ಕಲಬುರಗಿ: ಯಾದಗಿರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮತ್ತು ವಿಭಾಗದ ಮುಖ್ಯಸ್ಥ ದವಲಪ್ಪ ಬಿ ಹುಸೇನಖಾನ್ ಅವರು ಭೌತಶಾಸ್ತ್ರ ವಿಭಾಗದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಗುಲ್ಬರ್ಗಾ ವಿಶ್ವವಿದ್ಯಾಲಯವು ಪಿ.ಎಚ್ಡಿ ಪದವಿ ನೀಡಿದೆ.
ಇವರು ‘ಸ್ಟಡೀಜ್ ಆಫ್ ಫಿಜಿಕಲ್ ಪ್ರಾಪರ್ಟಿಸ್ ಆಫ್ ಲೋ ಮೆಲ್ಟ್ ಆಕ್ಸೈಡ್ ಗ್ಲಾಸೆಸ್’ ವಿಷಯದ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಇವರಿಗೆ ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಭೌತಶಾಸ್ತ್ರದ ವಿಭಾಗದ ಪ್ರಾಧ್ಯಾಪಕ ಪ್ರೊ. ಟಿ ಶಂಕ್ರಪ್ಪ ಮಾರ್ಗದರ್ಶಕರಾಗಿದ್ದರು ಎಂದು ಪ್ರಕಟಣೆ ತಿಳಿಸಿದೆ.