ಸುರಪುರ: ನಗರದ ಸರಕಾರಿ ಬಾಲಕರ ಪ್ರೌಢ ಶಾಲೆಯ ಆವರಣದಲ್ಲಿ ಮೆದಳು ಜ್ವರ ನಿವಾರಣೆ ಅಂಗವಾಗಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ನಗರಸಭೆ ಅಧ್ಯಕ್ಷತೆ ಸುಜಾತಾ ವೇಣುಗೋಪಾಲ ನಾಯಕ ಜೇವರ್ಗಿ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ ಮಾತನಾಡಿ,ಇತ್ತೀಚೆಗೆ ಮೆದಳು ಜ್ವರ ಮಕ್ಕಳಲ್ಲಿ ಕಾಣಿಸಿಕೊಂಡಿದ್ದು ಇದರಿಂದ ವಿಪರೀತ ಜ್ವರದಿಂದ ಮಕ್ಕಳು ಬಳಲುತ್ತಿದ್ದಾರೆ ಎಂದು ತಿಳಿಸಿದರು.ಈ ಜ್ವರ ಹರಡಿರುವುದರ ಕುರಿತು ತಿಳಿಯಲು ರಕ್ತ ಪರೀಕ್ಷೆ ಅಥವಾ ಮಗುವಿನ ಬೆನ್ನಿನಲ್ಲಿಯ ನೀರಿನ್ನು ಪಡೆದು ಪರೀಕ್ಷಿಸಿ ತಿಳಿಯಲಾಗುತ್ತಿದೆ ಎಂದರು.
ಇದು ಕೂಡ ಕೋವಿಡ್ ರೀತಿಯಲ್ಲಿa ಹರಡುವ ಮುನ್ನವೆ 1 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಈಗ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ,ನಂತರ 9 ತಿಂಗಳು ಮತ್ತುಬ 16 ತಿಂಗಳಿಗೆ ನಂತರದ ಡೋಸ್ ನೀಡಲಾಗುತ್ತದೆ ಎಂದು ತಿಳಿಸಿದರು.ಅಲ್ಲದೆ ಪ್ರತಿ 1 ವರ್ಷ ಮೇಲ್ಪಟ್ಟ ಮಕ್ಕಳು ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಿ ಇದರಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ನಗರಸಭೆ ಸದಸ್ಯ ನರಸಿಂಹಕಾಂತ ಪಂಚಮಗಿರಿ ಮಾತನಾಡಿ,ಸರಕಾರ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಲಸಿಕೆಯನ್ನು ತಯಾರಿಸಿದ್ದು ಮಕ್ಕಳು ಸಂಕೋಚವಿಲ್ಲದೆ ಪಡೆದುಕೊಳ್ಳುವಂತೆ ತಿಳಿಸಿದರು.ಅಲ್ಲದೆ ನಮ್ಮ ತಾಲೂಕಿನ ಸರ್ವ ಜನರ ಆರೋಗ್ಯಕ್ಕಾಗಿ ನಿರಂತರವಾಗಿ ಶ್ರಮಿಸುವ ಡಾ:ಆರ್.ವಿ ನಾಯಕ ಅವರ ಸೇವೆಗೆ ನಾವೆಲ್ಲರು ಅಭಿನಂಧಿಸಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಶಾಲೆಯಲ್ಲಿನ ಮಕ್ಕಳಿಗೆ ಲಸಿಕೆ ಹಾಕಲಾಯಿತು.ಕಾರ್ಯಕ್ರಮದ ವೇದಿಕೆ ಮೇಲೆ ನಗರಸಭೆ ಸದಸ್ಯ ಶಿವಕುಮಾರ ಕಟ್ಟಿಮನಿ,ಕ್ಷೇತ್ರ ಶೀಕ್ಷಣಾಧಿಕಾರಿ ಮಹೇಶ ಪೂಜಾರಿ,ಶಾಲೆಯ ಉಪ ಪ್ರಾಂಶುಪಾಲ ಯಲ್ಲಪ್ಪ ಕಾಡ್ಲೂರ ವೇದಿಕೆ ಮೇಲಿದ್ದರು.ಶಿಕ್ಷಕ ಲಕ್ಷ್ಮಣ ನಾಯಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಶಾಲೆಯ ಶರಣು ನುಚ್ಚಿ,ಆರೋಗ್ಯ ಇಲಾಖೆಯ ಸುರೇಶ ಖಾದಿ,ಸಂಗಪ್ಪ ಚಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.