ಅಪ್ಪಾ ಪಬ್ಲಿಕ್ ಶಾಲೆಯ ವಾರ್ಷಿಕ ಕ್ರೀಡಾ ಕೂಟದಲ್ಲಿ ಚಿಣ್ಣರ ಕಲರವ

0
16

ಕಲಬುರಗಿ: ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಚಿಣ್ಣರಿಗೆ (ಪೂರ್ವ ಪ್ರಾಥಮಿಕ ದಿಂದ ೨ನೆಯ ತರಗತಿವರೆಗೆ) ಶೈಕ್ಷಣಿಕ ವರ್ಷ ೨೦೨೨-೨೩ರ ಕ್ರೀಡಾ ಕೂಟವನ್ನು ಏರ್ಪಡಿಸಲಾಗಿತ್ತು. ಮಾತೋಶ್ರೀ ಡಾ. ದಾಕ್ಷಾಯಣಿ ಎಸ. ಅಪ್ಪಾ, ಚೈರ್ಪ್ರ್ಸನ್ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಇವರ ದಿವ್ಯ ಸಾನಿಧ್ಯದಲ್ಲಿ, ಶ್ರೀ ದೀಪನ್ ಎಂ. ಎನ್., ಐಪಿಎಸ್, ಸಹಾಯಕ ಪೊಲೀಸ್ ಆಯುಕ್ತ, ಉತ್ತರ ಸಬ್ ಡಿವಿಷನ್, ಇವರು ಕ್ರೀಡಾ ಕೂಟವನ್ನು ಒಲಿಂಪಿಕ್ ಧ್ವಜಾರೋಹಣ ಮಾಡುವುದರೊಂದಿಗೆ ಚಾಲನೆ ನೀಡಿದರು.

ಇದೆ ಸಂಧರ್ಭದಲ್ಲಿ ಕ್ರೀಡಾ ಜ್ಯೋತಿ ಬೆಳಗಿಸಿ, ಪಾರಿವಾಳಗಳನ್ನು ಮತ್ತು ಬಲ್ಲೋನ್ನ್ಗಳನ್ನು ಹಾರಿಸಿ ಸಾಂಕೇತಿಕವಾಗಿ ಕ್ರೀಡಾ ಕೂಟದ ಉದ್ಘಾಟನೆಯನ್ನು ಘೋಷಿಸಿಲಾಯಿತು.

Contact Your\'s Advertisement; 9902492681

ಮಾತೋಶ್ರೀ ದಾಕ್ಷಾಯಣಿ ಎಸ. ಅಪ್ಪಾ ಮತ್ತು ಅತಿಥಿ ಶ್ರೀ ದೀಪನ್ ಎಂ. ಎನ್. ಮಕ್ಕಳ ಪಥಸಂಚಲನ ವೀಕ್ಷಿಸಿ ಗೌರವ ಸ್ವೀಕರಿಸಿದರು. ಪುಟಾಣಿ ಮಕ್ಕಳು ತಮ್ಮ ಸಹಪಾಠಿಯೊಂದಿಗೆ ಹೆಜ್ಜೆಯ ಜೊತೆ ಹೆಜ್ಜೆ ಹಾಕುವ ಕವಾಯತ್ ಎಲ್ಲರ ಮನ ಸೆಳೆಯಿತು. ನಂತರ ಕ್ರೀಡಾ ಕೂಟವನ್ನುಉದ್ದೇಶಿಸಿ ಮಾತನಾಡಿದ ಮಾತೋಶ್ರೀ ದಾಕ್ಷಾಯಣಿ ಎಸ. ಅಪ್ಪಾ ಇವರು ವಿದ್ಯಾರ್ಥಿಗಳ ಶಿಸ್ತು ಮತ್ತು ಉತ್ಸಾಹ ಪ್ರಶಂಶನೀಯವಾಗಿದೆಯೆಂದು ಹೇಳಿದರು.

