ಕಲಬುರಗಿ: ಮಾಜಿ ಶಾಸಕ ಬಿಆರ್ ಪಾಟೀಲ್ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದಲ್ಲಿ ರಾಷ್ಟ್ರೀಯ ಸುದ್ದಿವಾಹಿನಿ ಇಂಡಿಯಾ ಟೂ ಡೇ ಮತ್ತು ಸಂಪಾದಕರು ಸೇರಿ ಮೂವರ ವಿರುದ್ಧ ಆಳಂದ ಕ್ಷೇತ್ರದ ಮಾಜಿ ಶಾಸಕ ಬಿ.ಆರ್ ಪಾಟೀಲ್ ಸಲ್ಲಿಸಿದ ದೂರಿಗೆ ಕಲಬುರಗಿ ಹೈ ಕೋರ್ಟ್ ಬುಧವಾರ ತಡೆ ಆಜ್ಞೆ ನೀಡಿದೆ.
ರಾಷ್ಟ್ರೀಯ ಸುದ್ದಿವಾಹಿನಿ ಇಂಡಿಯಾ ಟೂ ಡೇ ಮತ್ತು ಮುಖ್ಯಸ್ಥ ಅರುಣ್ ಪುರಿ, ಖ್ಯಾತ ನಿರೂಪಕ ರಾಜದೀಪ್ ಸರ್ ದೇಸಾಯಿ ಹಾಗೂ ಶಿವ ಅರೂರ್ ವಿರುದ್ಧ ಶಿಕ್ಷಾರ್ಹ U/sec.499 ಮತ್ತು 500. PCR ಸಂಖ್ಯೆ. 210/2017 ದೂರು ದಾಖಲಿಸಲಾಗಿತ್ತು. ನಂತರ ಅದನ್ನು 5ನೇ ಹೆಚ್ಚುವರಿ ನ್ಯಾಯಧೀಶರು ನಂತರ CC ಸಂಖ್ಯೆ. 5957/2019 ನೋಂದಾಯಿಸಿಕೊಂಡು ವಿಚಾರಣೆ ನಡೆಸಿ ಇಂಡಿಯಾ ಟೂ ಡೇ ಮತ್ತು ಟೈಮ್ಸ್ ನೌವು ನಿರೂಪಕರಾಗಿದ್ದ ಅರನಬ್ ಗೋ ಸ್ವಾಮಿ ಸೇರಿದಂತೆ ನಾಲ್ಕು ಸಮನ್ಸ್ ಜಾರಿ ಮಾಡಿತ್ತು. ಇದೀಗ ಇಂಡಿಯಾ ಟೂ ಡೇಯ ಮೂವರಿಗೆ ಕಲಬುರಗಿ ನ್ಯಾಯಲಯ ಮುಂದಿನ ವಿಚಾರಣೆ ದಿನಾಂಕದ ವರೆಗೆ ಸ್ಟೇ ನೀಡಿದೆ.
ಇಂಡಿಯಾ ಟೂ ಡೇ ಮತ್ತು ಟೈಮ್ಸ್ ನೌವು ರಾಷ್ಟ್ರೀಯ ಸುದ್ದಿವಾಹಿನಿಗಳು ಆಳಂದ ಕ್ಷೇತ್ರದ ಮಾಜಿ ಶಾಸಕ ಬಿ.ಆರ್ ಪಾಟೀಲ್ ಅವರು ಹೋಟಲ್ ಒಂದರಲ್ಲಿ ಕುಳಿತು ರಾಜ್ಯ ಸಭೆ ಅಭ್ಯರ್ಥಿಯಿಂದ ಅಮೇಶಕ್ಕೆ ಒಳಗಾಗಿ ಹಣ ಪಡೆದು, ಒಟ್ನ್ನು ಕೂಡುವ ಚರ್ಚೆ ನಡೆದಿದೆ ಎನ್ನುವ ಅರ್ಥದಲ್ಲಿ, “ಸೀಟ್ಸ್ ಫಾರ್ ಸೇಲ್ ಮತ್ತು ರಾಜ್ಯ ಸಭಾ ಬಜಾರ್” ಎಂಬ ಟೈಟಲ್ಗಳನ್ನು ನೀಡಿ 2017ರಲ್ಲಿ ಸುದ್ದಿ ಪ್ರಸಾರ ಮಾಡಿತ್ತು.
ಸುಳ್ಳು ಆರೋಪ ಮಾಡಿ ಮಾನಹಾನಿ ಮತ್ತು ತೇಜೂವಧೆ ಮಾಡಿರುವ ಬಗ್ಗೆ ಬಿ.ಆರ್ ಪಾಟೀಲ್ ಅವರು ಎರಡು ಸುದ್ದಿವಾಹಿನಗಳ ನಿರೂಪಕರು ಮತ್ತು ಸಂಪಾದಕರ ವಿರುದ್ಧ 2017ರಲ್ಲಿ ಬೆಂಗಳೂರು ಹೈ ಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದರು.