ಸ್ತ್ರೀ ಸಾಮಥ್ರ್ಯಯೋಜನೆಯಡಿ 5 ಲಕ್ಷ ಹೆಣ್ಣು ಮಕ್ಕಳಿಗೆ ಸ್ವಯಂ ಉದ್ಯೋಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

0
12

ಬೆಂಗಳೂರು: ಸ್ತ್ರೀ ಸಾಮಥ್ರ್ಯ ಯೋಜನೆಯಡಿ ಇದೇ ವರ್ಷ ಸುಮಾರು 5 ಲಕ್ಷ ಹೆಣ್ಣು ಮಕ್ಕಳಿಗೆ ಕರ್ನಾಟಕದಲ್ಲಿ ಉದ್ಯೋಗ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಇಂದು ವಿಧಾನಸೌದ ಬ್ಯಾಂಕ್ವೆಟ್ ಹಾಲ್ನಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ರಜತ ಮಹೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

Contact Your\'s Advertisement; 9902492681

ಸ್ತ್ರೀ ಸಾಮಥ್ರ್ಯ ಯೋಜನೆಯಡಿ ಪ್ರತಿಯೊಂದು ಗ್ರಾಮದ ಎರಡು ಸಂಘಗಳ ಯೋಜನೆಗಳನ್ನು, ಉತ್ಪಾದನೆಗಳನ್ನು ಗುರುತಿಸಿ, ತರಬೇತಿ ನೀಡಿ, ಮಾರುಕಟ್ಟೆಗೆ ಜೋಡಿಸಿ, 1.50 ಲಕ್ಷ ರೂ.ಗಳನ್ನು ಸರ್ಕಾರದಿಂದನೀಡಲಾಗುವುದು ಎಂದರು.

ಮಹಿಳಾ ಆಯೋಗಕ್ಕೆ ಹೆಚ್ಚಿನ ಶಕ್ತಿ ತುಂಬುವ ಪ್ರಯತ್ನಮಾಡುವ ಜೊತೆಗೆ ಪರಿಣಾಮಕಾರಿ ಕೆಲಸ ಮಾಡಲು ಬೇಕಾಗುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಮಹಿಳಾ ಆಯೋಗದಿಂದ ದೂರುಗಳು ಬಂದರೆ 7 ರಿಂದ 8 ಗಂಟೆಯೊಳಗೆ ರಿಜಿಸ್ಟರ್ ಮಾಡಿ ತನಿಖೆ ನಡೆಸುವಂತೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ನಿರ್ಭಯ ಯೋಜನೆ ಕುರಿತು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲಾಗುತ್ತಿದ್ದು, ಯೋಜನೆಯಡಿ 7,500 ಕ್ಯಾಮರಾಗಳನ್ನು ಅಳವಡಿಸಲಾಗಿದೆ.ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ತಾಯಿ ಮತ್ತು ಮಗುವಿಗೆ ಪೌಷ್ಠಿಕ ಆಹಾರ ಒದಗಿಸಲಾಗುತ್ತಿದೆ. ಗರ್ಭಿಣಿ ಸ್ತ್ರೀಯರಿಗೆ ಐರನ್ ಮಾತ್ರೆ ನೀಡಲಾಗುತ್ತಿದೆ. ಗರ್ಭಿಣಿ ಮಹಿಳೆಯರು ಕೆಲಸ ನಿರ್ವಹಿಸುವ ಕಡೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕೆಲಸ ನಿರ್ವಹಿಸುವ ಮಹಿಳೆಯರಿಗಾಗಿ 5 ಪ್ರಮುಖ ನಗರಗಳಲ್ಲಿ ಮಹಿಳಾ ಹಾಸ್ಟೆಲ್ಗಳನ್ನು ನಿರ್ಮಿಸಲಾಗಿದ್ದು, ಉನ್ನತ ವ್ಯಾಸಂಗ ಮಾಡುವ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಅಂಗನವಾಡಿ, ಆಶಾ ಕಾರ್ಯಕರ್ತರಿಗೆ , ಅಡಿಗೆ ಮಾಡುವವರಿಗೆ ವೇತನ ಹೆಚ್ಚಿಸಿದ್ದು, ಎನ್ಪಿಎಸ್ ಯೋಜನೆಯನ್ನು ಮರು ಜಾರಿ ಮಾಡಲಾಗಿದೆ.ಒಂದೇ ವರ್ಷದಲ್ಲಿ 4 ಸಾವಿರ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ.ತಳಹಂತದಿಂದ ಹಿಡಿದು ಮೇಲಿನ ಹಂತದವರೆಗಿನ ಮಹಿಳೆಯರಿಗೆಎಲ್ಲಾ ರೀತಿಯ ಪ್ರೋತ್ಸಾಹ ನೀಡಲಾಗುತ್ತಿದೆ.ಮಹಿಳೆಯರು ಸಬಲರಾದರೆ ದೇಶ ಸಬಲವಾದಂತೆ.ಸರ್ಕಾರದಿಂದ ಎಷ್ಟು ಮಾಡಲು ಸಾಧ್ಯವೊ ಅಷ್ಟನ್ನು ಮಾಡಿ, ದೇಶ ಕಟ್ಟಲು ತಾಯಂದಿರನ್ನು ಸಶಸ್ತ್ರರನ್ನಾಗಿ ಮಾಡಲಾಗುವುದು ಎಂದರು.

