ಅಧಿವೇಶನದಲ್ಲಿ ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡುವ ಬಗ್ಗೆ ಚರ್ಚೆ ನಡೆಯಲಿ

0
47

ಕಲಬುರಗಿ: ಬೆಳಗಾವಿ ಚಳಿಗಾಲ ಅಧಿವೇಶನವು ಅನಗತ್ಯ ಚರ್ಚೆಗಳಿಗೆ ಕಲಾಪ ಬಲಿಯಾಗುವ ಬದಲು ರಾಜ್ಯ ಅಭಿವೃದ್ಧಿಯ ದೃಷ್ಟಿಯಿಂದ ವಿಷಯವನ್ನು ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲೆ೦ದು ಅಖಿಲ ಭಾರತ ಯುವಜನ ಫೆಡರೇಶನ್ ಎಐವೈಎಫ್ ಕಲಬುರಗಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಹಣಮಂತರಾಯ ಎಸ್‌.ಅಟ್ಟೂರ ಆಗ್ರಹಿಸಿದ್ದಾರೆ.

ವಿಶೇಷವಾಗಿ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸಿರುವುದಕ್ಕಾಗಿ ಬೆಳಗಾವಿ ಅಧಿವೇಶನ ನಡೆಸುತ್ತಿರುವುದು ಸಂತೋಷದ ವಿಷಯ. ಈ ಭಾಗದಲ್ಲಿ ವಿದ್ಯಾರ್ಥಿ, ಯುವಜನರ, ರೈತರ, ಕಾರ್ಮಿಕರ ಹಲವಾರೂ ಸಮಸ್ಯೆಗಳಿಂದ ಪರದಾಡುತ್ತಿದ್ದಾರೆ. ಇವರ ಸಮಸ್ಯೆಗಳನ್ನು  ಚರ್ಚಿಸಿ ನಿರ್ಣಯ ತೆಗೆದುಕೊಳ್ಳಬೇಕಾಗಿ ಮನವಿ ಮಾಡಿಕೊಂಡರು.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಭಾಗದ ಹಲವಾರು ಯುವಕರು ಉದ್ಯೋಗವಿಲ್ಲದೆ ಬೀದಿ ಪಾಲಾಗಿದ್ದಾರೆ ಈ ಭಾಗದಲ್ಲಿ ಹಲವಾರು ಇಲಾಖೆಗಳಲ್ಲಿ ಖಾಲಿ ಹುದ್ದೆಗಳಿವೆ.ಈ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಮೂಲಕ ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡಬೇಕು.

ಈ ಭಾಗದ ಮುಖ್ಯ ಬೆಳೆಯಾದ ತೊಗರಿ ಬೆಳೆಯನ್ನು ನೆಟೆ ರೋಗ ಬಂದು ಪೂರ್ತಿ ಬೆಳೆ ನಾಶವಾಗಿ ರೈತರ ಸ್ಥಿತಿ ಅದೋಗತಿಯಲ್ಲಿದೆ. ಸರ್ಕಾರ ರೈತರಿಗೆ ಬೇಗ ಪರಿಹಾರ ನೀಡುವ ಮೂಲಕ ನೊಂದ ರೈತರಿಗೆ ಕೈ ಹಿಡಿಯುವ ಕಾರ್ಯ ಮಾಡಲಿ ಎಂದರು.

ಈ ಭಾಗದಲ್ಲಿ ಬಂದಿರುವ ಹಲವಾರು ಯೋಜನೆಗಳು ಕೈ ಬಿಟ್ಟಿರುವುದು,ಅಲ್ಲದೆ ಬೇರೆ ಕಡೆ ವರ್ಗಾವಣೆ ಆಗಿರುವುದು ವಿಷಾದಕರ ಸಂಗತಿ ಬರುವ ದಿನಗಳಲ್ಲಿಯಾದರೂ ಹಲವಾರು ಹೊಸ ಹೊಸ ಯೋಜನೆಗಳ ತಂದು ಯುವಕರಿಗೆ ಉದ್ಯೋಗ ನೀಡುವ ಕಾರ್ಯ ಮಾಡಿ ಈ ಭಾಗದ ಅಸಮಾನತೆ ಹೋಗಲಾಡಿಸಬೇಕು ಎಂದು ಒತ್ತಾಯ ಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here