ಸಮಾಜ ಸೇವೆಗೆ ಶಿವಶರಣ ಪರಪ್ಪಗೋಳ ಅವರಿಗೆ ಕರ್ನಾಟಕಜ್ಯೋತಿ ಪ್ರಶಸ್ತಿ

0
131

ಕಲಬುರಗಿ: ಭಾರತೀಯ ಕಲಾ ಸಾಸ್ಕೃತಿಕ ಅಕಾಡೆಮಿ(ರಿ) ದಾವಣಗೆರೆ, ವತಿಯಿಂದ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನಾಡಿನ ಸಾಧಕರಿಗೆ ಪ್ರತಿ ವರ್ಷ ಸಮಾಜಸೇವೆ, ಕಲೆ, ಸಾಹಿತ್ಯ, ಶಿಕ್ಷಣ, ಪತ್ರಿಕಾಎರಂಗ, ವೈದ್ಯಕೀಯ, ಸಂಗೀತ, ಕ್ರೀಡಾಕ್ಷೇತ್ರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕರ್ನಾಟಕ ಜ್ಯೋತಿರಾಜ್ಯ ಪ್ರಶಸ್ತಿಯು ನೀಡಿ ಗೌರವಿಸಲಾಗುತ್ತದೆ.

ಅದೇರೀತಿಯಾಗಿ ಈ ವರ್ಷ ೨೦೧೮-೧೯ ನೇ ಸಾಲಿನ ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿಯನ್ನು ಕನ್ನಡ ನಾಡು, ನುಡಿ ಸಮಾಜ ಸೇವೆಗಾಗಿ ಅನೇಕ ಕಾರ್ಯಗಳನ್ನು ಮಾಡುತ್ತಾ ನಿಸ್ವಾರ್ಥದಿಂದ ಶ್ರಮಿಸುತ್ತಿರುವ ಕಲಬುರಗಿಜಿಲ್ಲೆಯ ಕಲಬುರಗಿ ತಾಲ್ಲೂಕಿನ ಜೋಗುರ ಗ್ರಾಮದ ಶಿವಶರಣ ಯ ಪರಪ್ಪಗೋಳ ಅವರಿಗೆ ಅವರ ಒಂದು ಸಾಧನೆಯನ್ನು ಗುರುತಿಸಿ ಈ ಒಂದು ಪ್ರಶಸ್ತಿಯನ್ನು ನೀಡಲಾಗುತ್ತಿದೆಎಂದು ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿಯ ಸಂಸ್ಥಾಪಕರು ಮತ್ತು ರಾಜ್ಯಾಧ್ಯಕ್ಷರಾದ ಎನ್ ಮಲ್ಲೇಶಪ್ಪ ಈ ಮೂಲಕ ತಿಳಿಸಿದ್ದಾರೆ.

Contact Your\'s Advertisement; 9902492681

ವಿದ್ಯಾರ್ಥಿದೆಸೆಯಿಂದಲೇ ಸಾಕಷ್ಟು ರೀತಿಯಲ್ಲಿ ಸಮಾಜ ಸೇವೆ ಮಾಡಿದ, ಮತ್ತು ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿ ಯುವ ಜನರಿಗೆ ಶಿವಶರಣ ಪರಪ್ಪಗೋಳ ಸ್ಪೂರ್ತಿಯಾಗಿದ್ದಾರೆ. ಪರಿಸರ ಸಂರಕ್ಷಣೆ, ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಎಳೆ ಮರೆ ಕಾಯಿಯಂ vs ಸೇವೆ ಸಲ್ಲಿಸುತ್ತಿರುವ ಶಿವಶರಣ ಯ ಪರಪ್ಪಗೋಳ ಅವರಿಗೆ ಈ ಒಂದು ಪ್ರಶಸ್ತಿಯನ್ನು ನೀಡುತ್ತಿರುವುದು ನಮಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಶಿವಶರಣ ಪರಪ್ಪಗೋಳ ಪ್ರಸ್ತುತ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ರಾಜ್ಯ ಮಟ್ಟದ ಕರ್ನಾಟಕ ಜ್ಯೋತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅಕಾಡೆಮಿಯ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.

ಇದೇ ಅಗಷ್ಟ ೧೮, ೨೦೧೯ ರಂದು ದಾವಣಗೆರೆ ಯಚನ್ನಗಿರಿ ವಿರೂಪಾಕ್ಷಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಗುತ್ತದೆ ಎಂಂದು ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿಯ ರಾಜ್ಯಾಧ್ಯಕ್ಷರಾದ ಎನ್.ಮಲ್ಲೇಶಪ್ಪ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here