ಕಲಬುರಗಿ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 17ನೇ ಶಕ್ತಿ ಸಂಭ್ರಮ ಅಂತರ್ ಕಾಲೇಜು ಮಹಿಳಾ ಯುವಜನೋತ್ಸವ 12 ರಿಂದ 14ರ ವರೆಗೆ ಬಾಗಲಕೋಟದ ಅಕ್ಕಮಹಾದೇವಿ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಲಯದಲ್ಲಿ ಜರುಗಿತು.
ಈ ಉತ್ಸವದಲ್ಲಿ ರಾಜ್ಯದ 32 ಕಾಲೇಜುಗಳು ಭಾಗವಹಿಸಿದ್ದವು. ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಿಂದ ವಿವಿಧ ಸ್ಪರ್ಧೆಯಲ್ಲಿ 25 ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಪಾಶ್ಚಾತ್ಯ ಸಂಗೀತದಲ್ಲಿ ತೃತೀಯ ಬಹುಮಾನ,ಸಾಮೂಹಿಕ ನೃತ್ಯದಲ್ಲಿ ದ್ವಿತೀಯ ಬಹುಮಾನ,ಮಿಮಿಕ್ರಿಯಲ್ಲಿ ತೃತೀಯ ಬಹುಮಾನ, ನಾಟಕದಲ್ಲಿ ಪ್ರಥಮ ಬಹುಮಾನ ಮತ್ತು ಪೇಂಟಿಂಗ್ ನಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ.ಥೇಟರ್ ಇವಂಟ್ ನಲ್ಲಿ ರನ್ನಪ್ಪ ವಿಜೇತರಾಗಿದ್ದಾರೆ.
ವಿದ್ಯಾರ್ಥಿ ಸಂಘದ ಸಲಹೆಗಾರರಾದ ಉಮಾ ರೇವೂರ ಅವರ ಮಾರ್ಗದರ್ಶನ ಮಾಡಿದ್ದರು, ಡಾ.ಮಹೇಶ ಗಂವಾರ, ಡಾ.ಪ್ರೇಮಚಂದ ಚವ್ಹಾಣ, ಡಾ.ರೇಣುಕಾ ಹೆಚ್, ಡಾ.ಮುಖಿಮ್ ಮಿಯಾ, ಉಮಾ ಪಾಟೀಲ್, ಶುಷ್ಮಾ ಕುಲಕರ್ಣಿ ಇವರು ಸಹಕರಿಸಿದ್ದರು.
ಶಕ್ತಿ ಸಂಭ್ರಮದಲ್ಲಿ ಭಾಗವಹಿಸಿ ಬಹುಮಾನ ಪಡೆದ ವಿದ್ಯಾರ್ಥಿನಿಯರನ್ನು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಸೋಮನಾಥ ಸಿ.ನಿಗ್ಗುಡಗಿ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜೇಂದ್ರ ಬಿ.ಕೊಂಡಾ ಅವರು ವಿಜೇತ ವಿದ್ಯಾರ್ಥಿನಿಯರನ್ನು ಬರಮಾಡಿಕೊಂಡು ಅವರನ್ನು ಮೆಚ್ಚುಗೆಯ ಮಾತನಾಡಿ ಗೌರವಿಸಿದರು.
ವಿದ್ಯಾರ್ಥಿನಿಯರ ಸಾಧನೆ ಕಂಡು ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಭೀಮಾಶಂಕರ ಸಿ.ಬಿಲಗುಂದಿಯವರು ಅಭಿನಂದಿಸಿದ್ದಾರೆ.