ಸ್ತ್ರೀ ಬಹಳ ವಿಶೇಷವಾಗಿರುವ ಸೃಷ್ಟಿಕರ್ತನ ಸೃಷ್ಟಿ.ಭೂಮಿಗೆ ಬರುವ ಮುಂಚೆ ಜನ್ಮ ಕೊಡುವ ಸಂಬಂಧ ಯಾವುದಾದರೂ ಇದ್ದರೆ, ಅದು ತಾಯಿ ಸಂಬಂಧ. ಎಲ್ಲಾ ತಾಯಂದಿರು ಶ್ರೇಷ್ಠ.ತಾಯಿಯ ವಾತ್ಸಲ್ಯ ಪವಿತ್ರವಾದುದು. ನಿಸರ್ಗ ಅಂತಹ ಶ್ರೇಷ್ಠ ಸ್ಥಾನ ನೀಡಿದೆ.ಪುರಾಣ ದೇವತೆ ಸ್ಥಾನ ನೀಡಿದೆ.ಆದರೆ ಸಮಾಜ ಕೊಡುತ್ತಿಲ್ಲ.ಕೆಲವರು ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಇದು ರಾಕ್ಷಸಕೃತ್ಯವಾಗಿದ್ದು, ಕಠಿಣ ಕಾನೂನು ಕ್ರಮ ಜರುಗಿಸಿದರು, ಮಹಿಳೆಯ ಮೇಲಿನ ದೌರ್ಜನ್ಯ ಕಡಿಮೆಯಾಗುತ್ತಿಲ್ಲ. ಇದನ್ನು ತಡೆಯಲು ಇನ್ನೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಮಹಿಳೆಯರ ರಕ್ಷಣೆಗಾಗಿ, ಗೌರವಕ್ಕಾಗಿ ಕೆಲಸ ಮಾಡುತ್ತಿರುವ ರಾಜ್ಯ ಮಹಿಳಾ ಆಯೋಗವು 25 ವರ್ಷಗಳನ್ನು ಪೂರೈಸಿ ರಜತ ಮಹೋತ್ಸವ ಆಚರಿಸುತ್ತಿರುವುದಕ್ಕೆ ಶುಭಾಷಯ ಕೋರಿದರು.

ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಕೇಂದ್ರ ಸಚಿವೆ ಕು: ಶೋಭಾ ಕರಂದ್ಲಾಜೆ ಮಾತನಾಡಿ,ಮಹಿಳಾ ಆಯೋಗವನ್ನು ಆರಂಭ ಮಾಡಿದಾಗ ಯಾವ ಪರಿಸ್ಥಿತಿಯನ್ನು ಆಯೋಗವು ಎದುರಿಸುತ್ತಿತ್ತೋ ಅದಕ್ಕಿಂತ ಈಗ ಗಂಭೀರ ಪರಿಸ್ಥಿತಿ ಇದೆ ಎಂದು ಸಮಾಜ ನೋಡಿದಾ ಗೊತ್ತಾಗುತ್ತದೆ.ಇಂದು ಮಹಿಳೆಯರಿಗೆ ಹೆಚ್ಚು ಸ್ವಾತಂತ್ರ್ಯ, ನ್ಯಾಯದ, ಭದ್ರತೆಯ ಅಗತ್ಯ ಇದೆ ಎಂದರು.

ಮಹಿಳೆಗೆ ಶಿಕ್ಷಣ , ಆರ್ಥಿಕ ಸ್ವಾವಲಂಬನೆ ದೊರೆತಾಗಹೆಚ್ಚು ಸದೃಢಳಾಗುತ್ತಾಳೆಎಂಬ ಕಲ್ಪನೆಯಿತ್ತು.ಆದರೆ ಇಂದು ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯವನ್ನು ನೋಡಿದರೆ, ನಮ್ಮನ್ನು ನಾವು ಕಾಪಾಡಿಕೊಳ್ಳಲು ಶಕ್ತರಾಗಿದ್ದೇವೆಯೆ? ದೌರ್ಜನ್ಯದಿಂದ ಮುಕ್ತರಾಗುವುದು ಯಾವಾಗ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.

ಪ್ರಧಾನಮಂತ್ರ್ರಿ ನರೇಂದ್ರ ಮೋದಿಯವರುಹೆಣ್ಣು ಮಕ್ಕಳು ಆಚೆ ಹೋದಾಗ ಯಾಕೆ ಇಷ್ಟು ತಡವಾಗಿ ಬಂದೆ ಎಂದು ಪ್ರಶ್ನೆ ಮಾಡುವಂತೆಗಂಡು ಮಕ್ಕಳಿಗೂ ಪ್ರಶ್ನೆ ಮಾಡಬೇಕು.ಮಹಿಳೆಯರಿಗೆ ಇರುವ ಜವಾಬ್ದಾರಿಯನ್ನುಗಂಡುಮಕ್ಕಳಿಗೂ ವಹಿಸಬೇಕು ಎಂದು ಹೇಳಿರುವಂತೆ, ಸಮಾಜ ಮಾಡಿದಾಗ ಹೆಣ್ಣ ಮಕ್ಕಳಿಗೆ ರಕ್ಷಣೆ ಸಿಗುತ್ತದೆ ಎಂದರು.

ಸರ್ಕಾರ ಹೆಚ್ಚು ನಿರ್ಧಾರ ತೆಗೆದುಕೊಳ್ಳಬೇಕು.ಆರು ತಿಂಗಳೊಳಗೆಪ್ರಕರಣಗಳು ಇತ್ಯರ್ಥ ಆಗುವ ರೀತಿಯಲ್ಲಿ ಆಯೋಗಕ್ಕೆ ಶಕ್ತಿ ಸಿಗಬೇಕು. ವಕೀಲರನ್ನು ನೇಮಿಸಬೇಕು,ಆಯೋಗಕ್ಕೆ ಬಲವಾದ ಶಕ್ತಿ ನೀಡಿ, ಹೆಣ್ಣು ಮಕ್ಕಳು ಸುರಕ್ಷಿತವಾಗಿ, ಗೌರವಯುತವಾಗಿ ಬಾಳುವಂತಾಗಬೇಕು ಎಂದರು.

