ರಕ್ತದಾನ ಶಿಬಿರದಿಂದ ಜೀವ ದಾನ : ಡಾ. ಪ್ರಕಾಶ ಬಡಿಗೇರ

0
44

ಕಲಬುರ್ಗಿ : ಈ ದೇಶಕ್ಕೆ ದಲಿತರು ಹಿಂದುಳಿದವರ್ಗದವರು ಸಾವಿರಾರು ವರ್ಷಗಳ ಕಾಲ ರಕ್ತ ಹರಿಸಿ ದೇಶಕ್ಕೆ ಸೇವೆ ಸಲ್ಲಿಸಿದ ದೀರರಾಗಿದ್ದಾರೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ವಿಭಾಗದ ಅತಿಥಿ ಸಹಾಯಕ ಪ್ರಾಧ್ಯಾಪಕ ಡಾ. ಪ್ರಕಾಶ ಬಡಿಗೇರ ಹೇಳಿದರು.

ಯಡ್ರಾಮಿ ಪಟ್ಟಣದಲ್ಲಿ ದಲಿತ ಹಿಂದುಳಿದವರ್ಗ ಮತ್ತು ಕನ್ನಡ ಪರ ಮತ್ತು ಮುಸ್ಲಿಂ ಸಂಘಟನೆಗಳ ಯುವಕರು ಏರ್ಪಡಿಸಿದ್ದ ರಕ್ತ ದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿ ಯಡ್ರಾಮಿ ಪಟ್ಟಣದ ಮತ್ತು ಸುತ್ತ ಮುತ್ತಲಿನ ಗ್ರಾಮಗಳ ಎಲ್ಲಾ ಸ್ವಾಭಿಮಾನಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರ ಯುವ ಬಳಗ ಇಂದು ಸ್ವ ಇಚ್ಛೆಯಿಂದ ರಕ್ತದಾನ ಶಿಬಿರ ಆಯೋಜಿಸಿದ್ದು ಬಹಳ ಸಂತೋಷ ಅನಿಸುತ್ತದೆ.

Contact Your\'s Advertisement; 9902492681

ಏಕೆಂದರೆ ಸಮಾಜಿಕ ಕ್ರಾಂತಿಯ ಸೂರ್ಯ ವಿಶ್ವ ರತ್ನ ಜ್ಞಾನದ ಸಂಕೇತ ಮಹಾ ಮಾನವತಾವಾದಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 66 ಮಹಾಪರಿನಿರ್ವಾಹಣ ದಿನಾಚರಣೆಯ ಅಂಗವಾಗಿ ಅವರ ಅನುಯಾಯಿಗಳಾದ ನಾವು ಅವರಂತೆ ದೇಶದ ರಕ್ಷಣೆಗೆ ದೇಶದ ಜನರ ಜೀವ ರಕ್ಷಣೆಗೆ ರಕ್ತವನ್ನು ಕೊಟ್ಟಾದರು ಜೀವಗಳನ್ನು ಕಾಪಾಡುತ್ತೇವೆ ಎಂಬ ದೃಢ ಸಂಕಲ್ಪದೊಂದಿಗೆ ರಕ್ತದಾನ ಶಿಬಿರ ಆಯೋಜಿಸಿದ್ದು ಮುಂದಿನ ಯುವ ಪೀಳಿಗೆಗೆ ದಾರಿದೀಪ ಆಗುತ್ತದೆ.

ಆದ್ದರಿಂದ ಎಲ್ಲಾ ಸ್ವಾಭಿಮಾನಿ ದಲಿತ ದಮನಿತ ವರ್ಗಗಳ ಹಾಗೂ ಬಾಬಾ ಸಾಹೇಬ ಅಂಬೇಡ್ಕರ್ ಋಣದ ಫಲಾನುಭವಿಗಳು ಆಗಿದ್ದಾರೆ. ನನ್ನ ವಿನಂತಿ ಏನೆಂದರೆ ಅಂದು ತಾವು ಸ್ವಯಂ ಪ್ರೇರಿತರಾಗಿ ಇಂತಹ ಕಾರ್ಯಕ್ರಮ ಮಾಡಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಈ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಎಲ್ಲಾ ಸಂಘಟನೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here