ಕಲಬುರಗಿ: ಫಿರದೋಸ್ ಕಾಲೋನಿ ವೇಲ್ಫರ್ ಸೂಸೈಟಿಯ ಸಹೋಗದಲ್ಲಿ ಆರಂಭಿಸಿರುವ ಮಕತಬ ಎ ಅಲ್ ಫಿರದೋಸ್ ಕಲಿಕಾ ಕೇಂದ್ರದ ಮಕ್ಕಳಿಗೆ ಭಾನುವಾರ ಬ್ಯಾಗ್ ವಿತರಣೆ ಮಾಡಲಾಯಿತು.
ಬ್ಯಾಗ್ ವಿತರಣೆಯ ದಾನಿಗಳಾಗಿ ಆಗಮಿಸಿದ ನೋಬಲ್ ಶಾಲೆಯ ಮುಖ್ಯಸ್ಥರಾದ ಮೊಹಮ್ಮದ್ ಮೆಹರಾಜೋದ್ದಿನ್ ಖಾಶೀಫ್ ಮಕ್ಕಳಿಗೆ ಬ್ಯಾಗ್ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮತನಾಡಿದರು. ಶಿಕ್ಷಣ ಯಾರ ಸತಲ್ಲ, ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು. ಶಿಕ್ಷಣದ ಮೂಲಕವೇ ಸಾಧನೆ ಮಾಡಲು ಸಾಧ್ಯ ಶಿಕ್ಷಿತರಾಗದವರು ಪ್ರಪಂಚದಲ್ಲಿ ಗುರುತಿಸಿಕೊಳ್ಳಲಾರರು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೂಸೈಟಿಯ ಅಧ್ಯಕ್ಷರಾದ ದಸ್ತೇಗಿರ್ ಅಹ್ಮದ್ ಜನರು ಸಮಾಜೀಕ ಕಾರ್ಯಗಳಲ್ಲಿ ಸಹೋಗ ನೀಡುವ ಹೋಸ ಲೋಕವನ್ನು ಕಾಣಬಹುದು. ಜನರಿಗೆ ನೇರವು ಆತ್ಮದ ಮಾತನ್ನು ಕೇಳುವ ಮಾರ್ಗವಾಗಿದೆ. ಜನರಿಗೆ ಸಹಾಯ ಮಾಡುವ ಅವಕಾಶ ಕಳೇದುಕೊಳ್ಳುವಂತ ದುರಾದುಷ್ಟರು ಎಂದು ಬಣಿಸಿದರು.
ಮಾಜಿ ಮಹಾಪೌರ ಕಲಬುರಗಿ ಮಹಾನಗರ ಪಾಲಿಕೆ ಸದಸ್ಯರಾದ ಸೈಯದ್ ಅಹ್ಮದ್, ವಾರ್ಸ ಸಂಖ್ಯೆ 14ರ ಪಾಲಿಕೆ ಸದಸ್ಯರಾದ ಅಲಿ ಖಾನ್, ಮೌಲಾನಾ ಗುಲಾಮ್ ದಸ್ತೇಗಿರ್ ನೂರಿ, ಮೌಲಾನಾ ಯಾಸೀನ್ ಅಶರಫಿ, ಮೌಲಾನಾ ಮೊಹಮ್ಮದ್ ಗುಲಾಮ್ ಜುನೈದಿ, ಫಿರದೋಸ್ ಕಾಲೋನಿ ವೇಲ್ಪರ್ ಸೂಸೈಟಿಯ ಉಪಾಧ್ಯಕ್ಷರಾದ ಶೇಖ್ ಹಾಜಿ ಚಾಂದ್ ಸಾಬ್, ಕಲಿಕಾ ಕೇಂದ್ರದ ಉಸ್ತುವಾರಿ ಹಸನ್ ಅಲಿ ಸುಲ್ತಾನಪುರಿ, ಬಾಬಾ ಬೈ ಪೆಂಟರ್, ಮೊಹಮ್ಮದ್ ಅಜಹರ್ ಅಲಿ, ಸಾಜಿದ್ ಅಲಿ, ಅಕ್ರಮ್, ಇಮ್ರಾನ್, ಹೈದರ್ ಅಲಿ ಬಂದಾ ನವಾಜಿ, ನಿಜಾಮೊದ್ದೀನ್ ಸಿದ್ದಿಖಿ, ಮೊಹಮ್ಮದ್ ಜಹೀರ್, ಶೇಖ್ ನವಾಬ್, ಶೌಕತ್ ಅಲಿ ಖಾನ್ ಸೇರಿದಂತೆ ಹಲವರು ಇದ್ದರು.