ಕಲಬುರಗಿ: ವಕ್ಫ ಆಸ್ತಿ ಕಬಳಿಕೆ ಮಾಡಿಕೊಂಡಿರುವ ಭೂ ಪ್ರದೇಶಗಳಿಗೆ ಜಿಲ್ಲಾ ವಕ್ಫ್ ಅಧಿಕಾರಿ ಹಜರತ್ ಅಲಿ ನದಾಫ್ ಮತ್ತು ವಾಕ್ಫ್ ಕಮಿಟಿಯ ಜಿಲ್ಲಾ ಅಧ್ಯಕ್ಷರಾದ ಎಸ್.ಎಮ್ ಹಬೀಬೋದ್ದಿನ್ ಮನವರ್ ಸರಮಸ್ತ್ ಅವರ ನೇತೃತ್ವದ ಸದಸ್ಯರ ತಂಡ ನಗರದ ಶಹಾಬಜಾರ್ ಮತ್ತು ಅಬು ಸೈಯದ್ ಜುನೈದಿ ದರ್ಗಾದ ವಕ್ಫ್ ಆಸ್ತಿ ಕಬಳಿಕೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಳಂದ ಚೆಕ್ ಪೋಸ್ಟ್ ಪ್ರದೇಶದಲ್ಲಿರುವ ಅಬು ಸೈಯದ್ ಜುನೈದಿ ದರ್ಗಾದ ವಕ್ಫ್ ಆಸ್ತಿಯ ಸರ್ವೆ ನಂಬರ್ 90,91,92 ಗಳಲ್ಲಿ ಭೂ ಗಳ್ಳರು ಆಕ್ರಮವಾಗಿ ಕಬಳಿಸಿ ಲೇಔಟ್ ಹಾಕಿ ಜನರಿಗೆ ಆಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ನೋಟ್ರಿ ಮಾಡಿಸಿ ವಕ್ಫ್ ಆಸ್ತಿ ಆಕ್ರಮವಾಗಿ ಮಾರಾಟ ದಂಧೆ ನಡೆದಿರುವುದು ಕಂಡುಬಂದಿದೆ. ಸಂಪೂರ್ಣ ವಕ್ಫ್ ಆಸ್ತಿ ಪತ್ತೆ ಹಚ್ಚಿ, ವಕ್ಫ್ ಆಸ್ತಿಯ ಮೇಲೆ ಆಕ್ರಮ ಮನೆಗಳ ನಿರ್ಮಾಣ ಮಾಡಲು ಮುಂದಾಗಿರುವ ಮತ್ತು ಕಬ್ಜಾ ಮಾಡಿದರಿಗೆ ನೋಟಿಸ್ ನೀಡಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ವಕ್ಫ್ ಅಧಿಕಾರಿ ಹಜರತ್ ಅಲಿ ನದಾಫ್ ತಿಳಿಸಿದ್ದಾರೆ.
ಪೊಲೀಸ್ ಆಕ್ಷನ್ ಕಾಲದಿಂದ ಬಳಕೆಯಾಗದೇ ಅಸ್ತಿತ್ವ ಕಳೆದುಕೊಳ್ಳುತ್ತಿರುವ ವಕ್ಫ್ ಸ್ಮಾರಕಗಳು ಮತ್ತು ಮಸಜಿದಗಳನ್ನು ಗುರುತಿಸಿ ಪೂನಃ ಅಲ್ಲಿ ಪ್ರಾರ್ಥನೆ ಆಗುವು ನಿಟ್ಟಿನಲ್ಲಿ ನವಿಕರಿಸುವ ಕ್ರಮಕೈಗೊಳ್ಳಬೇಕೆಂದು ಕಮಿಟಿಯ ಸಭೆಯಲ್ಲಿ ತೀರ್ಮಾನಿಸಿದೆ. ಅದರಂತೆ ವಕ್ಫ್ ಜಿಲ್ಲಾ ಕಮಿಟಿಯ ಸದಸ್ಯರ ನೇತೃತ್ವದಲ್ಲಿ ನಗರದ ಶಹಾಬಜಾರ್ ಪ್ರದೇಶದ ಬಳಕೆಯಾಗದ ಸ್ಥಿತಿಯಲ್ಲಿರುವ 7 ವಕ್ಫ್ ಮಸಜಿದ್ ಮತ್ತು 1 ಖಬರಿಸ್ತಾನ್ ಗುರುತಿಸಲಾಗಿದ್ದು, ತಕ್ಷಣ ಇಲ್ಲಿ ಪ್ರರ್ಥನೆ ಮತ್ತು ಪುನಃ ಬಳಿಕೆಯಾಗುವ ರೀತಿಯ ಅಭಿವೃದ್ಧಿ ಪಡಿಸಲಾಗುವುದೆಂದು ವಕ್ಫ್ ಕಮಿಟಿಯ ಜಿಲ್ಲಾ ಅಧ್ಯಕ್ಷರಾದ ಎಸ್.ಎಮ್ ಹಬೀಬೋದ್ದಿನ್ ಮನವರ್ ಸರಮಸ್ತ್ ತಿಳಿಸಿದ್ದಾರೆ.
ಅಬು ಸೈಯದ್ ಜುನೈದಿ ದರ್ಗಾದ ಪ್ರದೇಶದಲ್ಲಿರುವ ವಕ್ಫ್ ಆಸ್ತಿಯನ್ನು ಕಬಳಿಕೆ ಮಾಡಿಕೊಂಡು ದರೊಡೆ ಖೋರರು ಜನರಿಗೆ ಮೊಸ ಮಾಡುತ್ತಿದ್ದಾರೆ. ವಕ್ಫ್ ಆಸ್ತಿಯನ್ನು ಆಕ್ರಮವಾಗಿ ಕಬಳಿಸಿ ಮತ್ತು ಮನೆ ನಿರ್ಮಾಣ ಮಾಡುವರ ಮೇಲೆ ಕಾನೂನು ಕ್ರಮಕೈಗೊಳ್ಳಲಾಗುವುದೆಂದು ಎಂದು ಎಚ್ಚರಿಕೆ ನೀಡಿದ ಸರಮಸ್ತ್ ಸಾರ್ವಜನಿಕರು ಆಸ್ತಿ ಖರೀದಿ ಮಾಡುವ ಮೂನ್ನ ಸಂಪೂರ್ಣವಾಗಿ ಪರಿಶೀಲನೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.