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ರೇಖಾ ಶರ್ಮಾ ಮಾತನಾಡಿ ರಾಜ್ಯ ಸರ್ಕಾರವು ಮಹಿಳಾ ಆಯೋಗಕ್ಕೆ ಅತ್ಯುತ್ತಮ ಬೆಂಬಲ ನೀಡಿ, ಮಹಿಳೆಯರಿಗೆ ಹಲವಾರು ಯೋಜನೆಗಳನ್ನು ರೂಪಿಸಿ ಪ್ರೋತ್ಸಾಹಿಸುತ್ತಿದೆ. ಮಹಿಳೆಯರುಈ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಸಬಲರಾಬೇಕೆಂದರು.

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ಆರ್. ಪ್ರಮೀಳಾ ನಾಯ್ಡು ಮಾತನಾಡಿ , ಆಯೋಗವು ಮಹಿಳೆಯರ ಏಳಿಗೆಗಾಗಿ, ರಕ್ಷಣೆಗಾಗಿ, ಹಕ್ಕುಗಳನ್ನು ದೊರಕಿಸಿ ಕೊಡಲು ದುಡಿಯುತ್ತಿದೆ.ಮಹಿಳೆಯರು ಗೌರವದಿಂದ ಬಾಳಬೇಕು ಎಂದರು.

ಕೋವಿಡ್ ಸಮಯದಲ್ಲಿ ಆಯೋಗವು 22 ಗರ್ಭಿಣಿ ಸ್ತ್ರೀಯರನ್ನು ಉಳಿಸಿದೆ.ಗಂಭೀರ ಪ್ರಕರಣಗಳಲ್ಲಿ ಆಯೋಗವು ಹೆಣ್ಣು ಮಕ್ಕಳ ಜೊತೆಯಿದ್ದು, ಕೆಲಸ ಮಾಡುತ್ತಿದೆ.ಮಾನ್ಯ ಮುಖ್ಯಮಂತ್ರಿಗಳು ಆಯೋಗಕ್ಕೆಸಂಪೂರ್ಣ ಬೆಂಬಲ ನೀಡಿದ್ದು, ಆಸಿಡ್ ಸಂತ್ರಸ್ತರಿಗೆ ನೀಡುತ್ತಿದ್ದ 3 ಸಾವಿರ ರೂ.ಗಳಮಾಸಾಶನವನ್ನು 10 ಸಾವಿರ ರೂಗಳಿಗೆ ಹೆಚ್ಚಿಸಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಶ್ರೀಮತಿ ಡಾ: ಎನ್. ಮಂಜುಳಾ ಅವರು ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವ ನುಡಿಗಳನ್ನಾಡಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಆಯೋಗದಿಂದ ಮಾತ್ರ ನಿಯಂತ್ರಿಸಲು ಸಾಧ್ಯವಿಲ್ಲ.ಸಮಾಜದಲ್ಲಿಬದಲಾವಣೆಯಾಗ ಬೇಕು.ಪ್ರತಿ ಮನೆಯಲ್ಲಿಯೂ ಹೆಣ್ಣು ಮಕ್ಕಳಿಗೆ ಗೌರವ ಕೊಡುವಂತೆ, ಗಂಡು ಮಕ್ಕಳಿಗೆ ಚಿಕ್ಕಂದಿನಿಂದಲೇ ಪೋಷಕರು ಅರಿವು ಮೂಡಿಸಬೇಕು.ಆಗ ಮಾತ್ರ ಮಹಿಳೆಯರ ಮೇಲಾಗುವ ದೌರ್ಜನ್ಯವನ್ನು ತಡೆಯಬಹುದು ಎಂದರು.

ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರು 9 ಮಹಿಳಾ ಸಾಧಕರಿಗೆ ಪುರಸ್ಕಾರ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಸಂಸದರಾದ ಪ್ರತಾಪ ಸಿಂಹ, ಶಾಸಕರಾದ ಶ್ರೀಮತಿ ರೂಪಾಲಿ ನಾಯ್ಕ್, 7 ರಾಜ್ಯಗಳಿಂದ ಆಗಮಿಸಿದ ಮಹಿಳಾ ಆಯೋಗದ ಪ್ರತಿನಿಧಿಗಳು, ಸಂಘಸಂಸ್ಥೆಗಳ ಮಹಿಳಾ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here