ಸೇಡಂ:ಸೇಡಂ ಮತಕ್ಷೇತ್ರದ ಬಹುತೇಕ ಕಡೆ ಬೆಳೆದು ಫಸಲಿಗೆ ಬಂದ ತೊಗರಿ ಬೆಳೆ ಒಣಗಿ ನಷ್ಟವಾಗಿದ್ದು, ಇದರಿಂದ ಬೆಳೆಯನ್ನೇ ನಂಬಿಕೊಂಡಿದ್ದ ರೈತರಿಗೆ ದಿಕ್ಕು ಕಾಣದಂತಾಗಿದ್ದು, ಸರ್ಕಾರ ಕೂಡಲೇ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಸೇಡಂ ಮತಕ್ಷೇತ್ರದ ಜೆಡೆಎಸ್ ಅಭ್ಯರ್ಥಿ ಬಾಲರಾಜ್ ಗುತ್ತೇದಾರ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಅತಿವೃಷ್ಟಿ ಅನಾವೃಷ್ಟಿ ಅಲ್ಲದೆ, ಅಳಿದುಳಿದು ಫಸಲಿಗೆ ಬಂದ ತೊಗರಿ ಬೆಳೆ ನೇಟೆರೋಗವೂ ಅಥವಾ ತೇವಾಂಶ ಕೊರತೆಯೂ ಹೀಗೆ ಇನ್ಯಾವುದೋ ಕಾರಣಕ್ಕೆ ಕೈಗೆಬಂದ ಬೆಳೆ ಶೇ 90ರಷ್ಟು ಬೆಳೆ ನಷ್ಟವಾಗಿ ರೈತರು ಕಂಗಾಲಾಗಿದ್ದಾರೆ. ಈ ಕುರಿತು ತಕ್ಷಣವೇ ಸರ್ವೇ ನಡೆಸಿ ಕೂಡಲೇ ಸಂತ್ರಸ್ತ ರೈತರಿಗೆ ಪರಿಹಾರ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.