ಸುರಪುರ: ಸಮಾಜದಲ್ಲಿ ವಕೀಲರ ಬಗ್ಗೆ ಸೌoಶಯಾತ್ಮಕ ನಕಾರಾತ್ಮಕ ದೂರಣೆ ಉಂಟಾಗುತ್ತಿದೆ. ವೃತ್ತಿ ಬಗ್ಗೆ ಆತ್ಮವಲೋಕನ ಮಾಡಿಕೊಂಡು ವೃತ್ತಿಗೆ ಘನತೆ ಗೌರವದಿಂದ ನಡೆದು ಕುಂದು ಉಂಟಾಗದಂತೆ ಜಾಗೃತಿವಹಿಸಬೇಕೆಂದು ಹಿರಿಯ ವಕೀಲರು ಹೇಳಿದರು.
ನಗರದ ನ್ಯಾಯವಾದಿಗಳ ಸಂಘದ ಸಭಾಂಗಣದಲ್ಲಿ ತಾಲೂಕ ವಕೀಲರ ಸಂಘದಿಂದ ಹಮ್ಮಿಕೊಂಡ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಅಪ್ಪಸಾಹೇಬ್ ಪಾಟೀಲ ನಿಂಗಣ್ಣ ಚಿಂಚೋಡಿ ದೇವಿಂದ್ರಪ್ಪ ಬೇವಿನಕಟ್ಟಿ ಜಿ. ತಮ್ಮಣ್ಣ ಮಹಮದ್ ಹುಷೇನ ಬಸವರಾಜ ಕಿಲ್ಲೇದಾರ ಜಿಎಸ್ ಪಾಟೀಲ ಮಾತನಾಡಿ, ವಕೀಲ ವೃತ್ತಿ ಶ್ರ್ರೇಷ್ಠ ವೃತ್ತಿ ಕಾನೂನನ್ನು ಪ್ರೋತ್ಸಾಹಿಸುವ ಜವಾಬ್ದಾರಿ ವಕೀಲರ ಮೇಲಿದೆ ಸಮಾಜದ ಜ್ವಲಂತ ಸಮಸ್ಯೆಗಳ ನಿವಾರಣೆಗೆ ವಕೀಲರು ಮುಖ್ಯಪಾತ್ರ ವಹಿಸಬೇಕೆಂದು ಹೇಳಿದ ಅವರು ಹಿರಿಯ ವಕೀಲರನ್ನು ಗೌರವಿಸಿ ಅವರ ಮಾರ್ಗದರ್ಶನವನ್ನು ಪಡೆದು ವೃತ್ತಿಯಲ್ಲಿ ಮುನ್ನುಗ್ಗಬೇಕು ಕಕ್ಷಿದಾರರಿಗೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸುವ ಕೆಲಸ ಮಾಡಬೇಕೆಂದು ಕಿವಿ ಮಾತು ಹೇಳಿದರು.
ವಕೀಲರ ಸಂಘದ ಅಧ್ಯಕ್ಷರಾದ ಎನ್ ಜೆ ಬಾಕ್ಲಿ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಹಿರಿಯ ವಕೀಲರಾದ ಉದಯ್ ಸಿಂಗ ವಿ ಎಚ್ ಬೈಚಬಾಳ ವಕೀಲರ ಸಂಘದ ಉಪಾಧ್ಯಕ್ಷರಾದ ಸಂತೋಷ ಕುಮಾರಿ ಯಲ್ಲಪ್ಪ ಹುಲಿಕಲ್ ಆದಪ್ಪ ಹೊಸಮನಿ ಅಪ್ಪಣ್ಣ ಗಾಯಕವಾಡ ಜಿ ಆರ್ ಬನ್ನಾಳ ಮಂಜು ಹುದ್ದಾರ ವೆಂಕಟೇಶ ಕುಂಬಾರಪೇಟ ಸುರೇಂದ್ರ ದೊಡ್ಡಮನಿ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ವಕೀಲರಾದ ಎಸ್ ಬಿ ಬಿರಾದಾರ ಮಹಿಳಾ ವಕೀಲರಾದ ಶ್ರೀದೇವಿ ಪಾಟೀಲ ಜಯಲಲಿತಾ ಪಾಟೀಲ ವಕೀಲರಾದ ಭೀಮಶಂಕರ ಬಾದ್ಯಾಪುರ ಪರಶುರಾಮ ಪರಸನಹಳ್ಳಿ ಮಲ್ಲು ತಳ್ಳಳ್ಳಿ ಸೇರಿದಂತೆ ಅನೇಕ ವಕೀಲರು ಭಾಗವಹಿಸಿದ್ದರು. ರವಿ ನಾಯಕ ಸ್ವಾಗತಿಸಿದರು ಗೋಪಾಲ ತಳವಾರ್ ನಿರೂಪಸಿದರು ಸಂತೋಷ್ ಗಾರಂಪಳ್ಳಿ ವಂದಿಸಿದರು.