ಸುರಪುರ: ರಾಷ್ಟ್ರೀಯ ಆನೆಕಾಲು ರೋಗ ನಿಯಂತ್ರಣಕ್ಕಾಗಿ ಎಂಡಿಎ/ಐಡಿಎ ಕಾರ್ಯಕ್ರಮವನ್ನು ಡಿ3 ವರೆಗೆ ವಿಸ್ತರಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ತಿಳಿಸಿದ್ದಾರೆ.
ಈಗಾಗಲೇ ಈ ಕಾರ್ಯಕ್ರಮದ ಅಡಿಯಲ್ಲಿ ಶಾಲಾ ಮಟ್ಟ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಯಶಸ್ವಿಯಾಗಿದ್ದು ಆದರೆ ಸಾರ್ವಜನಿಕರಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಕಂಡು ಬಂದಿರುವದಿಲ್ಲ ಹೀಗಾಗಿ ಸರಕಾರ ಈ ಕಾರ್ಯಕ್ರಮವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಡಿ3ವರೆಗೆ ವಿಸ್ತರಿಸಿದ್ದು ಇಲಾಖೆ ವತಿಯಿಂದ ನೀಡಲಾಗುವ ಮಾತ್ರೆಗಳನ್ನು ನುಂಗಬೇಕು ಮಾತ್ರೆಗಳನ್ನು ನುಂಗದಿದ್ದರೆ ಮುಂದೆ ಈ ರೋಗವು ಅತಿಯಾಗಿ ಹರಡಿ ಪ್ರತಿಯೊಂದು ಮನೆಯಲ್ಲಿ ಆನೆಕಾಲು ರೋಗವು ಕಂಡು ಬರುವ ಅಪಾಯವಿದ್ದು ಕಾರಣ ಮಾತ್ರೆಗಳನ್ನು ನುಂಗಿ ನಮ್ಮ ತಾಲೂಕುವನ್ನು ಆನೆಕಾಲು ರೋಗದಿಂದ ಮುಕ್ತಗೊಳಿಸಲು ಸಹಕರಿಸಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.