ಕಲಬುರಗಿ: ನಗರದ ಕಲಾ ಮಂಡಳದಲ್ಲಿ ಹೈದರಾಬಾದ್ ಕರ್ನಾಟಕ ಬೇಡ ಜಂಗಮ ಸಮಾಜ ಸಂಸ್ಥೆ(ರ) ನಗರ ಘಟಕದ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ 66 ನೇ ಮಹಾಪರಿನಿರ್ವಾಣ ದಿನಾಚರಣೆವನ್ನು ನಗರ ಜಿಲ್ಲಾ ಅಧ್ಯಕ್ಷ ವೀರಭದ್ರಯ್ಯ ಮಠ ಹಾಗೂ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಸಾಲಿಮಠ ಅವರ ನೇತೃತ್ವದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಎಂಬಿ ಕಳ್ಳಿಮಠ, ಜಿಲ್ಲಾಧ್ಯಕ್ಷ ಶಂಭುಲಿಂಗ ಮಠಪತಿ, ಉಪಾಧ್ಯಕ್ಷ ಡಾ. ಸಿದ್ದರಾಮಯ್ಯ ಮಠ, ಗೌರವಾಧ್ಯಕ್ಷ ವಿರೂಪಾಕ್ಷಯ್ಯ ಹಿರೇಮಠ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗಯ್ಯ ಸ್ಥಾವರಮಠ, ಸಮಾಜದ ಮುಖಂಡರಾದ ಅಣವೀರಯ್ಯ ಪ್ಯಾಟಿಮನಿ, ಸೋಮಶೇಖರ್ ನಂದಿದ್ವಜ, ಶಿವಪ್ರಕಾಶ್ ಸ್ವಾಮಿ, ನಾಗಲಿಂಗಯ್ಯ ಮಠಪತಿ, ಶರಣಯ್ಯ, ನಿಂಗಯ್ಯ ಮಠ, ರೇವಣಸಿದ್ದಯ್ಯ ಮೆಡಿಕೇರಿ ಇದ್ದರು.