ಕಲಬುರಗಿ: ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ ಡಿಪ್ಲೋಮೋ (DPSE English Medium) ತರಬೇತಿ ಪಡೆದಿರುವ ಆಭ್ಯರ್ಥಿಗಳಿಗೆ ಕೆಪಿಎಸ್ ಶಾಲೆಗಳಲ್ಲಿ ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿ ಡಿ.ಪಿಎಸ್ಇ ಶಿಕ್ಷಕರ ವೇದಿಕೆ ವತಿಯಿಂದ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ವಿದ್ಯಾರ್ಥಿಗಳು 2019-20 ನೇ ಸಾಲಿನಿಂದ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಹೊಸದುರ್ಗ ಹಾಗೂ ಕಲಬುರ್ಗಿಗಳಲ್ಲಿ ಆಂಗ್ಲ ಮಾಧ್ಯಮದಲ್ಲಿಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ ಡಿಪ್ಲೋಮೋ ಕೋರ್ಸನ್ನು ಆರಂಭಿಸಿರುವುದು ಸರಿಯೆಷ್ಟೇ. ಕಳೆದ 03 ಶೈಕ್ಷಣಿಕ ವರ್ಷಗಳಿಂದ ಸದರಿ ಸಂಸ್ಥೆಗಳಿಂದ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಕೋರ್ಸ್ ತೇರ್ಗಡೆ ಹೊಂದಿ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕ/ಶಿಕ್ಷಕಿಯರಾಗಲು ಅರ್ಹತೆ ಹೊಂದಿದ್ದಾರೆ.
ಆದರೆ ತರಬೇತಿ ಮುಗಿಸಿದ ಎಲ್ಲಾ ಶಿಕ್ಷಕರು ನಿರುದ್ಯೋಗಿಗಳಾಗಿ ಉಳಿದಿದ್ದು, ಬದುಕು ಅತಂತ್ರಕ್ಕೆ ಸಿಲುಕಿದ್ದು, ಜೀವನ್ನೋಪಾಯ ಸಂಕಷ್ಟಕ್ಕೆ ಸಿಲುಕಿದೆ. ತರಬೇತಿ ಮುಗಿಸಿರುವ ಅಭ್ಯರ್ಥಿಗಳನ್ನು ತಕ್ಷಣ ಕೆ.ಪಿ.ಎಸ್ ಶಾಲೆಗಳಲ್ಲಿ ನೇಮಕ ಮಾಡಿಕೊಳ್ಳುವ ಮೂಲಕ ಮಕ್ಕಳ ಮತ್ತು ಶಿಕ್ಷಕರ ಭವಿಷ್ಯವನ್ನು ಕಾಪಾಡಬೇಕೆಂದು ಮೊಹಮ್ಮದ್ ಗೌಸ್ ವಿಖಾರ್ ಮನವಿ ಮಾಡಿದ್ದಾರೆ.
ಆಶಾ, ಸನಾ, ದೀಬಾ, ನೇಹಾ ಮಹೀನ್, ಶಾಕೇರಾ, ಅಯೇಷಾ, ಶಹೇಬಾಜ್, ಅಹ್ಮದ್ ಸೇರಿದಂತೆ ಹಲವರು ಈ ವೇಳೆಯಲ್ಲಿ ಉಪಸ್ಥಿತರಿದ್ದರು.