6 ರಿಂದ ದಿವ್ಯಾಂಗಿಯರಿಗೆ ಸಾಧನ ಸಲಕರಣೆಗಳ ಮೌಲ್ಯಮಾಪನ ಶಿಬಿರ

0
18

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ (ಡಿಡಿಆರ್‍ಸಿ) ಕಲಬುರಗಿ ಮತ್ತು ಅಲಿಂಕೋ ಸಂಸ್ಥೆ ಭಾರತ ಸರ್ಕಾರದ ಎಡಿಐಪಿ (ಂಆIP) ಯೋಜನೆಯಡಿ ದಿವ್ಯಾಂಗಿಯರಿಗೆ ಸಾಧನ ಸಲಕರಣೆಗಳ ಮೌಲ್ಯಮಾಪನ ಶಿಬಿರವನ್ನು ಜಿಲ್ಲೆಯ ಕೆಳಕಂಡ ತಾಲೂಕುಗಳಲ್ಲಿ ಇದೇ ಡಿಸೆಂಬರ್ 6 ರಿಂದ 15 ರವರೆಗೆ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

ತಾಲೂಕುವಾರು ಏರ್ಪಡಿಸಲಾದ ಶಿಬಿರದ ವಿವರ ಇಂತಿದೆ. ಡಿಸೆಂಬರ್ 6 ರಂದು ಚಿಂಚೋಳಿ, ಡಿಸೆಂಬರ್ 7 ರಂದು ಕಾಳಗಿ, ಡಿಸೆಂಬರ್ 8 ರಂದು ಕಲಬುರಗಿ ನಗರ, ಡಿಸೆಂಬರ್ 9 ರಂದು ಕಲಬುರಗಿ ಗ್ರಾಮೀಣ, ಡಿಸೆಂಬರ್ 10 ರಂದು ಚಿತ್ತಾಪೂರ, ಡಿಸೆಂಬರ್ 12 ರಂದು ಆಳಂದ, ಡಿಸೆಂಬರ್ 13 ರಂದು ಸೇಡಂ, ಡಿಸೆಂಬರ್ 14 ರಂದು ಅಫಜಲಪುರ ಹಾಗೂ ಡಿಸೆಂಬರ್ 15 ರಂದು ಜೇವರ್ಗಿ ತಾಲೂಕುಗಳಲ್ಲಿ ಶಿಬಿರವನ್ನು ಏರ್ಪಡಿಸಲಾಗಿದೆ.

Contact Your\'s Advertisement; 9902492681

ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ, ವಿಕಲಚೇತನರ ಸಹಾಯವಾಣಿ ಸಂಖ್ಯೆ: 08472-235222ಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here