ಶಹಾಬಾದ: ನಾಲ್ಕು ತಿಂಗಳ ಬಾಕಿ ವೇತನ ಬಿಡುಗಡೆ ಮತ್ತು ವೇತನ ಹೆಚ್ಚಳವಾದ ಬಾಕಿ ಹಣ ಬಿಡುಗಡೆ, ಗ್ಯಾಸ್ ಸಿಲಿಂಡರ್ ಪೂರೈಕೆ, ತರಕಾರಿ ಬಿಲ್ 4 ದಿನದ ಒಳಗಾಗಿ ವೇತನ ಪಾವತಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಸ್ಥಳೀಯ ಅಧಿಕಾರಿಗಳ ಮೂಲಕ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಹಾಬಾದ ವಲಯದಲ್ಲಿ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಸುಮಾರು 4 ತಿಂಗಳಿಂದ ವೇತನ ಜಮೆಯಾಗಿಲ್ಲ. ಆದರೆ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರದ ಕಾರ್ಯಕರ್ತೆಯರಿಗೆ ವೇತನ ಪಾವತಿಯಾಗಿದೆ. ಆದರೆ ಶಹಾಬಾದ್ ವಲಯದ ಕಾರ್ಯಕರ್ತೆಯರಿಗೆ ಮಾತ್ರ ವೇತನ ಜಮೆಯಾಗದಿರುವುದು ತಾರತಮ್ಯ ನೀತಿ, ಹಾಗೂ ನೋವಿನ ಸಂಗತಿಯಾಗಿದೆ.
ಇದರಿಂದ ವೇತನ ಬಗ್ಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಕೇಳಿದರೆ ಶಹಾಬಾದ್ ತಾಲ್ಲೂಕು ಪಂಚಾಯಿತಿ ಕಚೇರಿ ಅಕೌಂಟ್ ಗೆ ಜಮೆಯಾಗಿದೆ. ನಾನು ಜವಾಬ್ದಾರಿ ಅಲ್ಲ ಎನ್ನುತ್ತಾರೆ. ಆದರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕೇಳಿದರೆ ನಿಮ್ಮ ವೇತನ ನಮ್ಮ ಇಲಾಖೆ ಮಾಡುವುದಿಲ್ಲ ಎಂದು ಈ ರೀತಿ ಒಬ್ಬರ ಜವಾಬ್ದಾರಿ ಇನ್ನೊಬ್ಬರ ಮೇಲೆ ಹಾಕಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸತಾಯಿಸುತ್ತಿದ್ದಾರೆ.
ಇದರಿಂದ ಅವರ ಕುಟುಂಬ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಮಕ್ಕಳ ಕಲಿಕೆಗೆ ಹಣ ಇಲ್ಲದೆ ಶಾಲೆ ಬಿಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಾರ್ಯಕರ್ತೆಯರ ಮತ್ತು ಸಹಾಯಕಿಯರ 4 ತಿಂಗಳ ಬಾಕಿ ವೇತನ ಕೂಡಲೇ ಬಿಡುಗಡೆ ಮಾಡಬೇಕು. ಹಾಗೆ ಕಾರ್ಯಕರ್ತೆಯರಿಗೆ ಈಗಾಗಲೇ ವೇತನ ಹೆಚ್ಚಳವಾಗಿದೆ. ಅದರಿಂದ ಹೆಚ್ಚಳವಾದ ಹಣ ಬಿಡುಗಡೆ ಮಾಡಬೇಕು. ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡದ ಪರಿಣಾಮ. ಸಾಲ ಮಾಡಿ ಸಿಲೆಂಡರ್ ಖರೀದಿಸಿ, ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದೆವೆ.
ಇದರಿಂದ ಗ್ಯಾಸ್ ಸಿಲಿಂಡರ್ ಪೂರೈಕೆ ಮತ್ತು ಸಿಲಿಂಡರ್ ಖರೀದಿಸಿದ ಹಣ ಜಮೆ ಮಾಡಬೇಕು. ಹಾಗೆ ತರಕಾರಿ ಬಿಲ್ ಪಾವತಿಸುವಂತೆ ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಹಾಬಾದ್ ಕಚೇರಿ ಎದುರು ಈಗಾಗಲೇ ಪ್ರತಿಭಟನೆ ಮಾಡಲಾಗಿದೆ. ಆದರೂ ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ಸಮಸ್ಯೆ ಪರಿಹಾರ ಮಾಡಿಲ್ಲ. ಅಂಗನವಾಡಿ ಕೇಂದ್ರಗಳಿಗೆ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡದಿದ್ದರೆ ಅಂಗನವಾಡಿ ಕೇಂದ್ರದಲ್ಲಿ ಹೊಲೆ ಉರಿಯುವುದಿಲ್ಲ.
ಸಂಪೂರ್ಣ ಕೇಂದ್ರ ಬಂದ್ ಮಾಡುತ್ತೇವೆ. ಆದ್ದರಿಂದ ನಾಲ್ಕು ದಿನಗಳ ಒಳಗಾಗಿ ಅಧಿಕಾರಿಗಳು ವೇತನ ಪಾವುತಿ ಮಾಡಬೇಕು. ಇಲ್ಲದಿದ್ದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಹಾಬಾದ್ ಕಚೇರಿ ಎದುರು ಡಿ.21 ರಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಎಂದು ಈ ಮೂಲಕ ತಮ್ಮ ಗಮನಕ್ಕೆ ತರುತ್ತೇವೆ.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕಾಧ್ಯಕ್ಷೆ ಸಾಬಮ್ಮ ಎಮ್.ಕಾಳಗಿ, ನಗರಾಧ್ಯಕ್ಷೆ ಮೈತ್ರಾ ತಳವಾರ, ಕಾರ್ಯದರ್ಶಿ ಶೇಖಮ್ಮ ಕುರಿ ಇತರರು ಇದ್ದರು.