ಕಲಬುರಗಿ: ಎಮ್.ಎಸ್. ಇರಾಣಿ ಪದವಿ ಮಹಾವಿದ್ಯಾಲಯದಲ್ಲಿ ಚುನಾವಣೆ ಸಾಕ್ಷರತಾ ಜಾಗೃತಿ ಅಭಿಯಾನದ ಅಡಿಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಚುನಾವಣಾ ಸಾಕ್ಷರತಾ ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಹಾಗೂ ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಡಾ. ಎಸ್.ಡಿ. ಬರ್ದಿ ಮಾತನಾಡುತ್ತ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು, ನಾವುಗಳು ಯವುದೆ ಆಸೆಗೆ ಒಳಗಾಗದೆ ಮತದಾನ ಮತ್ತು ಚುನಾವಣಾ ಪ್ರಕ್ರೀಯೆಯಲ್ಲಿ ಪಾಲ್ಗೊಳಲು ವಿದ್ಯಾಥಿಗಳಿಗೆ ಕರೆಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜಶೇಖರ ಬೀರನಳ್ಳಿ ಮಾತನಾಡುತ್ತ ಸಂವಿಧಾನದಲ್ಲಿ ಪ್ರತಿಯೊಬ್ಬ 18 ವರ್ಷ ತಂಬಿದ ಎಲ್ಲಾ ಭಾರತೀಯರು ತಮ್ಮ ಕ್ಷೇತ್ರ ವ್ಯಾಪ್ತಿಯೊಳಗೆ ಮತದಾನ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಯಾವ ರೀತಿ ನೊಂದಾಯಿಸಿಕೊಳ್ಳಬೇಕೆಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ರೊ. ಆರ್.ಎಸ್. ಹಿಳ್ಳಿ, ಡಾ. ಶರಣಕುಮಾರ ಮಾಶಾಳ, ಪ್ರೊ. ಎಸ್.ಎಂ. ಕೋಟನೂರ, ಡಾ. ನೀಲಕಂಠ ಎಸ್. ವಾಲಿ, ಡಾ. ಜಯಶ್ರೀ ಬಡಿಗೇರ, ಮತಮತು ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತ ಡಾ. ಪ್ರಾಣೇಶ ಶಾಂತಾರಾಮ ನಿರ್ವಹಿಸಿದರು ಮತ್ತು ವಂದನಾರ್ಪಣೆಯನ್ನು ಡಾ. ಶಂಕ್ರಪ್ಪ ಕೆ. ನೆರೆವೇರಿಸಿದರು.