ಸ್ಕೇಟಿಂಗ್ ಸ್ಪರ್ಧೆ: ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

0
25

ಕಲಬುರಗಿ: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ ರಾಜ್ಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಜಿಲ್ಲೆಯಿಂದ ಆಯ್ಕೆಯಾದ ಕೆಳಕಂಡ ಕ್ರೀಡಾಪಟುಗಳು ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ, ಬೆಳ್ಳಿ ಪದಕ ಹಾಗೂ ಕಂಚಿನ ಪದಕಗಳನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕ್ರೀಡಾಪಟು ಸ್ಪಂದನಾ ಅವರು ರೋಡÀ-1 ಲ್ಯಾಪ್‍ದಲ್ಲಿ ಚಿನ್ನದ ಪದಕ, ರಿಂಕ್-500+ಡಿ ಮತ್ತು ರಿಂಕ್-1000 ಮೀಟರ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ. ಕ್ರೀಡಾಪಟು ಸಂಜನಾ ಅವರು ರೋಡ-3000 ಮೀಟರ್, ರಿಂಕ್-500+ಡಿ ಮತ್ತು ರಿಂಕ್-1000 ಮೀಟರ್ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ. ಅದೇ ರೀತಿ ಕ್ರೀಡಾಪಟು ಸಾಯಿಶಕ್ತಿ ಅವರು 500+ಡಿ ಸ್ಪರ್ಧೆಯಲ್ಲಿ ಕಂಚಿನ ಪದಕ ಹಾಗೂ ಕ್ರೀಡಾಪಟು ಶ್ರೀಶೈಲ್ ಇ.ಗೋಳಾ ಅವರು ರಿಂಕ್-500+ಡಿ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ.

Contact Your\'s Advertisement; 9902492681

ಜಿಲ್ಲೆಯ ಕ್ರೀಡಾಪಟುಗಳ ಸಾಧನೆಗಾಗಿ ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಕ್ರೆಪ್ಪಗೌಡ ಜಿ. ಬಿರಾದರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ಎಂ.ಜಿ.ಬಿರಾದರ, ತಾ.ದೆ.ೈ.ಶಿ. ಪರಿವೀಕ್ಷಕ ಎಸ್.ಎಸ್ ಮಂಠಾಳೆ, ಜಿಲ್ಲಾ ರೋಲರ್ ಸ್ಕೆಟಿಂಗ್ ಅಸೋಸಿಯೆಶನ್ ಅಧ್ಯಕ್ಷ ವಿಕ್ರಮ ವಿ. ದರ್ಶನಾಪೂರ, ತಂಡದ ವ್ಯವಸ್ಥಾಪಕರಾದ ರೋಹಿಣಿ ತೋರಣ, ದಶರಥ, ತರಬೇತುದಾರರಾದ ಮಂಜುನಾಥ, ಜಯಕುಮಾರ, ಸ್ಮøತಿ ಹಾಗೂ ಎಸ್.ಬಿ.ಆರ್ ಶಾಲೆಯ ಶಿಕ್ಷಕರಾದ ಖಂಡೆರಾವ, ವಿಠ್ಠಲ, ಶೈಲಜಾ, ಲಕ್ಷ್ಮಿಕಾಂತ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here