ಸುರಪುರ : ನಗರದ ಸರಕಾರಿ ಕನ್ಯಾ ಮಾದರಿಯ ಪ್ರಾಥಮಿಕ ಶಾಲೆ (ದರಬಾರ) ಆವರಣದಲ್ಲಿ ಸುರಪುರ-ಹುಣಸಗಿ ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ಸಂಘದ ಉದ್ಘಾಟನೆ ಕಾರ್ಯಕ್ರಮ ಜರುಗಿತು.
ಯಾದಗಿರಿಯ ಸಾಶಿಇಯ ಉಪ ನಿರ್ದೇಶಕರ ಕಚೇರಿಯ ಪತ್ರಾಂಕಿತ ಸಹಾಯಕ ಮಧುಸೂಧನ ರೆಡ್ಡಿ ಉದ್ಘಾಟಿಸಿ ಮಾತನಾಡಿ, ಸಂಘದ ನೂತನ ಪದಾಧಿಕಾರಿಗಳು ಒಗ್ಗಟ್ಟಿನಿಂದ ಸಂಘ ಮುನ್ನೆಡಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧ್ಯಕ್ಷ ಆದೆಪ್ಪ ಬಾಕಲಿ ಮುಖ್ಯ ಅತಿಥಿಯಾಗಿದ್ದರು. ಸಂಘದ ಲಕ್ಷ್ಮೀಕಾಂತ ರೆಡ್ಡಿ, ಶಹಪೂರದ ಮಲ್ಲಿಕಾರ್ಜುನ ಪೋಸ್ಟಿ ವೇದಿಕೆಯಲ್ಲಿದ್ದರು. ಶಿಕ್ಷಕರಾದ ಸೋಮರೆಡ್ಡಿ ಮಂಗೀಹಾಳ,ಶರಣಬಸವ ಗಚ್ಚಿನಮನಿ, ಶ್ರೀಶೈಲ್ ಯಂಕಂಚಿ, ಚನ್ನಪ್ಪ ಹೂಗಾರ ಸೇರಿ ತಾಲೂಕಿನ ಪ್ರಥಮ, ದ್ವಿತೀಯ ದರ್ಜೆ ಮತ್ತು ಡಿ ದರ್ಜೆ ನೌಕರರು ಇದ್ದರು. ಸುರಪುರ ಬಿಇಒ ಕಚೇರಿಯ ಪತ್ರಾಕಿಂತ ವ್ಯವಸ್ಥಾಪಕ ಜಗದೀಶ್ ಚಂದ್ರ ಪ್ರಾಸ್ತಾವಿಕ ಮಾತನಾಡಿದರು. ಪದ್ಮಾವತಿ ಸ್ವಾಗತಿಸಿದರು. ಸೋಮನಗೌಡ ನಿರೂಪಿಸಿದರು. ಮಹೇಶ್ ವಂದಿಸಿದರು. ಬೋಧಕೇತರ ನೌಕರರ ಸಂಘ ತಾಲೂಕು ಘಟಕಕ್ಕೆ ಪದಾಧಿಕಾರಿಗಳ ನೇಮಕ ಜರುಗಿತು.
ಸಂಘದ ನೂತನ ಪದಾಧಿಕಾರಿಗಳು : ಜಗದೀಶ್ ಬೇಲಿ (ಗೌರವಾಧ್ಯಕ್ಷ), ನಿರ್ಮಲಾ ಹುಬ್ಬಳ್ಳಿ (ಅಧ್ಯಕ್ಷ), ರೇಖಾ ಚಿನ್ನಾಕಾರ (ಉಪಾಧ್ಯಕ್ಷ), ಗೌರಿ ಶಂಕರ (ಪ್ರಧಾನ ಕಾರ್ಯದರ್ಶಿ), ಬದ್ರುದ್ದೀನ್ (ಲೆಕ್ಕ ಪರಿಶೋಧಕ ), ರಮೇಶ ಧರಿ (ಖಜಾಂಚಿ).