ನಿವೃತ್ತಿ ವೃತ್ತಿಗೆ ಹೊರತು ಮನಸ್ಸಿಗಲ್ಲ

0
20

ಕಲಬುರಗಿ: ಸೇವೆಗೆ ಸೇರಿದ ಮೇಲೆ ನಿಯಮದಂತೆ ಒಂದು ನಿರ್ಧಿಷ್ಟ ವಯಸ್ಸಿಗೆ ವೃತ್ತಿಯಿಂದ ನಿವೃತ್ತಿಯಾಗಬೇಕು. ಇದು ವೃತ್ತಿಗೆ ನಿವೃತ್ತಿಯೇ ಹೊರತು, ಮನಸ್ಸಿಗಲ್ಲ. ಮನಸ್ಸು ಖುಷಿಯಾಗಿದ್ದರೆ ಅದಕ್ಕೆ ನಿವೃತ್ತಿ ಎಂಬುದು ಇರುವುದಿಲ್ಲ. ಅದಕ್ಕೆ ನಿವೃತ್ತರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಮನಸ್ಸಿಗೆ ನಿವೃತ್ತಿಯಾಗದಂತೆ ನೋಡಿಕೊಂಡರೆ ನಿವೃತ್ತಿ ಜೀವನ ನಿಜಕ್ಕೂ ಅರ್ಥಪೂರ್ಣವಾಗಿರಲು ಸಾಧ್ಯವಾಗುತ್ತದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ ಮಾರ್ಮಿಕವಾಗಿ ಹೇಳಿದರು.

ನಗರದ ಶಹಾಬಜಾರದ ಮಹಾದೇವ ನಗರದಲ್ಲಿರುವ ‘ಶಿವಾ ಮತ್ತು ಸ್ವಾತಿ ಪ್ರೌಢಶಾಲೆ’ಯ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ವು ಶನಿವಾರ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ನಿವೃತ್ತ ನೌಕರರ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ನಾನು ನಿವೃತ್ತಯ ನಂತರ ಬಸವೇಶ್ವರ ಸಮಾಜ ಸೇವಾ ಬಳಗದ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿದ್ದರಿಂದ ಸದಾ ಉಲ್ಲಾಸಿತನಾಗಿರುತ್ತೇನೆ ಎಂದು ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.

Contact Your\'s Advertisement; 9902492681

ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ, ನಿವೃತ್ತ ಮುಖ್ಯ ಶಿಕ್ಷಕಿ ಜಗದೇವಿ ಆರ್.ಪವಾಡಶೆಟ್ಟಿ ಮಾತನಾಡಿ, ನಿವೃತ್ತರು ತಮ್ಮ ಅನುಭವ, ಮಾರ್ಗದರ್ಶನ ಮಾಡಬೇಕು. ವೃತ್ತಿಯಲ್ಲಿ ಶೃದ್ಧೆ, ಪ್ರಾಮಾಣಿಕತೆ, ಬದ್ಧತೆ ಇರಲಿ. ಉತ್ತಮ ಸೇವೆಯಿಂದ ಆತ್ಮತೃಪ್ತಿ ದೊರೆಯುವುದರ ಜೊತೆಗೆ ರಾಷ್ಟ್ರ ಅಭಿವೃದ್ಧಿಯಾಗುತ್ತದೆ. ನಿವೃತ್ತಿ ಪಿಂಚಣಿ ಇಳಿವಯಸ್ಸಿನಲ್ಲಿ ಆಧಾರವಾಗಿದ್ದು, ಎಲ್ಲರಿಗು ದೊರೆಯಬೇಕು. ಯೋಗ, ಧ್ಯಾನ, ವ್ಯಾಯಮದ ಮೂಲಕ ದೇಹ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವುದರಿಂದ ಮನಸ್ಸು ಕ್ರೀಯಾಶೀಲವಾಗಿರುತ್ತದೆ. ತಾಳ್ಮೆ, ನೆಮ್ಮದಿಯಿಂದ ಜೀವನ ಸಾಗಿಸಬೇಕು ಎಂದು ತಿಳಿಸಿದರು.

ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಿ.ಗಾರಂಪಳ್ಳಿ, ಸಹ ಶಿಕ್ಷಕರಾದ ಲಕ್ಷ್ಮೀ ತಾಂಡೂರಕರ್, ಚಂದ್ರಲೇಖಾ ಪೂರ್ಮಕರ್, ಪ್ರೀತಿ ಜೆ.ಬಿರಾದಾರ, ಸಾವಿತ್ರಿ ಎನ್.ಪಾಟೀಲ, ಈಶ್ವರಿ ಹಂಗರಗಿ, ಸ್ವಾತಿ ಆರ್.ಪವಾಡಶೆಟ್ಟಿ ಹಾಗೂ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here