ಸಕಾರಾತ್ಮಕ ಬದುಕು, ಧನಾತ್ಮ ಚಿಂತನೆ ಅಗತ್ಯ

0
26

ಕಲಬುರಗಿ: ಸಕಾರಾತ್ಮಕ ಬದುಕು ಹಾಗೂ ಧನಾತ್ಮಕ ಚಿಂತನೆಯಿಂದ ಮಾನವನಾಗಲು ಸಾಧ್ಯವಿದೆ ಎಂದು ಲೇಖಕಿ ಕಾವ್ಯಶ್ರೀ ಮಹಾಗಾಂವಕರ್ ಅಭಿಪ್ರಾಯಪಟ್ಟರು.

ನಾವದಗಿ ಸಮೀಪವಿರುವ ಸಾಂಸ್ಕøತಿಕ ಲೋಕದ ದೇಶಿಕೇಂದ್ರ ವಸತಿ ಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಕಮಲಾಪುರ ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ಲಿಂ. ಶರಣಮ್ಮ ಲಿಂ.ವೀರಭದ್ರಪ್ಪ ಅಕ್ಕೋಣೆ ಸ್ಮಾರಕ ದತ್ತಿ  ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

Contact Your\'s Advertisement; 9902492681

ಭಾರತ ಒಂದು ಕಾಲದಲ್ಲಿ ವಿಶ್ವಕ್ಕೆ ಗುರುವಾದ ದೇಶ ಇಲ್ಲಿ ಅನೇಕ ಮಹಾತ್ಮರು ಸಾಧು, ಸಂತರು ಬಾಳಿ ಬದುಕಿದ ದೇಶವಾಗಿದೆ. ಇಂತಹ ನೆಲದಲ್ಲಿ ಹುಟ್ಟಿರುವ ನಾವೆಲ್ಲರೂ ನಿಜಕ್ಕೂ ಸುದೈವಿಗಳು ಆದರೆ ಇಂದು ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾಗಿ ಧರ್ಮ, ಆಚಾರ, ವಿಚಾರ, ಸಂಸ್ಕೃತಿ, ಪರಂಪರೆ ಎಲ್ಲವನ್ನೂ ಮರೆತು ಅರ್ಥಹೀನ, ಉದ್ದೇಶವಲ್ಲದ ಖಾಲಿ ಕೊಡದಂತಹ ಜೀವನ ಸಾಗಿಸುತ್ತಿದ್ದು, ಹಣ ಹಾಗೂ ಅಧಿಕಾರದ ಬೆನ್ನು ಹಿಂದೆ ಬಿದ್ದು ತಾನು ಎಲ್ಲಿರುವೆವು ಎಂಬುದನ್ನು ಸಹ ಮರೆತುಬಿಟ್ಟಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ ಡಾ. ರಾಜೇಂದ್ರ ಯರನಾಳೆ  ಮಾತನಾಡಿ, ಮನುಷ್ಯ ತನ್ನಲ್ಲಿರುವ ದುರ್ಗುಣಗಳನ್ನು ತೊಡೆದುಹಾಕಿ ಉತ್ತಮ ಸಂಸ್ಕಾರಗಳನ್ನಾಗಿಸಲು ಸದಾ ವಚನ ಸಾಹಿತ್ಯ ಅಧ್ಯಯನ ಅಗತ್ಯ ಎಂದು ತಿಳಿಸಿದರು.

ಡಾ. ತೀರ್ಥ ಕುಮಾರ ಬೆಳಕೋಟಾ, ದತ್ತಿ ದಾಸೋಹಿಗಳಾದ ಅಪ್ಪಾರಾವ ಅಕ್ಕೋಣೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಶರಣಬಸಪ್ಪ ವಡ್ಡನಕೇರಿ, ಶಿವಾನಂದ ದಟ್ಟಿ ಉಪಸ್ಥಿತರಿದ್ದರು. ಭುವನೇಶ್ವರಿ ದಟ್ಟಿ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here