾಸೋಹವನ್ನು ಪ್ರೀತಿಸಿದವರು, ಗೌರವಿಸಿದವರು. ಏಕೆಂದರೆ ಅಲ್ಲಿಯೇ ಸಂತೃಪ್ತಿ ಕಂಡವರು, ಒಂದು ದಿನ ಶರಣ ಸತಿ ಮಹಾದೇವಿ ತುಂಬು ಗರ್ಭಿಣಿ ಆಯಾಸಗೊಂಡು ಮಲಗಿದಾಗ ಜಂಗಮರು ದಾಸೋಹಕ್ಕಾಗಿ ಬರುತ್ತಾರೆ. ಆಗ ಶರಣರು ಮಹಾದೇವಿಯನ್ನು ಕೂಗುತ್ತಾರೆ ಆಯಾಸದಿಂದ ಎದ್ದು ಬರುವಷ್ಟರಲ್ಲಿ ಸ್ವಲ್ಪ ತಡವಾಗುತ್ತದೆ. ಮಡದಿಯ ಗರ್ಭದ ಆಯಾಸವೇ ಇದಕ್ಕೆ ಕಾರಣ ಎಂದರಿತ ಶರಣರು, ಆ ಗರ್ಭದ ಮೇಲೆ ಶಿವನಾಣೆ ಇಟ್ಟು ’ ಹಡಿಬೇಡ ಹಡಿದರೆ ದಾಸೋಹಕ್ಕೆ ಕುಂದು ಬರುತ್ತದೆ’ ಎನ್ನುತ್ತಾರೆ. ಸತಿ ಮಹಾದೇವಿಯ ಗರ್ಭ ತಡೆಯುತ್ತಾರೆ.

ಕೊಟ್ಟಂವ ಒಯಿದಾನ ಅದಕ್ಯಾಕ ಅಳಬೇಕು
ಅವನದು ಅವನಿಗೆ ಸೇರ‍್ಯಾದ | ಎನ್ನುತಾ
ಲಿಂಗಪೂಜೆ ಮಾಡುತ್ತಾ ಕುಂತಾರ ಶರಣರು

ಶರಣರು ಅರಳಗುಂಡಗಿಯಿಂದ ಕಲ್ಯಾಣದ ಕಡೆಗೆ ಹೊರಟಾಗ ಊರಿಗೆ ಊರೇ ದುಃಖಿಸುತ್ತದೆ. ಭಾಗಮ್ಮ ಎನ್ನುವ ಭಕ್ತೆಯೊಬ್ಬಳು ಮಹಾರೋಗದಿಂದ ಬಳಲುತ್ತಿದ್ದಳು. ಶರಣರು ಹೋಗುವಾಗ ಎದುರಿಗೆ ಬಂದು ನಿಲ್ಲುತ್ತಾಳೆ. ತನ್ನ ಸೀರೆಯೊಂದನ್ನು ಹಾಸಿ ಅದರ ಮೇಲೆ ನಡೆಯಲು ಶರಣರಿಗೆ ತಿಳಿಸುತ್ತಾಳೆ. ನಡೆದು ಬಂದ ಶರಣರು ಅವಳ ತಲೆಯ ಮೇಲೆ ಕೈಯಿಟ್ಟು ಹರಸುತ್ತಾರೆ. ಭಾಗಮ್ಮ ಆ ಸೀರೆಯನ್ನು ಮೈಗೆ ಸುತ್ತಿಕೊಳ್ಳುತ್ತಾಳೆ. ಅವಳ ಮೈ ಮೇಲಿನ ತೊನ್ನು ಕ್ರಮೇಣ ಮಾಯವಾಗುತ್ತದೆ.

ಒಂದು ಸಲ ಧೂಳಮ್ಮ ಎನ್ನುವ ಭಕ್ತೆ ಶರಣರಲ್ಲಿಗೆ ಬಂದು ಅವರ ಪಾದವಿಡಿದು ಅಳುತ್ತಾಳೆ. ಆಗ ಶರಣರು ಅವಳನ್ನು ಸಮಾಧಾನ ಮಾಡಿ ಮುಂದಿನ ಈ ದಿನಗಳಲ್ಲಿ ನಿನಗೆ ಗಂಡು ಮಗ ಜನಿಸುತ್ತದೆ. ಅದು ಸಾಮಾನ್ಯ ಮಗನಲ್ಲ, ಮಹಾಪುರುಷನೆ. ಧರ್ಮಕ್ಕೂ ಸಮಾಜಕ್ಕೂ ಅವನಿಂದ ಬಲ ಬರುತ್ತದೆ ಎಂದು ಹರಿಸುತ್ತಾರೆ. ಅದರಂತೆ ಅವಳು ವರ್ಷದೊಳಗೆ ತಾಯಿಯಾಗುತ್ತಾಳೆ.

ಶರಣಬಸವರು ಊರು ಬಿಟ್ಟು ಹೊರಡುವಾಗ ಕುರುಡಾದ ಮುದುಕಿ ಹತ್ತಿರ ಬಂದು ಹೇಗಿದ್ದಿಯಾ ತಾಯಿ ಎಂದು ಮಾತನಾಡಿಸುತ್ತಾರೆ. ನನಗೆ ಸಾವುಕೊಟ್ಟು ನೀನು ಮುಂದೆ ಹೋಗಪ್ಪಾ ಎಂದು ಒಂದೇ ಸವನೆ ಅಳುತ್ತಾಳೆ. ಆಗ ಶರಣರು ಮನೆಯಲ್ಲಿ ಮಾಸಿನ ಮಗಿಯ ಮೇಲೆ ಹಚ್ಚಿದ ನಂದಾದೀಪವಿದೆ. ಆ ನಂದಾದೀಪದಲ್ಲಿ ನಿನ್ನ ಕಂದನಾದ ನನ್ನನ್ನು ಕಾಣು ಎಂದು ನುಡಿಯಲು ಆ ತಾಯಿ ನನಗೆ ಕಣ್ಣೆ ಇಲ್ಲ ಹೇಗೆ ನೋಡಲಿ ಎಂದಾಗ ಆಗ ಶರಣಬಸವರು ಅವಳ ಕಣ್ಣಿನ ಮೇಲೆ ತಮ್ಮ ಶಿವಹಸ್ತಗಳನ್ನು ಇಡುತ್ತಾರೆ. ತಕ್ಷಣವೇ ಆಕೆಗೆ ಕಣ್ಣಿನ ದೃಷ್ಟಿ ಬರುತ್ತದೆ ಹೀಗೆ ಶರಣರ ಅನೇಕ ಲೀಲೆಗಳಿವೆ ಎಂದು ಹೇಳಿದರು.

ಡಾ.ಪುಟ್ಟಮಣಿ ದೇವಿದಾಸ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here