ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ (ಡಿಡಿಆರ್ಸಿ) ಕಲಬುರಗಿ ಮತ್ತು ಅಲಿಂಕೋ ಸಂಸ್ಥೆ ಭಾರತ ಸರ್ಕಾರದ ಎಡಿಐಪಿ (ಂಆIP) ಯೋಜನೆಯಡಿ ದಿವ್ಯಾಂಗಿಯರಿಗೆ ಸಾಧನ ಸಲಕರಣೆಗಳ ಮೌಲ್ಯಮಾಪನ ಶಿಬಿರವನ್ನು ಜಿಲ್ಲೆಯ ಕೆಳಕಂಡ ತಾಲೂಕುಗಳಲ್ಲಿ ಇದೇ ಡಿಸೆಂಬರ್ 6 ರಿಂದ 15 ರವರೆಗೆ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ತಾಲೂಕುವಾರು ಏರ್ಪಡಿಸಲಾದ ಶಿಬಿರದ ವಿವರ ಇಂತಿದೆ. ಡಿಸೆಂಬರ್ 6 ರಂದು ಚಿಂಚೋಳಿ, ಡಿಸೆಂಬರ್ 7 ರಂದು ಕಾಳಗಿ, ಡಿಸೆಂಬರ್ 8 ರಂದು ಕಲಬುರಗಿ ನಗರ, ಡಿಸೆಂಬರ್ 9 ರಂದು ಕಲಬುರಗಿ ಗ್ರಾಮೀಣ, ಡಿಸೆಂಬರ್ 10 ರಂದು ಚಿತ್ತಾಪೂರ, ಡಿಸೆಂಬರ್ 12 ರಂದು ಆಳಂದ, ಡಿಸೆಂಬರ್ 13 ರಂದು ಸೇಡಂ, ಡಿಸೆಂಬರ್ 14 ರಂದು ಅಫಜಲಪುರ ಹಾಗೂ ಡಿಸೆಂಬರ್ 15 ರಂದು ಜೇವರ್ಗಿ ತಾಲೂಕುಗಳಲ್ಲಿ ಶಿಬಿರವನ್ನು ಏರ್ಪಡಿಸಲಾಗಿದೆ.
ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ, ವಿಕಲಚೇತನರ ಸಹಾಯವಾಣಿ ಸಂಖ್ಯೆ: 08472-235222ಗೆ ಸಂಪರ್ಕಿಸಲು ಕೋರಲಾಗಿದೆ.