ಆಳಂದ: ಪಟ್ಟಣ ವ್ಯಾಪ್ತಿಯಲ್ಲಿ ಬರುವ ಎಲ್ಲಾ 96 ಕ್ಷಯರೋಗಿಗಳಿಗೆ ಪ್ರೋಟೀನ್ ಪೌಡರ್ ಹಂಚುವ ಕಾರ್ಯಕ್ರಮವನ್ನು ಆಳಂದ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು.
ತಾಲ್ಲೂಕು ಆರೋಗ್ಯ ಅಧಿಕಾರಿಗಳು ಡಾ. ಸುಶೀಲಕುಮಾರ ಅಂಬೂರೆ ಅವರು ಕ್ಷಯ ರೋಗಿಗಳಿಗೆ ಪ್ರೋಟೀನ್ ಪೌಡರ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ. ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕೇಂದ್ರ ಮತ್ತು ತಾಲ್ಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಆಳಂದ ಇವರಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮ.
ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಮಹತ್ವದ ಕಾರ್ಯ ಕೈಗೊಂಡಿದ್ದು 2025 ರೊಳಗೆ ಕ್ಷಯ ಮುಕ್ತ ಭಾರತ ಮಾಡಲು ನೀ – ಕ್ಷಯ ಮಿತ್ರ ಅ್ಯಪ್ ಮುಖಾಂತರ ನೋಂದಣಿ ಮಾಡಿಕೊಂಡು ಕ್ಷಯರೋಗದಿಂದ ಬಳಲುತ್ತಿರುವವರಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ಹಿರಿಯ ಕ್ಷಯರೋಗ ಮೇಲ್ವಿಚಾರಕರು ಡಾ. ವಿಶಾಲ ಸಜ್ಜನ್ , ಹಿರಿಯ ಕ್ಷಯ ರೋಗ ಪ್ರಯೋಗಶಾಲಾ ತಂತ್ರಜ್ಞ ಮೇಲ್ವಿಚಾರಕರು ರುದ್ರಮುನಿ ಸ್ಥಾವರಮಠ , ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು ಅಬ್ದುಲ್ ರವೂಫ್ , ತಾಲ್ಲೂಕು ಹಿರಿಯ ಪ್ರಾಥಮಿಕ ಸುರಕ್ಷತಾ ಅಧಿಕಾರಿಗಳು ವಿಜಯಲಕ್ಷ್ಮಿ , ತಾಲ್ಲೂಕು ಫಾರ್ಮಸಿ ಅಧಿಕಾರಿಗಳು, ಟಿ.ಬಿ.ಹೆಚ್.ವಿ, ನರಸಪ್ಪಾ ಆಕಾರ, ಆರೋಗ್ಯ ನಿರೀಕ್ಷಣಾ ಅಧಿಕಾರಿ ಸಂತೋಷ ಚವ್ಹಾಣ , ಸಮುದಾಯ ಆರೋಗ್ಯ ಅಧಿಕಾರಿ ಮೀನಾಕ್ಷಿ , ಮತ್ತು ಇತರೆ ಆಳಂದ ತಾಲ್ಲೂಕು ಆರೋಗ್ಯ ಅಧಿಕಾರಿಗಳು , ಆಶಾ ಕಾರ್ಯಕರ್ತೆಯರು, ಕ್ಷಯರೋಗಿಗಳು, ಹಾಗೆ ಕಾರ್ಯಾಲಯದ ಸಿಬ್ಬಂದಿಗಳು ಹಾಜರಿದ್ದರು.