ಸುರಪುರ: ನಗರದ ಶ್ರೀ ಜನನಿ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ತಾಲೂಕಿನ ವಗಣಗೇರಾ ಕೋಟೆಗೆ ಭೇಟಿ ನೀಡಿ ವಿಕ್ಷಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕಿ ಶ್ರೀದೇವಿ ನಾಯಕ ಮಾತನಾಡಿ, ಸ್ಮಾರಕಗಳ ಪ್ರತ್ಯೇಕ್ಷವಾಗಿ ಕಂಡು ಇತಿಹಾಸವನ್ನು ತಿಳಿದಿಕೊಳ್ಳುವುದು ಹೆಚ್ಚು ಪರಿಣಾಮಕಾರಿ. ವಿಶ್ವದ ಇತಿಹಾಸವನ್ನು ಅಭ್ಯಸಿಸುವ ನಾವು ನಮ್ಮ ಸ್ಥಳೀಯ ಇತಿಹಾಸವನ್ನು ಕಡೆಗಣಿಸಿರುತ್ತೇವೆ. ಮೊದಲು ನಮ್ಮ ಇತಿಹಾಸವನ್ನು ತಿಳಿಯಬೇಕು ಎಂದರು.
ವಾಗಣಗೇರಾ ಕೋಟೆ ಸುರಪುರದ ಗೋಸಲ ವಂಶಜರು ನಿರ್ಮಿಸಿದರು. ಸುರಪುರಕ್ಕೆ ಮೊದಲು ವಾಗಣಗೇರಿ ಅವರ ರಾಜಧಾನಿಯಾಗಿತ್ತು. ಮೊಘಲ್ ಸಾಮ್ರಾಟ ಔರಂಗಜೇಬನನ್ನು ಇದೆ ಕೋಟೆಯಲ್ಲಿ ಸೋಲಿಸಿದರು. ಈ ಮೂಲಕ ದಕ್ಷಿಣ ಭಾರತದ ದೇಗುಲಗಳನ್ನು ರಕ್ಷಿಸಿದ ಕೀರ್ತಿ ಇಲ್ಲಿಯ ರಾಜರದ್ದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜೇಶ್ವರಿ ಘಂಟಿ ಉಪನ್ಯಾಸಕರಾದ ಡಾ. ಆದಿಶೇಷ ನೀಲಗಾರ, ವೆಂಕಟೇಶ ಜಾಲಗಾರ,. ತಿರುಪತಿ ಕೆಂಭಾವಿ, ಅಂಬ್ರೇಶ ಚಿಲ್ಲಾಳ, ಮಹೇಶಕುಮಾರ ಗಂಜಿ, ಬೀರೇಶ ದೇವತ್ಕಲ್, ನಬಿಸಾಬ, ನಂದಿನಿ ಅಸಗಳ್ಳಿ, ಪ್ರಿಯಾ, ಭೀಮಬಾಯಿ. ಮರೇವ್ವ ಕಟ್ಟಮನಿ, ಹಾಗೂ ಪ್ರಥಮ ಧರ್ಜೆ ಸಹಾಯಕರಾದ ಶೃತಿಗೌಡ, ಗುರಮ್ಮ ಕೆಂಪಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.