ಬೆಳೆಯುವ ಸಿರಿ ಮೊಳೆಕೆಯಲ್ಲಿ ಎನ್ನುವ ಹಾಗೆ ಪುಟಾಣಿಗಳು ಕ್ರೀಡೆಗಳಲ್ಲಿ ಭಾಗವಹಿಸಿದರೆ ಆರೋಗ್ಯವನ್ನು ಸದೃಢಗೊಳಿಸುವುದರೊಂದಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕ್ರೀಡಾಪಟುಗಳಾಗಿ ಹೊರಹೊಮ್ಮಲು ಸಾಧ್ಯ ಎಂದು ತಮ್ಮ ವಿಶ್ವಾಸ ವ್ಯಕ್ತಪಡಿಸಿದರು. ಎಲ್ಲಾ ಕ್ರೀಡಾ ಸ್ಪರ್ಧಿಗಳಿಗೆ ಶುಭಾಶಯ ಕೋರಿ ಆಶೀರ್ವದಿಸಿದರು. ವಿವಿಧ ಕ್ರೀಡಾಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪದಕ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಿದರು.

ಪ್ರಾಚಾರ್ಯರಾದ ಶ್ರೀ ಶಂಕರಗೌಡ ಹೊಸಮನಿ ಇವರು ಚಿಣ್ಣರ ಕ್ರೀಡಾ ಕೂಟದ ಉಘಟನೆದೊಂದಿಗೆ ಈ ವರ್ಷದ ಕ್ರೀಡಾ ಕೂಟವನ್ನು ಪ್ರಾರಂಭಿಸುವುದು ತುಂಬಾ ಸಂತೋಷದ ವಿಷಯ ಎಂದು ಹೇಳುತ್ತಾ ಅಲಂಕೃತವಾದ ಮೈದಾನದಲ್ಲಿ ಚಿಣ್ಣರ ಚಿಲಿಪಿಲಿ ಮಾತುಗಳು ಮತ್ತು ಆಕರ್ಷಕ ನೃತ್ಯ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.

ಚಿಣ್ಣರ ವಿಭಾಗದ ಸಂಯೋಜಕರಾದ ಶ್ರೀಮತಿ ಕಾಮಾಕ್ಷಿ ಕಟ್ಟಿ ವಾರ್ಷಿಕ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭವನ್ನು ನಿರ್ವಹಿಸಿದರು. ಶಿಕ್ಷಕರಾದ ಅಶ್ರಿತಾ ಮತ್ತು ವಿದ್ಯಾರ್ಥಿ ಇಶಾನ್ ಹುಗ್ಗಿ (೨ನೆಯ ತರಗತಿ) ಜೊತೆಯಾಗಿ ಉದ್ಘಾಟನಾ ಕಾರ್ಯಕ್ರಮವನ್ನು ನಿರೂಪಿಸಿದರು. ಕ್ರೀಡಾ ಕೂಟವನ್ನು ವೀಕ್ಷಿಸಿದ ಎಲ್ಲಾ ತಂದೆ ತಾಯಂದಿರು ಮತ್ತು ಪೋಷಕರು ಕೂಡ ತಮ್ಮ ಮಕ್ಕಳ ಉತ್ಸಾಹಭರಿತ ಆಟೋಟಗಳ್ಳನ್ನು ನೋಡಿ ಹರ್ಷವ್ಯಕ್ತಪಡಿಸಿದರು. ಕ್ರೀಡಾ ಕೂಟದಲ್ಲಿ ಉಪ ಪ್ರಾಚಾರ್ಯರಾದ ಶ್ರೀ ವಿಜು ಕಲ್ಲಾರಾ ಜೋಸ್ ಮತ್ತು ಎಲ್ಲ ಶಿಕ್ಷಕರು ಹಾಗು ಶಿಕ್ಷಕೇತರ ಸಿಬ್ಬಂಧಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here