ಚಿಂಚೋಳಿ : ಸಾರಿಗೆ ಇಲಾಖೆ ಜನರಿಗೆ ಪ್ರಯಾಣಿಸಲು ಅನೂಕೂಲವಾಗಲಿಎಂಬ ಉದ್ದೇಶದಿಂದ ಪ್ರಾರಂಭಿಸಿದ್ದಾರೆ ಆದರೆ ಚಿಂಚೋಳಿ ತಾಲೂಕಿನಲ್ಲಿ ಬಸ್ ಗಳು ಸರಿಯಾದ ಸಮಯಕ್ಕೆ ಓಡಿಸದ ಕಾರಣ ಜನರು ಹಾಗೂ ಪ್ರಯಾಣಿಕರು ಪರದಾಡುತಿದ್ದಾರೆ ಎಂದು ಸುಲೇಪೇಟ ಗ್ರಾಮದ ಜೆಡಿಎಸ್ ಯುವ ಮುಖಂಡ ಮೋಹಿನ್ ಮೋಮಿನ್
ದೂರಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ದಿನನಿತ್ಯ ಚಿಂಚೋಳಿ ಯಿಂದ ಕಲಬುರಗಿಗೆ ನೂರಾರು ಜನ ವಿದ್ಯಾರ್ಥಿಗಳು ಹಾಗೂ ಸರ್ಕಾರಿ ನೌಕರರು. ರೈತರು. ರೋಗಿಗಳು ಚಿಕಿತ್ಸೆಗೆ ಕಲಬುರಗಿಗೆ ಹೋಗುತ್ತಾರೆ ಆದರೆ ಚಿಂಚೋಳಿಯಿಂದ ಬೆಳಿಗ್ಗೆ 7 ಗಂಟೆಗೆ ಬಸ್ ಹೋದರೆ ನಂತರ 9ಗಂಟೆಯವರೆಗೆ ಒಂದು ಬಸ್ ಕಲಬುರಗಿಗೆ ಹೋಗುವುದಿಲ್ಲ ನಂತರ 9ಗಂಟೆಯಿಂದ 10 ಗಂಟೆ ಮಧ್ಯೆ ಒಂದೆ ಬಾರಿ 4 ರಿಂದ 5 ಬಸ್ ಪ್ರಯಾಣಿಕರಿಲ್ಲದೆ ಖಾಲಿ ಓಡಿಸುತ್ತಾರೆ ಇದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ಎಂದು ಅವರು ಆರೋಪಿಸಿದರು.
ಕೂಡಲೇ ಬೆಳಿಗ್ಗೆ 7 ಗಂಟೆ ಹಾಗೂ 8 ಗಂಟೆಗೆ ಚಿಂಚೋಳಿ ಯಿಂದ ಕಲಬುರಗಿಗೆ ತಡೆರಹಿತ ಬಸ ಓಡಿಸಬೇಕು. ಮತ್ತು ಪ್ರತಿ 15 ನಿಮಿಷಕ್ಕೆ ಒಂದು ಬಸ್ ಓಡಿಸಬೇಕು ಎಂದು ಆಗ್ರಹಿಸಿದ್ದಾರೆ.